ಕಣ್ಣುಗಳನ್ನು ನೋಡಿ ಯಾರು ಯಾವ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಹೇಳಬಹುದು ಗೊತ್ತಾ..?

ಬೇರೆಯವರ ಮನಸ್ಸಿನಲ್ಲಿ ಎಂತಹ ಭಾವನೆಗಳು ಇವೆ ಎಂದು ಹೇಳಬೇಕೆಂದರೆ…ಅವರ ಕಣ್ಣುಗಳನ್ನು ನೋಡಿದರೆ ಸಾಕು. ಅವರಲ್ಲಿರುವ ಭಾವನೆಗಳನ್ನು ನಾವು ಸುಲಭವಾಗಿ ಹೇಳಬಹುದು. ಬೇರೆಯವರ ಕಣ್ಣುಗಳನ್ನು ನೋಡುವ ಮೂಲಕ ಆತ ಎಂತಹ ಮೂಡ್‌ನಲ್ಲಿ ಇದ್ದಾನೆ, ಏನು ಬಯಸುತ್ತಿದ್ದಾನೆ… ಇನ್ನಿತರೆ ವಿವರಗಳನ್ನು ಊಹಿಸಬಹುದು. ಇದು ನಿಜ ಕೂಡ. ಅವರ ಕಣ್ಣುಗಳನ್ನು ನೋಡುವ ಮೂಲಕ ಕೇವಲ ಮನಸ್ಸಿನ ಭಾವನೆಗಳನ್ನಷ್ಟೇ ಅಲ್ಲ.. ಅವರ ಅನಾರೋಗ್ಯ ಸಮಸ್ಯೆಗಳನ್ನೂ ಸಹ ಹೇಳಬಹುದು. ಹಾಗಿದ್ದರೆ ಅವು ಹೇಗೆ ಹೇಳಬಹುದು ಎಂಬುದನ್ನು ತಿಳಿದುಕೊಳ್ಳೋಣ..!

1. ಕಣ್ಣು ರೆಪ್ಪೆಗಳ ಮೇಲೆ ಕುರುಪುಗಳು ಬರುವುದು ಸಹಜ. ಅವು ಬರುತ್ತಿರುತ್ತವೆ, ಸ್ವಲ್ಪ ದಿನಗಳ ಬಳಿಕ ಹೋಗುತ್ತವೆ. ಆದರೆ ಎಷ್ಟು ದಿನಗಳಾದರೂ ಅವು ಹಾಗೆಯೇ ಇದ್ದರೆ ಆಗ ಅದನ್ನು ಅನುಮಾನಿಸಬೇಕು. ಅವು ಕಣ್ಣಿನ ಕ್ಯಾನ್ಸರ್‌ಗೆ ಚಿಹ್ನೆಗಳಿರಬಹುದು. ಹಾಗಾಗಿ ಯಾರಿಗೇ ಆಗಲಿ ಇಂತಹ ಕುರುಪುಗಳು ದಿನಗಟ್ಟಲೆ ಇದ್ದರೆ ಅವರು ನಿರ್ಲಕ್ಷ್ಯ ಮಾಡದೆ ಕೂಡಲೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಉತ್ತಮ.

2. ಕಣ್ಣಿನ ಹುಬ್ಬುಗಳಲ್ಲಿ ಕೂದಲು ಆಗಾಗ ಸಹಜವಾಗಿ ಯಾರಿಗೇ ಆಗಲಿ ಉದುರುತ್ತಿರುತ್ತವೆ. ಆದರೆ ಅದು ದಿನಗಟ್ಟಲೆ ಹಾಗೆಯೇ ಇದ್ದು ಕೂದಲು ಜಾಸ್ತಿ ಕಳೆದುಕೊಳ್ಳುತ್ತಿದ್ದರೆ ಮಾತ್ರ ಅನುಮಾನಿಸಬೇಕು. ಅದು ತೀವ್ರವಾದ ಥೈರಾಯಿಡ್ ಸಮಸ್ಯೆ ಆಗಿರಬಹುದು. ಕೂಡಲೆ ವೈದ್ಯರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸಿಕೊಂಡು ಅಗತ್ಯವಾದ ಔಷಧಿಗಳನ್ನು ಬಳಸಬೇಕು.

3. ಇಂದು ಕಂಪ್ಯೂಟರ್‌ಗಳ ಮುಂದೆ ಗಂಟೆಗಟ್ಟಲೆ ಕುಳಿತು ಮಾಡುವ ಉದ್ಯೋಗಗಳು ಹೆಚ್ಚಾಗಿವೆ. ಅಂತಹವರಿಗೆ ಒಮ್ಮೊಮ್ಮೆ ಯಾವ ವಸ್ತು ನೋಡಿದರೂ ಮಸುಕಾಗಿ ಕಾಣಿಸುತ್ತದೆ. ಇದು ಅವರ ತಪ್ಪಲ್ಲ. ಆದರೆ ನಿತ್ಯ ಪೌಷ್ಠಿಕ ಆಹಾರ ತೆಗೆದುಕೊಳ್ಳದಿರುವುದು, ವ್ಯಾಯಾಮ ಮಾಡುವಂತಹ ಕೆಲಸಗಳನ್ನು ಮಾಡಿದರೆ ಇಂತಹ ಸಣ್ಣಪುಟ್ಟ ಕಣ್ಣಿನ ಸಮಸ್ಯೆಗಳು ಬಾರದಂತೆ ಕಣ್ಣುಗಳನ್ನು ಕಾಪಾಡಿಕೊಳ್ಳಬಹುದು.

