ತಾಮ್ರದ ಪಾತ್ರೆಯಲ್ಲಿನ ನೀರು ಅಮೃತಕ್ಕೆ ಸಮಾನ ಅಂತಾರೆ ಯಾಕೆ ಗೊತ್ತಾ..?!

ರಾಗಿ ಅಥವಾ ತಾಮ್ರದ ಪಾತ್ರೆಯಲ್ಲಿನ ನೀರು ಕುಡಿದರೆ ಆರೋಗ್ಯಕ್ಕೆ ತುಂಬಾ ಒಳಿತಾಗುತ್ತದೆ ಎಂದು ಆಯುರ್ವೇದದಿಂದ ಹಿಡಿದು ಆಧುನಿಕ ವಿಜ್ಞಾನದ ತನಕ ಎಷ್ಟೋ ಮಂದಿ ಹೇಳುತ್ತಲೇ ಬಂದಿದ್ದಾರೆ. ಆದರೆ ಅದರಿಂದ ಏನೆಲ್ಲ ಆರೋಗ್ಯ ಪ್ರಯೋಜನಗಳಿವೆ? ಆ ರೀತಿ ಮಾಡುವುದರಿಂದ ನಮಗೆ ಗೊತ್ತಿಲ್ಲದೆ ಏನಾದರೂ ನಡೆಯುತ್ತದೆಯೇ? ಇದು ಪೂರ್ವಿಕರು ಕಂಡುಕೊಂಡ ಆರೋಗ್ಯ ರಹಸ್ಯವೇ? ಅಥವಾ ನಮ್ಮ ಹಿರಿಯರು ಕುರುಡಾಗಿ ಫಾಲೋ ಮಡುತ್ತಿರುವ ನಂಬಿಕೆಯೇ? ಇಂತಹ ಅದೆಷ್ಟೋ ಸಂದೇಹಗಳು ನಮ್ಮನ್ನು ನಿತ್ಯ ಕಾಡುತ್ತಿರುತ್ತವೆ.

ನೂತನ ಸಂಶೋಧಕ ರಾಬ್ ರೀಡ್ ಎಂಬ ಮೈಕ್ರೋ ಬಯಾಲಜಿಸ್ಟ್ ಪ್ಲಾಸ್ಟಿಕ್, ಮಣ್ಣು ಮತ್ತು ತಾಮ್ರದ ಪಾತ್ರೆಗಳಲ್ಲಿ ಕುಡಿಯಲು ಯೋಗ್ಯವಲ್ಲದ ಬ್ಯಾಕ್ಟೀರಿಯಾದಿಂದ ಕೂಡಿರುವ ನೀರನ್ನು ಹಾಕಿ, 48 ಗಂಟೆಗಳ ಬಳಿಕ ಆ ನೀರಿನ ಮೇಲೆ ಮಾಡಿದ ಸಂಶೋಧನೆ ಏನೆಂದರೆ… ತಾಮ್ರದ ಪಾತ್ರೆಯಲ್ಲಿ ಇಟ್ಟ ನೀರಿನಲ್ಲಿ ಬ್ಯಾಕ್ಟೀರಿಯಾ ಪ್ರಮಾಣ ಕಡಿಮೆಯಾಗಿತ್ತು, ಪ್ಲಾಸ್ಟಿಕ್ ಮತ್ತು ಮಣ್ಣಿನ ಪಾತ್ರೆಗಳಲ್ಲಿನ ಬ್ಯಾಕ್ಟೀರಿಯಾ ಪ್ರಮಾಣ ದುಪ್ಪಟ್ಟಾಗಿತ್ತು.

ತಾಮ್ರದ ಪಾತ್ರೆಯಲ್ಲಿನ ಶುದ್ಧ ನೀರಿನ ಬಗ್ಗೆ ಅಮೋಘವಾದ ವಿಷಯಗಳು ನಿಮಗಾಗಿ:

ಜೀರ್ಣ ವ್ಯವಸ್ಥೆಗೆ ಒಳ್ಳೆಯದು:
ತಾಮ್ರದ ಪಾತ್ರೆಯಲ್ಲಿನ ನೀರು ಕುಡಿಯುವುದರಿಂದ ಅಸಿಡಿಟಿ, ಗ್ಯಾಸ್, ಅಜೀರ್ಣದಂತಹ ಸಮಸ್ಯೆಗಳು ಅಲ್ಲದೆ, ನಿಮ್ಮ ಹೊಟ್ಟೆಗೆ ಹಾನಿಯುಂಟು ಮಾಡಿ ಪ್ರಾಣಾಂತಕವಾದ ಬ್ಯಾಕ್ಟೀರಿಯಾಗಳನ್ನು ನಿರ್ಮೂಲನ ಮಾಡುತ್ತದೆ. ಕಿಡ್ನಿ, ಲಿವರ್ ಚುರುಕಾಗಿ ಕೆಲಸ ಮಾಡುವಂತೆ ಮಾಡುತ್ತದೆ.

