ಇಂದಿನ ಭವಿಷ್ಯ: 01-06-2018

ಮೇಷ ರಾಶಿ
ಮನಃಕಾರಕ ಚಂದ್ರ ವ್ಯಯಸ್ಥಾನದಲ್ಲಿ ಸಂಚರಿಸುವ ಮೂಲಕ ಈ ದಿನ ಖಿನ್ನತೆಯನ್ನು ಹೆಚ್ಚು ಮಾಡುವರು. ಶಿವನ ಸ್ತುತಿ ಪಠಿಸಿರಿ. ಅಕ್ಕಿ ಮತ್ತು ಬೆಲ್ಲವನ್ನು ಹಸುವಿಗೆ ನೀಡಿರಿ ಮಹತ್ತರ ಕೆಲಸವನ್ನು ಮುಂದಕ್ಕೆ ಹಾಕುವುದು ಒಳ್ಳೆಯದು.

ವೃಷಭ ರಾಶಿ
ನೀವೇ ಮುಂದಾಗಿ ನಿಂತು ನಡೆಸುವ ಕೆಲಸಕ್ಕೆ ಮನಸ್ಸಿನ ಸಿದ್ಧತೆ ಬೇಕಾಗುವುದು. ಈ ದಿನ ಏಕಾಗ್ರತೆಯಿಂದ ಕೆಲಸವನ್ನು ಆರಂಭಿಸಿರಿ. ಮನೋಕಾಮನೆಗಳು ಪೂರ್ಣಗೊಳ್ಳುವುದು ಆದಷ್ಟು ಈ ದಿನ ತಾಳ್ಮೆಯಿಂದಿರಿ.

ಮಿಥುನ ರಾಶಿ
ಆರಾಧನಾ ದೃಷ್ಟಿಯಿಂದಲೇ ಅತಿಥಿಯನ್ನು ಸ್ವೀಕರಿಸಿರಿ ಮತ್ತು ಅವರ ಸೇವೆಯನ್ನು ಮಾಡಿರಿ. ಇದರಿಂದ ಈ ದಿನ ನಿಮ್ಮ ಮನಃಕ್ಷೋಭೆಯು ತಿಳಿಗೊಳ್ಳುವುದು. ಆರ್ಥಿಕ ಪರಿಸ್ಥಿತಿ ಸಾಧಾರಣವಿದ್ದು, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿರಿ.

ಕಟಕ ರಾಶಿ
ಕಚೇರಿಯ ಕೆಲಸ ಕಾರ್ಯಗಳನ್ನು ವಿವೇಚನೆಯಿಲ್ಲದೆ ಸರ್ರನೆ ಮಾಡಬೇಡಿ. ಇದರಿಂದ ಹೊಸ ಸಮಸ್ಯೆಯೊಂದು ಉದ್ಭವ ಆಗುವ ಸಾಧ್ಯತೆ. ಇದೆ ಹಾಗಾಗಿ ಇಂದು ಮಾಡುವ ಕೆಲಸವನ್ನು ಮುಂದೂಡುವುದು ಒಳ್ಳೆಯದು.

ಸಿಂಹ ರಾಶಿ
ಅಧಿಕ ಗಳಿಕೆಗೆ ಇಂದು ಶುಭ ದಿನವಾಗಿದೆ. ಅದು ಹಣಗಳಿಕೆಯಾಗಿರಬಹುದು, ಇಲ್ಲವೇ ವಿದ್ಯೆಯ ಗಳಿಕೆ ಆಗಿರಬಹುದು. ಇದರಿಂದ ಮಾನಸಿಕ ನೆಮ್ಮದಿ ದೊರೆಯಲಿದೆ ಮತ್ತು ಕೌಟುಂಬಿಕ ಜೀವನದಲ್ಲಿ ನೆಮ್ಮದಿಯ ವಾತಾವರಣ ಕಂಡು ಬರುವುದು.

ಕನ್ಯಾ ರಾಶಿ
ಅಪರೂಪದ ಚಂದ್ರ ಇಂದು ನಿಮಗೆ ಮನೋಬಲ ನೀಡಲಿದ್ದಾನೆ. ಹಾಗಾಗಿ ಇಂದಿನ ನಿಮ್ಮ ಕಾರ್ಯಗಳು ಅಡೆ-ತಡೆಯಿಲ್ಲದೆ ಮುಂದೆ ಸಾಗುವುದು. ಸಾರ್ವಜನಿಕ ಕ್ಷೇತ್ರಗಳಲ್ಲಿ ಸಂಘ ಸಂಸ್ಥೆಗಳಿಂದ ಸನ್ಮಾನ ದೊರೆಯುವ ಸಾಧ್ಯತೆ ಇರುವುದು.

