ಗೇಲ್ ಸಿಕ್ಸ್‌…ಕದ್ದು ಮ್ಯಾಚ್ ನೋಡುತ್ತಿದ್ದ ಪ್ರೇಮಿಗಳಿಗೆ ತಂತು ಆಪತ್ತು.!

ಏನೋ ಮಾಡಲು ಹೋಗಿ ಇನ್ನೇನು ಆಯಿತು ಅಂತಾರಲ್ಲ.. ಅದಕ್ಕೆ ನಿದರ್ಶನ ಇದು… ಸನ್ ರೈಸರ್ಸ್ ಹೈದರಾಬಾದ್‌ ವಿರುದ್ಧ ನಡೆದ ಮ್ಯಾಚ್‌ನಲ್ಲಿ ಗೇಲ್ ಹೊಡೆದ ಒಂದು ಸಿಕ್ಸರ್‌ಗೆ ಪ್ರೇಮದ ಜೋಡಿಯೊಂದು ಸಿಕ್ಕಿಬಿದ್ದಿದೆ.! ಹೈದರಾಬಾದಿನ ಒಂದು ಸಾಫ್ಟ್‌ವೇರ್ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಒಂದು ಪ್ರೇಮದ ಜೋಡಿ… ಹೈದರಾಬಾದ್ ಮ್ಯಾಚ್ ನೋಡಲು ಮೊಹಾಲ್ ಹೋಗಿತ್ತು. ಕ್ರಿಸ್ ಗೇಲ್ ಹೊಡೆದ ಸಿಕ್ಸರ್‌ಗಳಿಗೆ ಫಿದಾ ಆದರು… ಆದರೆ ಅದೆ ಸಿಕ್ಸರ್ ಅವರ ಪಾಲಿಗೆ ಮುಳುವಾಗಿದೆ.. ಮ್ಯಾಚ್‍ನ 7ನೇ ಓವರ್‌ನಲ್ಲಿ…..ಗೇಲ್ ಲಾಂಗಾನ್‌ನಲ್ಲಿ ಹೊಡೆದ ಸಿಕ್ಸರ್ ನೇರವಾಗಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಹೋಗಿ ಬಿತ್ತು. ಅದು ಮ್ಯಾಚ್‍ನಲ್ಲಿ ಹೈಲೈಟ್ ಸಿಕ್ಸರ್ ಆದ ಕಾರಣ ಟಿವಿಗಳಲ್ಲಿ ಪದೇಪದೇ ಅದೇ ಸಿಕ್ಸರ್ ತೋರಿಸಿದರು.. ದುರದೃಷ್ಟಕರ ಸಂಗತಿ ಏನೆಂದರೆ.. ಆ ಸಿಕ್ಸ್ ಆ ಪ್ರೇಮಿಗಳ ಬಳಿಯೇ ಬಂದು ಬಿತ್ತು… ಇನ್ನೇನು ಅಸಲಿ ಕಥೆ ಜಗಜ್ಜಾಹೀರಾಯಿತು… ಪದೇಪದೇ ರೀಪ್ಲೇ ತೋರಿಸಿದ ಕಾರಣ ಇವರಿಬ್ಬರ ಕಣ್ಣಾಮುಚ್ಚಾಲೆ ಬಯಲಾಗಿದೆ..! ಆಗಲೇ ಯುವತಿ ಮನೆಯರಿಂದ ಫೋನ್…? ಎಲ್ಲಿದ್ದೀಯಾ? ಎಂದು…ಎಸ್ ಎಂದಿನಂತೆ ಹಾಸ್ಟೆಲ್‌ನಲ್ಲಿ ಎಂದು ಆ ಯುವತಿ ಉತ್ತರ… ಸುಳ್ಳು ಹೇಳಬೇಡ ಯುವಕನೊಬ್ಬನ ಪಕ್ಕದಲ್ಲಿ ಕುಳಿತು IPL ನೋಡಲು ಪಂಜಾಬ್‌ಗೆ ಹೋಗಿದ್ದೀಯ… ನಿಮ್ಮಪ್ಪ ಟಿವಿಯಲ್ಲಿ ನೋಡಿದರು…ಬ್ಲಾ…ಬ್ಲಾ…ಬ್ಲಾ…ಬೈಗುಳ..!

ಮ್ಯಾಚ್ ಬಳಿಕ ಆ ಯುವತಿ ಮನೆಗೆ ಹೋಗಿ…ಮದುವೆ ಸಂಬಂಧ ಮಾತನಾಡಿದ್ದಾನೆ ಆ ಯುವಕ.. ನೋಡಬೇಕು ರಿಸಲ್ಟ್ ಏನಾಗುತ್ತದೋ..!!

watch video :

SHARE