#ಬೀರ್ಬಲ್ ಬುದ್ಧಿವಂತಿಕೆ. ಮಾಂಸ ವ್ಯಾಪಾರಿ, ಎಣ್ಣೆ ವ್ಯಾಪಾರಿ ನಡುವೆ ಜಗಳ ಬೀರ್ಬಲ್ ಕೊಟ್ಟ ತೀರ್ಪು.

ಮಾಂಸದ ವ್ಯಾಪಾರಿಗೂ, ಎಣ್ಣೆ ವ್ಯಾಪಾರಿಗೂ ನಡುವೆ ತುಂಬಾ ದೊಡ್ಡ ಗಲಾಟೆ ನಡೆಯಿತು. ತಮಗೆ ನ್ಯಾಯ ಕೊಡಿಸಿ ಎಂದು ಇಬ್ಬರೂ ಅಕ್ಬರ್ ಬಳಿಗೆ ಹೋದರು. ಕೂಡಲೆ ಅಕ್ಬರ್ ಈ ಸಮಸ್ಯೆಯನ್ನು ಬೀರ್ಬಲ್‍ಗೆ ಒಪ್ಪಿಸಿ ಸಮಸ್ಯೆ ಪರಿಹರಿಸುವಂತೆ ಹೇಳಿದ. ಆಗ ಬೀರ್ವಲ್… ಇಷ್ಟಕ್ಕೂ ನಡೆದ್ದೇನು ಎಂದು ಕೇಳಿದ…

ಮಾಂಸದ ವ್ಯಾಪಾರಿ. ನಾನು ಮಾಂಸ ಮಾರಾಟ ಮಾಡುತ್ತಿದ್ದರೆ ಈ ಎಣ್ಣೆ ವ್ಯಾಪಾರಿ ನನ್ನ ಅಂಗಡಿಗೆ ಬಂದು ಎಣ್ಣೆ ಕೊಡುತ್ತೇನೆ ಎಂದ. ಪಾತ್ರೆ ತೆಗೆದುಕೊಂಡು ಬರಲು ಒಳಗೆ ಹೋದಾಗ ಈತ ನನ್ನ ನಾಣ್ಯದ ಸಂಚಿಯಿಂದ ಹಣ ತೆಗೆದುಕೊಂಡು ಅದು ನನ್ನದು ಎಂದು ಗಲಾಟೆ ಮಾಡುತ್ತಿದ್ದಾನೆ.

ಎಣ್ಣೆ ವ್ಯಾಪಾರಿ “ಇಲ್ಲ! ಆತ ಹೇಳಿದ್ದೆಲ್ಲಾ ಸುಳ್ಳು. ಆ ಸಂಚಿ ನನ್ನದೇ. ನಾನು ನಾಣ್ಯದ ಸಂಚಿಯಿಂದ ತೆಗೆದು ಲೆಕ್ಕ ಹಾಕುತ್ತಿದ್ದೆ. ಅದನ್ನು ನೋಡಿ ಈತ ದುರಾಸೆಯಿಂದ ನನ್ನ ಸಂಚಿಯನ್ನು ಕಬಳಿಸಲು ಪ್ರಯತ್ನಿಸುತ್ತಿದ್ದಾನೆ”

ಎಷ್ಟು ಸಲ ಕೇಳಿದರೂ ಇಬ್ಬರಿಂದಲೂ ಇದೇ ಉತ್ತರ. ಇದರಿಂದ ಬೀರ್ಬಲ್ ನೀರು ತುಂಬಿದ ಒಂದು ಬಕೆಟ್ ತರೆಸಿದ.. ಆ ಸಂಚಿಯಲ್ಲಿದ್ದ ನಾಣ್ಯಗಳನ್ನೆಲ್ಲಾ ಆ ಬಕೆಟ್‌ನಲ್ಲಿ ಹಾಕಿದ… ಆಗ ಆ ಪಾತ್ರೆಯಲ್ಲಿನ ನೀರಿನ ಮೇಲೆ ಎಣ್ಣೆಯ ಪದರ ತೇಲಾಡಿತು. ಇದರಿಂದ ಆ ನಾಣ್ಯಗಳು ಎಣ್ಣೆ ವ್ಯಾಪಾರಿಯದ್ದೇ ಎಂದು ನಿರ್ಧರಿಸಿದ.. ಮಾಂಸದ ವ್ಯಾಪಾರಿಗೆ ಕಠಿಣ ಶಿಕ್ಷೆಯಾಯಿತು.

SHARE