ಒಬ್ಬ ಗಂಡನಿಂದ ಇನ್ನೊಬ್ಬ ಗಂಡನ ಬಳಿಗೆ ಹೋಗುವ ಮುನ್ನ “ದ್ರೌಪದಿ” ಕನ್ಯತ್ವವನ್ನು ಮತ್ತೆ ಪಡೆಯಲು ಏನು ಮಾಡುತ್ತಿದ್ದಳು ಗೊತ್ತಾ.?

ಹಿಂದೂ ಪುರಾಣಗಳಲ್ಲಿ ಮಹಾಭಾರತಕ್ಕೆ ಇರುವ ಪ್ರಾಮುಖ್ಯತೆ ಅಷ್ಟಿಷ್ಟಲ್ಲ. ನಾವು ಚಿಕ್ಕಂದಿನಿಂದ ಮಹಾಭಾರತವನ್ನು ಅನೇಕ ಸಂದರ್ಭಗಳಲ್ಲಿ ತಿಳಿದುಕೊಳ್ಳುತ್ತಲೇ ಇದ್ದೇವೆ. ಮಹಾಭಾರತ ಗಾಥೆಗೆ ಸೇರಿದ ಅನೇಕ ಪುಸ್ತಕಗಳನ್ನು ಓದುತ್ತಿದ್ದೇವೆ. ಟಿವಿ ಸೀರಿಯಲ್ಸ್, ಥಿಯೇಟರ್‌ಗಳಲ್ಲಿ ಸಿನಿಮಾಗಳನ್ನು ನೋಡುತ್ತಿದ್ದೇವೆ. ಆದರೆ ಎಷ್ಟೇ ನೋಡಿದರೂ, ಓದಿದರೂ ನಮಗೆ ಇನ್ನೂ ಮಹಾಭಾರತ ಬಗ್ಗೆ ಗೊತ್ತಿಲ್ಲದ ಅನೇಕ ವಿಷಯಗಳು ಇವೆ. ಅವುಗಳಲ್ಲಿ ಒಂದು ವಿಚಾರದ ಬಗ್ಗೆ ನಾವೀಗ ಹೇಳಲಿದ್ದೇವೆ. ಅದೂ ಸಹ ದ್ರೌಪದಿಗೆ ಸಂಬಂಧಿಸಿದ್ದು. ಆಕೆಗೆ ಸಂಬಂಧಿಸಿದಂತೆ ಬಹಳಷ್ಟು ಮಂದಿಗೆ ಗೊತ್ತಿಲ್ಲದ ವಿಷಯಗಳನ್ನು ತಿಳಿದುಕೊಳ್ಳೋಣ.

1. ಪುರಾಣ ಕಾಲದಲ್ಲಿ ಒಬ್ಬ ಮಹಿಳೆ ತನಗೆ ಅನ್ಯಾಯ ನಡೆದರೆ ಬಾಯ್ತೆರೆದು ಕೇಳುತ್ತಿರಲಿಲ್ಲ. ಮೌನವಾಗಿ ಅದನ್ನು ಭರಿಸುತ್ತಿದ್ದಳು. ಆದರೆ ದ್ರೌಪದಿ ಮಾತ್ರ ಆ ರೀತಿ ಅಲ್ಲ. ತನಗೆ ಅನ್ಯಾಯ ನಡೆದರೆ ಪ್ರತಿ ಸಂದರ್ಭದಲ್ಲೂ ಆಕೆ ಬಾಯ್ತೆರೆದು ತನ್ನ ಧ್ವನಿ ಕೇಳಿಸುತ್ತಿದ್ದಳು. ಯಾರಿಗೆ, ಯಾವಾಗ, ಎಲ್ಲೂ ಆಕೆ ಭಯಬೀಳಲಿಲ್ಲ. ಇದು ಆಕೆಯಲ್ಲಿರುವ ಧೈರ್ಯ ಗುಣಕ್ಕೆ ನಿದರ್ಶನ.

2. ದ್ರೌಪದಿಗೆ ಯಜ್ಞಸೇನ ಎಂದು ಇನ್ನೊಂದು ಹೆಸರಿತ್ತು. ಅದು ಯಾಕೆ ಬಂತೆಂದರೆ.. ಆಕೆ ಎಲ್ಲರೂ ಜನಿಸಿದಂತೆ ತಾಯಿ ಹೊಟ್ಟೆಯಲ್ಲಿ ಬೆಳೆದು ಜನಿಸಲಿಲ್ಲ. ಆಕೆ ಯುಕ್ತ ವಯಸ್ಸಿನಲ್ಲಿ ಇದ್ದ ಕನ್ಯೆಯಾಗಿ ನೇರವಾಗಿ ಅಗ್ನಿಯಿಂದ ಜನಿಸಿದಳು. ಆದಕಾರಣ ಆಕೆಯನ್ನು ಯಜ್ಞಸೇನ ಎಂದು ಕರೆಯುತ್ತಾರೆ.

