ಬಂದೆ ಬಿಡ್ತು ಹೈ ಆಕ್ಟೇನ್ ಪೆಟ್ರೋಲ್ !! ಇದರ ಬೆಲೆ, ವಿಶೇಷತೆ ತಿಳ್ಕೊಳಿ

ದೇಶದಲ್ಲೇ ಮೊದಲ ಬಾರಿಗೆ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಯು ಹೈ ಆಕ್ಟೇನ್( 99-ಆಕ್ಟೇನ್) ಪೆಟ್ರೋಲ್ ಮಾದರಿಯನ್ನು ಇದೀಗ ದೇಶಿಯ ಮಾರುಕಟ್ಟೆಗೂ ಪರಿಚಯಿಸಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆಯನ್ನು ರೂ.100 ಗಳಿಗೆ ನಿಗದಿ ಮಾಡಲಾಗಿದೆ. ಇದು ಸಾಮಾನ್ಯ ಮಾದರಿಯ ಪೆಟ್ರೋಲ್‌ಗಿಂತ ಹೆಚ್ಚಿನ ಗುಣಮಟ್ಟ ಹೊಂದಿರಲಿದ್ದು, ಕಾರಿನ ಎಂಜಿನ್ ಕಾರ್ಯಕ್ಷಮತೆಗೆ ಸಹಕಾರಿಯಾಗಲಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಏನು ಇದರ ಸ್ಪೆಶಾಲಿಟಿ ?

ಹೈ-ಆಕ್ಟೇನ್ ಪೆಟ್ರೋಲ್ ಮಾದರಿಯನ್ನು ಬಳಕೆ ಮಾಡುತ್ತಾ ಬಂದಲ್ಲಿ ಎಂಜಿನ್ ಡ್ಯಾಮೇಜ್ ಸಮಸ್ಯೆಯಿಂದ ಮುಕ್ತಿ ಸಿಗಲಿದ್ದು, ವಾಹನಗಳಿಂದ ಇಂಗಾಲದ ಹೊರಸೂಸುವಿಕೆಯ ಪ್ರಮಾಣವು ಸಾಮಾನ್ಯ ಪೆಟ್ರೋಲ್‌ಗಿಂತ ಅಧಿಕ ಮಟ್ಟದಲ್ಲಿ ಇಳಿಕೆ ಇರುತ್ತೆ. ಇನ್ನೊಂದು ಪ್ರಮುಖ ವಿಚಾರ ಅಂದ್ರೆ ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತಿರುವ ಹೈ-ಆಕ್ಟೇನ್ ಪೆಟ್ರೋಲ್ ಮಾದರಿಯಿಂದ ಕಾರಿನ ಮೈಲೇಜ್ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಬದಲಾಗಿ ಕಾರಿನ ಎಂಜಿನ್ ಪರ್ಫಾಮೆನ್ಸ್ ಇತರೆ ಕಾರುಗಳಿಂತ ಉತ್ತಮವಾಗಿದೆ.

ಹೈ-ಆಕ್ಟೇನ್ ಫ್ಯೂಲ್ ಮಾದರಿಯು ದುಬಾರಿ ಬೆಲೆಯ ಕಾರುಗಳ ಮತ್ತು ದುಬಾರಿ ಬೆಲೆಯ ಬೈಕ್‌ಗಳ ಎಂಜಿನ್ ಕಾರ್ಯಕ್ಷಮತೆಯನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಲಿದ್ದು, ಎಂಜಿನ್ ಆಯಷ್ಯ ಕೂಡಾ ಹೆಚ್ಚಲು ಸಹಕರಿಸಲಿದೆ.

ಹೈ-ಆಕ್ಟೇನ್ ಪೆಟ್ರೋಲ್ ಮಾದರಿಯು ಆಟೋ ಮೊಬೈಲ್ ಉದ್ಯಮದಲ್ಲಿ ‘ಪವರ್ 99’ ಎಂದೇ ಜನಪ್ರಿಯವಾಗಿದ್ದು, ಬೆಂಗಳೂರು ಮತ್ತು ಪುಣೆಯಲ್ಲಿ ಈಗಾಗಲೇ ಹೈ-ಆಕ್ಟೇನ್ ಪೆಟ್ರೋಲ್ ಮಾದರಿಯು ಆಯ್ದ ಹಿಂದೂಸ್ತಾನ್ ಪೆಟ್ರೋಲ್ ಬಂಕ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಜೊತೆಗೆ ಹೈ-ಆಕ್ಟೇನ್ ಪೆಟ್ರೋಲ್ ಮಾದರಿಯನ್ನು ಕೇವಲ ಸೂಪರ್ ಕಾರುಗಳಿಗೆ ಮಾತ್ರವಲ್ಲದೇ ಇತರೆ ಸಾಮಾನ್ಯ ಪೆಟ್ರೋಲ್ ಕಾರುಗಳಲ್ಲೂ ಸಹ ಬಳಕೆ ಮಾಡಬಹುದಾಗಿದ್ದು, ಕುತೂಹಲ ಇದ್ದಲ್ಲಿ ನೀವು ಕೂಡಾ ಒಂದು ಬಾರಿ ಹೈ-ಆಕ್ಟೇನ್ ಪೆಟ್ರೋಲ್ ಬಳಕೆ ಮಾಡಿ ನಮ್ಮೊಂದಿಗೆ ಅನುಭವ ಹಂಚಿಕೊಳ್ಳಿ….

SHARE