4. ಕಣ್ಣುಗಳನ್ನು ಮುಚ್ಚಿದರೂ, ತೆಗೆದರೂ, ಕಾಂತಿಯುತವಾದ ಲೈಟ್‌ಗಳು ಕಾಣಿಸುತ್ತಿದ್ದರೂ, ಅಥವಾ ತರಂಗಗಳು ಕಾಣಿಸುತ್ತಿದ್ದರೂ ಅದು ಮೈಗ್ರೇನ್ ತಲೆನೋವಿಗೆ ಚಿಹ್ನೆ ಆಗಿರಬಹುದು. ಅಂತಹವರು ಕೂಡಲೆ ವೈದ್ಯರನ್ನು ಭೇಟಿಯಾಗಬೇಕು.

5. ಹಲವು ಅನಾರೋಗ್ಯ ಸಮಸ್ಯೆಗಳು, ನಿದ್ದೆ ಕಡಿಮೆ ಮಾಡುವುದು, ಮದ್ಯಪಾನ ಮಾಡುವಂತಹ ಕಾರಣಗಳಿಂದ ಕಣ್ಣುಗಳು ಉಬ್ಬುತ್ತವೆ. ಆದರೆ ಇದ್ಯಾವುದೇ ಇಲ್ಲದೆ ಸುಖಾಸುಮ್ಮನೆ ಕಣ್ಣು ಊದಿಕೊಳ್ಳುತ್ತಿದ್ದರೆ ಥೈರಾಯಿಡ್ ಸಮಸ್ಯೆ ಇರಬೇಕೆಂದು ತಿಳಿದುಕೊಳ್ಳಬೇಕು. ಕೂಡಲೆ ವೈದ್ಯರನ್ನು ಸಂಪರ್ಕಿಸಬೇಕು.

6. ಕಣ್ಣು ಹಳದಿ ಬಣ್ಣಕ್ಕೆ ಬದಲಾದರೆ ಜಾಂಡೀಸ್ ಬಂದಿದೆ ಎಂದರ್ಥ. ಇದು ಎಲ್ಲರಿಗೂ ಗೊತ್ತಿರುವುದೇ. ಇಂತಹ ಸ್ಥಿತಿಯಲ್ಲಿ ವೈದ್ಯರ ಸೂಚನೆ ಮೇರೆಗೆ ಔಷಧಿಗಳನ್ನು ಬಳಸಿ ಪೌಷ್ಠಿಕಾಹಾರ ತೆಗೆದುಕೊಂಡರೆ ಒಳ್ಳೆಯದು.

7. ಡಯಾಬಿಟೀಸ್ ಸಮಸ್ಯೆ ಇರುವವರಿಗೆ ಕಣ್ಣುಗಳು ಮಸುಕಾಗಿ ಕಾಣಿಸುತ್ತಿದ್ದರೆ ಅದನ್ನು ಡಯಾಬಿಟೀಸ್ ರೆಟಿನೋಪತಿಯಾಗಿ ಗುರುತಿಸಬೇಕು. ಅಂತಹವರು ಡಯಾಬಿಟೀಸ್ ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸಬೇಕು. ಇಲ್ಲದಿದ್ದರೆ ಅಂಧತ್ವ ಬರುತ್ತದೆ.

8. ದೃಷ್ಟಿ ಕ್ರಮೇಣ ಕುಗ್ಗುವುದು, ಒಂದೇ ವಸ್ತು ಅಥವಾ ಮನುಷ್ಯ ಇಬ್ಬರಾಗಿ ಕಾಣಿಸುವುದು ಅಥವಾ ಕಾಣಿಸದೆ ಇರುವಂತಹ ಸಮಸ್ಯೆಗಳು ಇದ್ದರೆ ಹಾರ್ಟ್ ಅಥವಾ ಬ್ರೆಯಿನ್ ಸ್ಟ್ರೋಕ್ ಬರುತ್ತದೆ ಎಂದು ತಿಳಿದುಕೊಳ್ಳಬೇಕು. ಇಂತಹ ಸ್ಥಿತಿಯಲ್ಲಿ ಯಾವುದೇ ರೀತಿಯೂ ತಡಮಾಡಬಾರದು.. ಕೂಡಲೆ ವೈದ್ಯರನ್ನು ಸಂಪರ್ಕಿಸಬೇಕು.

SHARE