ಅಸಿಡಿಟಿ ಮಾತ್ರೆಗಳನ್ನು ಬಳಸುತ್ತಿದ್ದೀರಾ..? ಹಾಗಿದ್ದರೆ ಇದನ್ನೊಮ್ಮೆ ಓದಿ..!

ಜಿಹ್ವಾ ಚಾಪಲ್ಯ…ಮನುಷ್ಯನನ್ನು ಏನು ಬೇಕಾದರೂ ತಿನ್ನುವಂತೆ ಮಾಡುತ್ತದೆ. ಇತ್ತೀಚೆಗೆ ಟಿವಿಗಳಲ್ಲಿ, ಪತ್ರಿಕೆಗಳಲ್ಲಿ ಬರುತ್ತಿರುವ ವಿಭಿನ್ನ ರುಚಿಯ ಅಡುಗೆಗಳ ಮೂಲಕ ಜನರ ಅಭಿರುಚಿ ಸಹ ಬದಲಾಗಿದೆ. ಮನೆಯ ತಿಂಡಿ ಕಡಿಮೆ ಮಾಡಿ ಹೊರಗಿನ ತಿಂಡಿ ಹೆಚ್ಚು ತಿನ್ನುತ್ತಿದ್ದಾರೆ. ಇದರ ಮೂಲವಾಗಿ ಸ್ಥೂಲಕಾಯ ಹೆಚ್ಚುತ್ತಿದೆ. ಫಂಕ್ಷನ್‌ಗಳು, ಪಾರ್ಟಿಗಳಲ್ಲಿ ಬಿರ್ಯಾನಿ, ಚಿಕನ್, ಮಟನ್, ಫಿಶ್ ಜತೆಗೆ 20 ರೀತಿಯ ಆಹಾರ ಪದಾರ್ಥಗಳನ್ನು ಹೊಟ್ಟೆಗೆ ಇಳಿಸುತ್ತಿದ್ದಾರೆ. ಆದರೆ ತಿಂದ ಬಳಿಕ ಹೊಟ್ಟೆ ಉಬ್ಬರ ಆರಂಭವಾಗಿ ಅಸಿಡಿಟಿ ಸಮಸ್ಯೆ ಕಾಡುತ್ತಿದೆ.

 

ಆ ನೋವನ್ನು ನಿವಾರಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ಅಸಿಡಿಟಿ ಮಾತ್ರೆಗಳು, ಟಾನಿಕ್‌ಗಳು, ಪೌಡರ್‌ಗಳನ್ನು ಕುಡಿದು ಉಪಶಮನ ಪಡೆಯುತ್ತಿದ್ದಾರೆ… ಆದರೆ ಈ ಮಾತ್ರೆಗಳು ತುಂಬಾ ಅಪಾಯಕಾರಿ ಎಂದು ಇತ್ತೀಚೆಗೆ ಸಂಶೋಧನೆಯಲ್ಲಿ ಗೊತ್ತಾಗಿದೆ.

ಅಸಿಡಿಟಿ ಮಾತ್ರೆಗಳಿಂದ ದೀರ್ಘಕಾಲದಲ್ಲಿ ಮೂತ್ರಕೋಶಗಳಿಗೆ ಹೊಡೆತ ಬೀಳಲಿದ್ದು ಸಮಸ್ಯೆಗಳನ್ನು ಸೃಷ್ಟಿಸಲಿದೆ ಎಂದು ಅಮೆರಿಕ ಸಂಶೋಧಕರು ತಿಳಿಸಿದ್ದಾರೆ. ಅಮೆರಿಕಾದಲ್ಲಿನ ವಾಷಿಂಗ್ಟನ್ ಯೂನಿವರ್ಸಿಟಿ ಸಂಶೋಧಕರು ಮಾಡಿದ ಸಂಶೋಧನೆಯಲ್ಲಿ ಈ ಅಂಶಗಳು ಬೆಳಕು ಕಂಡಿವೆ. ಅಸಿಡಿಟಿ ಮಾತ್ರೆಗಳನ್ನು ಬಳಸುತ್ತಿದ್ದ ಸುಮಾರು 2,75,000 ಮಂದಿ ಮೇಲೆ ಇವರು ಸಂಶೋಧನೆ ಮಾಡಿದ್ದಾರೆ. ಅವರಲ್ಲಿ ಮರಣದ ಪ್ರಮಾಣವನ್ನು ಶೇ.50ರಷ್ಟು ಹೆಚ್ಚಿಸುತ್ತವೆ ಎಂದು ಗೊತ್ತಾಗಿದೆ.

ಅತಿಯಾಗಿ ತಿಂದು ಜೀರ್ಣವಾಗದದಿದ್ದರೆ ಮಾತ್ರೆಗಳನ್ನು ಹಾಕಿಕೊಳ್ಳುವವರು ಇನ್ನೂ ಹೆಚ್ಚು ಎಚ್ಚರಿಕೆಯಿಂದ ಇರಬೇಕೆಂದು ವೈದ್ಯರು ಸೂಚಿಸಿದ್ದಾರೆ. ಅಸಿಡಿಟಿಯಿಂದ ಕಿಡ್ನಿಗಳ ಕಾರ್ಯಕ್ಷಮತೆ ಮೇಲೆ ಪ್ರಭಾವ ಬೀರುತ್ತದೆ.. ಈ ಮೂಲಕ ಶೇ.50ರಷ್ಟು ಮರಣದ ಅಪಾಯವನ್ನು ಹೆಚ್ಚುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಹಾಗಾಗಿ ಇನ್ನು ಮುಂದೆ ಅಸಿಡಿಟಿ ಟ್ಯಾಬ್ಲೆಟ್‌ಗಳ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಉತ್ತಮ.

SHARE