ತುಲಾ ರಾಶಿ
ಕೆಲವು ನಾಟಕೀಯ ಘಟನೆಗಳು ನಿಮ್ಮ ಸುತ್ತಮುತ್ತ ನಡೆಯುವ ಸಾಧ್ಯತೆ ಇದ್ದು, ಅದನ್ನೇ ನಿಜವೆನ್ನುವ ಭ್ರಮೆಗೆ ಒಳಗಾಗುವಿರಿ. ಈ ಭ್ರಮಾಲೋಕದಿಂದ ಹೊರಬಂದಲ್ಲಿ ನೈಜ ಜೀವನದ ದರ್ಶನವಾಗುವುದು. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ.

ವೃಶ್ಚಿಕ ರಾಶಿ
ಅನೇಕ ರಕ್ಷ ಣಾವ್ಯೂಹಗಳನ್ನು ಹೆಣೆದು ಬಿಡಬೇಡಿರಿ. ದೇವಿ ಆರಾಧನೆಯ ಜತೆಗೆ ಆಂಜನೇಯ ಸ್ತೋತ್ರವನ್ನು ಪಠಿಸಿರಿ. ಪ್ರಯಾಣಕಾಲದಲ್ಲಿ ಎಚ್ಚರಿಕೆ ಅಗತ್ಯ. ಖರ್ಚಿಗೆ ತಕ್ಕಷ್ಟು ಹಣ ಬರುವುದರಿಂದ ಈ ದಿನ ತೊಂದರೆ ಇರುವುದಿಲ್ಲ.

ಧನಸ್ಸು ರಾಶಿ
ನೇರ ಮಾತುಗಾರರಾದ ನೀವು ಇಂದು ತಮಾಷೆಗಾಗಿ ಆಡಿದ ಮಾತಿನಿಂದ ಸಂಕಷ್ಟಕ್ಕೆ ಸಿಲುಕಿಕೊಳ್ಳುವಿರಿ. ಈ ಬಗ್ಗೆ ಎರಡು ಬಾರಿ ಚಿಂತಿಸಿ ಕಾರ್ಯಪ್ರವೃತ್ತರಾಗಿರಿ ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

ಮಕರ ರಾಶಿ
ಅಧಿಕ ಶ್ರಮಕ್ಕೆ ತಕ್ಕಷ್ಟು ಆದಾಯವೂ ಬರುವುದರಿಂದ ಈ ದಿನ ಹಣಕಾಸಿನ ತೊಂದರೆಯಿರುವುದಿಲ್ಲ. ಹೊಸದೇನೋ ಒಂದು ನಿಮ್ಮ ಜೀವನವನ್ನು ಪ್ರವೇಶಿಸಲಿದ್ದು, ಇದರಿಂದ ಉತ್ತಮವಾಗುವುದು. ನೆರೆಹೊರೆಯವರೊಂದಿಗೆ ಸ್ನೇಹದಿಂದ ವರ್ತಿಸಿರಿ.

ಕುಂಭ ರಾಶಿ
ಆರೋಗ್ಯದ ಎಚ್ಚರ ಇದ್ದರೆ ಸಾಕು. ಉಳಿದ ಕಿರಿಕಿರಿಗಳನ್ನು ನಿಯಂತ್ರಿಸಬಹುದು. ವಿಷ್ಣು ಸಹಸ್ರನಾಮ ಪಾರಾಯಣದಿಂದ ಸಂಕಷ್ಟ ಕಾರ್ಯಸಿದ್ಧಿಯ ಭಾವನಾತ್ಮಕ ದುಗುಡತೆಯಿಂದ ದೂರ ಉಳಿಯುವುದು ಒಳ್ಳೆಯದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಮೀನ ರಾಶಿ
ಉತ್ತಮವಾದ ವಿಚಾರದಲ್ಲಿ ಕ್ಲಿಷ್ಟತೆ ಇದ್ದರೂ ಸರಳವಾಗಿ ನಿಭಾಯಿಸಿಕೊಂಡು ಹೋಗುವ ಶಕ್ತಿಯನ್ನು ಭಗವಂತ ನಿಮಗೆ ಒದಗಿಸಿದ್ದಾನೆ. ನಿಮ್ಮಿಂದ ಮಾರ್ಗದರ್ಶನ ಪಡೆಯುವವರಿಗೆ ಬೇಕಾದ ನಿಮ್ಮ ಸಲಹೆ, ಸೂಚನೆಗಳನ್ನು ನೀಡಿರಿ.

SHARE