3. ಮಹಾ ಕಲಿ ತನ್ನ ಬಳಿಕ ಜನ್ಮದಲ್ಲಿ ದ್ರೌಪದಿಯಾಗಿ ಜನಿಸಿದ ಎಂದು ದಕ್ಷಿಣ ಭಾರತದಲ್ಲಿ ಬಹಳಷ್ಟು ಮಂದಿ ನಂಬುತ್ತಾರೆ. ಆ ರೀತಿ ಜನಿಸಿ ದ್ರೌಪದಿ ಕೌರವರನ್ನು ನಾಶ ಮಾಡಲು, ಶ್ರೀಕೃಷ್ಣನಿಗೆ ಸಹಾಯ ಮಾಡಲು ಬಂದರೆಂದು ಹೇಳುತ್ತಾರೆ.

4. ಒಂದು ದಿನ ಧರ್ಮರಾಜ ಪಾದರಕ್ಷೆಗಳನ್ನು ಕೋಣೆಯ ಹೊರಗೆ ಬಿಟ್ಟಿದ್ದಾಗ ನಾಯಿಯೊಂದು ಬಾಯಲ್ಲಿ ಕಚ್ಚಿಕೊಂಡು ಓಡಿಹೋಯಿತಂತೆ. ಇದರಿಂದ ಕೋಪಗೊಂಡ ದ್ರೌಪದಿ ನಾಯಿಗಳಿಗೆ ಶಪಿಸುತ್ತಾಳೆ. ಇನ್ನು ಯಾವಾಗ ಶೃಂಗಾರದಲ್ಲಿ ಪಾಲ್ಗೊಂಡರೂ ನಾಯಿಗಳು ಬಹಿರಂಗವಾಗಿ ಜನರೆಲ್ಲರೂ ನೋಡುತ್ತಿದ್ದಂತೆ ಶೃಂಗಾರದಲ್ಲಿ ಪಾಲ್ಗೊಳ್ಳುತ್ತಾವೆಂದು ಶಾಪ ಹಾಕಿದಳು.

5. ದ್ರೌಪದಿ ಪಾಂಡವರ ಜತೆಗೆ ಬೆರೆತು ಒಳ್ಳೆಯ ಗೃಹಿಣಿ ಎಂದು ಕರೆಸಿಕೊಂಡಿದ್ದಳು. ಆಕೆ ಅಡುಗೆಕೋಣೆಯಲ್ಲಿ ವಸ್ತುಗಳನ್ನು ಯಾವಾಗಲೂ ತುಂಬಿಸಿಕೊಂಡಿರುತ್ತಿದ್ದರಂತೆ. ಹಾಗಾಗಿ ಅತಿಥಿಗಳು ಎಷ್ಟೇ ಮಂದಿ ಬಂದರೂ, ಯಾವಾಗ ಬಂದರೂ ಅಡುಗೆ ಮಾಡಿ ಹಾಕುತ್ತಿದ್ದರು. ಆ ರೀತಿ ಆಕೆ ಒಳ್ಳೆಯ ಗೃಹಿಣಿ ಎಂದುಕರೆಸಿಕೊಂಡಿದ್ದರು.

6. ದ್ರೌಪದಿಗೆ ಒಂದು ವರ ಇತ್ತು. ಅದೇನೆಂದರೆ.. ಆಕೆ ತನ್ನ ಗಂಡನೊಂದಿಗೆ ಸಂಭೋಗಿಸಿದರೂ ಎಂದಿಗೂ ಕನ್ಯೆಯಾಗಿಯೇ ಇರುತ್ತಿದ್ದಳು. ಒಬ್ಬ ಗಂಡನನ್ನು ಬಿಟ್ಟು ಇನ್ನೊಬ್ಬ ಗಂಡನ ಬಳಿಗೆ ಹೋಗುವಾಗ ಆಕೆ ಅಗ್ನಿಯಿಂದ ನಡೆಯುತ್ತಿದ್ದಳಂತೆ. ಇದರಿಂದ ಮತ್ತೆ ಆಕೆ ಕನ್ಯೆಯಾಗಿ ಬದಲಾಗುತ್ತಿದ್ದರಂತೆ.