ತೂಕ ಕಡಿಮೆಯಾಗುತ್ತದೆ:
ನಾವು ಹೆಚ್ಚಿನ ತೂಕ ಕಳೆದುಕೊಳ್ಳಲು ನಾನಾ ರೀತಿಯ ಹಣ್ಣು, ತರಕಾರಿಯಂತಹವನ್ನು ತಿನ್ನುತ್ತಾ ಇರುತ್ತೇವೆ. ಅವುಗಳಿಂದ ಆಗುವ ಪ್ರಯೋಜನಕ್ಕಿಂತ, ಅದಕ್ಕೆ ಖರ್ಚು ಮಾಡುತ್ತಿರುವ ಹಣ ವ್ಯರ್ಥವಾಗುತ್ತಿದೆ ಎಂಬ ಭಯ ಜಾಸ್ತಿ. ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ಅದು ನಿಮ್ಮ ಜೀರ್ಣ ವ್ಯವಸ್ಥೆಯನ್ನು ಸೂಕ್ತ ಮಾರ್ಗದಲ್ಲಿ ನಡೆಸುವಂತೆ ಮಾಡಿ, ಕೊಬ್ಬು ಮತ್ತು ಇತರೆ ಕೆಟ್ಟ ಬ್ಯಾಕ್ಟೀರಿಯಾಗಳನ್ನು ದೇಹದಿಂದ ತೆಗೆಯುತ್ತದೆ.

ಗಾಯಗಳನ್ನು ಶೀಘ್ರ ಗುಣಪಡಿಸುತ್ತದೆ:
ತಾಮ್ರದಲ್ಲಿ ಇರುವ ಆಂಟಿ ಬ್ಯಾಕ್ಟೀರಿಯಾ ಗುಣ ದೇಹದಲ್ಲಿನ ಅನೇಕ ಗಾಯಗಳನ್ನು ವೇಗವಾಗಿ ಗುಣಪಡಿಸುವುದಷ್ಟೇ ಅಲ್ಲ ರೋಗನಿರೋಧಕ ವ್ಯವಸ್ಥೆಯನ್ನು ಉತ್ತಮಪಡಿಸುತ್ತದೆ. ದೇಹದ ಮೇಲಿನ ಗಾಯಗಳನ್ನು ಅಲ್ಲದೆ ಒಳಗೆ ಇರುವ ಗಾಯಗಳನ್ನೂ ಸಹ ಮುಖ್ಯವಾಗಿ ಹೊಟ್ಟೆಯಲ್ಲಿ ಇರುವ ಗಾಯಗಳನ್ನೂ ಕಡಿಮೆ ಮಾಡಲು ಸಹಕಾರಿ.

ನಿಮ್ಮ ವಯಸ್ಸನ್ನು ಮುಚ್ಚಿಡುತ್ತದೆ:
ಕೆಲವರು ಆರೋಗ್ಯವಾಗಿ ಎಷ್ಟೇ ಚುರುಕಾಗಿದ್ದರೂ ಅವರ ವಯಸ್ಸಾದವರಂತೆ ಕಾಣಿಸುತ್ತಿರುತ್ತಾರೆ. ಈ ಸಮಸ್ಯೆಯಿಂದ ನರಳುವವರು ಬಹಳಷ್ಟು ಮಂದಿ ಇದ್ದಾರೆ. ಇಂತಹವರು ತಾಮ್ರದಿಂದ ಉತ್ಪತ್ತಿಯಾಗುವ ಪ್ರಯೋಜನಗಳಿಂದ ಅವರ ಸಮಸ್ಯೆಯಿಂದ ವಿಮುಕ್ತಿ ಪಡೆಯಬಹುದು. ಮುಖದ ಮೇಲೆ ಇರುವ ಮಚ್ಚೆಗಳು, ಸುಕ್ಕುಗಳಂತಹವನ್ನು ತಾಮ್ರ ನಿವಾರಿಸುತ್ತದೆ.

ಕ್ಯಾನ್ಸರ್‌ ವಿರುದ್ಧ ಹೋರಾಡುತ್ತದೆ:
ತಾಮ್ರದಲ್ಲಿ ಇರುವ ಆಂಟಿ ಆಕ್ಸಿಡೆಂಟ್‌ಗಳು ಕ್ಯಾನ್ಸರ್‌ನಂಥಹ ಮಾರಣಾಂತಿಕ ಕಾಯಿಲೆಗಳಿಂದ ಕಾಪಾಡುತ್ತದೆ. ಅಮೆರಿಕನ್ ಕ್ಯಾನ್ಸರ್ ಸೊಸೈಟಿಯವರು ಮಾಡಿದ ಸಂಶೋಧನೆಗಳ ಪ್ರಕಾರ ತಾಮ್ರ ಕ್ಯಾನ್ಸರನ್ನು ಬರದಂತೆ ಮಾಡುತ್ತದೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ಆದರೆ ತಾಮ್ರ ನಿರಂತರ ಕ್ಯಾನ್ಸರನ್ನು ವ್ಯಾಪಿಸುವ ವೈರಸನ್ನು ತಡೆಯುವಲ್ಲಿ ಸಹಕಾರಿ ಎಂದು ಸಂಶೋಧನೆಗಳಿಂದ ಗೊತ್ತಾಗಿದೆ.

ಮಿದುಳನ್ನು ಚುರುಕಾಗಿಡುತ್ತದೆ:
ನಮ್ಮ ದೇಹದಲ್ಲಿ ಅತಿ ಮುಖ್ಯವಾದ ಅಂಗಗಳಲ್ಲಿ ಒಂದು ಮಿದುಳು. ಮಾನವನ ದೇಹದ ಪ್ರತಿಯೊಂದು ಭಾಗಕ್ಕೂ ಸಂಬಂಧ ಕಲ್ಪಿಸುವುದು ಮಿದುಳು. ಮಿದುಳಿನಿಂದ ಆಯಾ ಭಾಗಗಳಿಗೆ ನ್ಯೂರಾನ್‌ಗಳ ಮೂಲಕ ಸಂಕೇತಗಳು ಸಿಗುತ್ತವೆ. ಈ ನ್ಯೂರಾನ್‍ಗಳನ್ನು ಮೈಲಿನ್ ರಕ್ಷಿಸುತ್ತದೆ. ತಾಮ್ರದಲ್ಲಿ ಅಮೂಲ್ಯ ಪದಾರ್ಥಗಳು ಈ ಮೈಲಿನನ್ನು ಕಾಪಾಡುವುದರ ಜತೆಗೆ, ಮಿದುಳನ್ನು ಚುರುಕಾಗಿ, ಯೌವನವಾಗಿರುವಂತೆ ಮಾಡುತ್ತದೆ.

ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಪ್ರಕಾರ ತಾಮ್ರವನ್ನು ನಿತ್ಯ 12 ಮಿ.ಗ್ರಾಗಿಂತಲೂ ಹೆಚ್ಚು ತೆಗೆದುಕೊಳ್ಳುವ ಅಗತ್ಯವಿಲ್ಲ ಅಂದರೆ ತಾಮ್ರದ ಪಾತ್ರೆಯಲ್ಲಿ 8ಗಂಟೆಗಳ ಕಾಲ ಇಟ್ಟ ನೀರನ್ನು ನಿತ್ಯ 2 ರಿಂದ 3 ಸಲ ಕುಡಿದರೂ ಸಾಕು. ತಾಮ್ರ ಸರ್ವರೋಗ ನಿವಾರಣಿಯಾಗಿ ಕೆಲಸ ಮಾಡಿ ಮನುಷ್ಯನಿಗೆ ಆರೋಗ್ಯವನ್ನು ಪ್ರಸಾದಿಸುತ್ತದೆ. ವೈದ್ಯರಿಗೆ ಆಗುವ ಖರ್ಚನ್ನು ಉಳಿಸುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ತಾಮ್ರದ ಪಾತ್ರೆಯನ್ನು ಸೋಪಿನಿಂದ ಅಲ್ಲದೆ ಅರ್ಧ ಹೆಚ್ಚಿದ ನಿಂಬೆ ಹೋಳಿನಿಂದ ಅಡುಗೆ ಸೋಡಾ ಬಳಸಿ ಉಜ್ಜಿ ತೊಳೆದರೆ ಸಾಕು ಸ್ವಚ್ಚವಾಗುತ್ತದೆ.

SHARE