7. ತುಂಬಿದ ಸಭೆಯಲ್ಲಿ ದ್ರೌಪದಿಗೆ ಕೌರವರಿಂದ ವಸ್ತ್ರಾಪರಣ ನಡೆದದ್ದು, ವಿರಾಟ ರಾಜನ ಆಸ್ಥಾನದಲ್ಲಿ ಇದ್ದಾಗ ಕೀಚಕನ ಕೈಲಿ ಅವಮಾನ ಅನುಭವಿಸಿದಂತಹ ಘಟನೆಗಳಿಂದ ದ್ರೌಪದಿಗೆ ತನ್ನ ಐದುಮಂದಿ ಗಂಡಂದಿರ ಮೇಲೆ ನಂಬಿಕೆ ಹೋಯಿತಂತೆ. ಹಾಗಾಗಿ ಆ ಎರಡು ಘಟನೆಗಳ ಬಳಿಕ ದ್ರೌಪದಿ ತನ್ನ ಗಂಡಂದಿರನ್ನು ಅಷ್ಟಾಗಿ ನಂಬುವುದನ್ನು ಬಿಟ್ಟುಬಿಟ್ಟಳಂತೆ.

8. ಭೀಮನ ಪತ್ನಿ ಹಿಡಿಂಬಿಗೆ ಜನಿಸಿದ ಪುತ್ರನು ಘಟೋತ್ಕಚ. ಆತನ ಬಗ್ಗೆ ದ್ರೌಪದಿ ಒಮ್ಮೆ ಕೋಪಗೊಳ್ಳುತ್ತಾ ಆತನನ್ನು ಶಪಿಸಿದಳಂತೆ. ಇದರಿಂದ ಅದನ್ನು ನೋಡಿದ ಹಿಡಿಂಬಿ ತನ್ನ ಮಗನಿಗೆ ಶಾಪ ಹಾಕುತ್ತೀಯ ಎಂದು ದ್ರೌಪದಿಯನ್ನು ಶಪಿಸಿದಳಂತೆ. ಆ ರೀತಿ ಪಾಂಡವರ ಪತನ ಆರಂಭವಾಗುತ್ತದಂತೆ.

9. ದ್ರೌಪದಿ ಪಾಂಡವರ 5 ಮಂದಿಯನ್ನು ಮಾಡಿಕೊಂಡಾಗ ಅವರಿಗೆ ಒಂದು ಷರತ್ತು ಹಾಕುತ್ತಾಳಂತೆ. ಅದೇನೆಂದರೆ.. ತನ್ನ ಗಂಡ ಇತರೆ ಮಹಿಳೆಯನರೊಂದಿಗೆ ಸಂಬಂಧಗಳನ್ನು ಇಟ್ಟುಕೊಳ್ಳಬಾರದೆಂದು ಹೇಳಿದಳಂತೆ. ಆದರೂ ಪಾಂಡವರು ಐದುಮಂದಿ ತನ್ನ ಪತ್ನಿ ದ್ರೌಪದಿ ಅಲ್ಲದೆ ಇತರೆ ಸ್ತ್ರೀಯರ ಜತೆ ಸಂಬಂಧ ಇಟ್ಟುಕೊಂಡು ಮಕ್ಕಳನ್ನು ಹೆರುತ್ತಾರೆ.

10. ದ್ರೌಪದಿ ಯಾರೊಂದಿಗೂ ಸ್ನೇಹ ಮಾಡುತ್ತಿರಲಿಲ್ಲವಂತೆ. ಕೇವಲ ಕೃಷ್ಣನೊಂದಿಗೆ ಮಾತ್ರ ಸ್ನೇಹದಿಂದ ಇರುತ್ತಿದ್ದಳು. ಯಾಕೆಂದರೆ ಕೃಷ್ಣನು ವಸ್ತ್ರಾಪಹರಣದಲ್ಲಿ ದ್ರೌಪದಿಗೆ ಸೀರೆಗಳನ್ನು ನೀಡಿ ಸಹಾಯ ಮಾಡುತ್ತಾನೆ ಅಲ್ಲವೇ. ಹಾಗಾಗಿ ಕೃಷ್ಣನನ್ನು ತುಂಬಾ ನಂಬುತ್ತಿದ್ದಳು. ಆತನ ಜತೆ ಸ್ನೇಹದಿಂದ ಸಹೋದರಿಯಂತೆ ಇರುತ್ತಿದ್ದಳು.

SHARE