ಇಂದಿನ ಭವಿಷ್ಯ: 02-06-2018

ಮೇಷ ರಾಶಿ
ನಿಮ್ಮ ಮಾತಿಗೂ ಕೈಗೂ ಅಂತರವಿರದಿರಲಿ. ಗುರು ಮತ್ತು ಶನಿಗ್ರಹದ ಚಲನೆಯು ನಿಮಗೆ ಅಧಿಕ ಒತ್ತಡವನ್ನು ಇಂದು ನೀಡುವುದು. ಹಾಗಾಗಿ ಆದಷ್ಟು ತಾಳ್ಮೆಯಿಂದ ಇರಿ. ಕುಲದೇವತಾ ಪ್ರಾರ್ಥನೆ ಮಾಡಿರಿ.

ವೃಷಭ ರಾಶಿ
ಬೆನ್ನು ನೋವು ಅಥವಾ ಮಂಡಿ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ದಿನ ಕಾಲು ಕೆಜಿಯಷ್ಟು ತೊಗರಿಬೇಳೆಯನ್ನು ದಾನ ಮಾಡಿರಿ ಮತ್ತು ಸುಬ್ರಹ್ಮಣ್ಯ ಸ್ವಾಮಿಯ ಪ್ರಾರ್ಥನೆ ಮಾಡಿರಿ. ಸಂಗಾತಿಯ ಮಾತುಗಳಿಗೆ ಬೆಲೆ ಕೊಡುವುದು ಒಳ್ಳೆಯದು.

ಮಿಥುನ ರಾಶಿ
ಧೈರ್ಯಂ ಸರ್ವತ್ರ ಸಾಧನಂ ಎಂದರು ಹಿರಿಯರು. ಆ ಧೈರ್ಯವೇ ನಿಮ್ಮ ಬಹುದೊಡ್ಡ ಆಸ್ತಿ, ಹೊಸ ಚಿಗುರು ಹಳೇ ಬೇರು ಕೂಡಿರಲು ಮರ ಸೊಗಸು ಎನ್ನುವಂತೆ ಹಳೆಯ ವಿಚಾರಗಳು ಈ ದಿನ ನಿಮಗೆ ಮುದವನ್ನುಂಟು ಮಾಡುವುದು.

ಕಟಕ ರಾಶಿ
ಸಾಮಾಜಿಕ ಜೀವನದ ಹಿನ್ನೆಲೆಯಲ್ಲಿ ಇಂದು ನಿಮಗೆ ಗೌರವ ಆದರಗಳು ದೊರೆಯುವುದು. ಈ ವಿಚಾರವು ನಿಮ್ಮ ವಿರೋಧಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸುವುದು. ಜಯವಿರುವವರೆಗೂ ಭಯವಿಲ್ಲ. ಹಾಗಾಗಿ ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಿರಿ.

ಸಿಂಹ ರಾಶಿ
ಧರ್ಮ, ನ್ಯಾಯ ಹಾಗೂ ಸತ್ಯಗಳನ್ನು ರಕ್ಷಿಸುವುದೇ ನಿಮ್ಮ ಮೊದಲನೆಯ ಆದ್ಯತೆ ಆಗಿರುವುದು. ಹಾಗಿದ್ದರೂ ನಿಮ್ಮ ಕೈ ಕೆಳಗೆ ಕೆಲಸ ಮಾಡುವ ಜನರು ನಿಮ್ಮನ್ನು ತಪ್ಪಾಗಿ ಅರ್ಥೈಸಿಕೊಂಡು ಕೆಲಸದಿಂದ ದೂರು ಸರಿಯುವರು. ಗುರು ಮಂತ್ರ ಪಠಿಸಿರಿ.

ಕನ್ಯಾ ರಾಶಿ
ನಿಮ್ಮ ಸೇವೆಯ ರೀತಿ ನೀತಿಗಳಿಂದ ಪ್ರಭಾವಿತರಾದ ಜನರು ನಿಮ್ಮನ್ನೇ ಮುಂದಿನ ಮುಖಂಡನಾಗಬೇಕೆಂದು ಪ್ರಾರ್ಥಿಸುವರು. ಇದು ಶುಭ ಸಮಾಚಾರವೇ ಆದರೂ ನಿಮ್ಮ ವೈಯಕ್ತಿಕ ಕೆಲಸ ಕಾರ್ಯಗಳನ್ನು ಮಾಡಲು ಅಡ್ಡಿ ಉಂಟಾಗುವುದು.

ತುಲಾ ರಾಶಿ
ಕೆಲಸದ ಸ್ಥಳದಲ್ಲಿ ನಿಮ್ಮ ಹೆಗಲಿಗೆ ಹೊಸದೇ ರೀತಿಯ ಜವಾಬ್ದಾರಿಗಳು ಏರಲಿವೆ. ಅಂತೆಯೇ ಸಾಕಷ್ಟು ಒತ್ತಡವೂ ಉಂಟಾಗುವ ಸಾಧ್ಯತೆ ಇದೆ. ಹಣಕಾಸಿನ ವಿಷಯದಲ್ಲಿ ನಿಷ್ಠುರತೆಯನ್ನು ತೋರದಿದ್ದಲ್ಲಿ ಮಹತ್ತರ ಸಮಸ್ಯೆಗಳಿಗೆ ಸಿಲುಕಿಕೊಳ್ಳುವಿರಿ.

ವೃಶ್ಚಿಕ ರಾಶಿ
ವ್ಯರ್ಥವಾದ ಪ್ರಯತ್ನಗಳಿದ ಕಂಗೆಟ್ಟಿರುವ ನೀವು ಬೆಟ್ಟಿಂಗ್‌, ಜೂಜು ಇತ್ಯಾದಿಗಳಲ್ಲಿ ಹಣ ಹೂಡುವುದು ತರವಲ್ಲ. ಈ ದಿನ ಹಣವನ್ನು ಆದಷ್ಟು ಕಡಿಮೆ ಖರ್ಚು ಮಾಡುವುದು ಒಳ್ಳೆಯದು.

ಧನಸ್ಸು ರಾಶಿ
ನಿಮ್ಮ ಕೈ ಕೆಳಗಿನ ಕೆಲಸಗಾರರನ್ನು ಸಂತೋಷಪಡಿಸಿ. ಅದಕ್ಕೂ ಮುಖ್ಯವಾಗಿ ದೀನದಲಿತರಿಗಾಗಿ ಚಿತ್ರಾನ್ನವನ್ನು ನೀಡಿ ಜನ್ಮ ಶನಿಯ ಕಾಟದಿಂದ ಬಿಡುಗಡೆಯನ್ನು ಹೊಂದಿರಿ. ಹಣಕಾಸಿನ ಸ್ಥಿತಿ ಉತ್ತಮವಾಗುವುದು.

ಮಕರ ರಾಶಿ
ನೀವು ಸರಕಾರಿ ಕೆಲಸ ಕಾರ್ಯದಲ್ಲಿ ಉನ್ನತ ಹುದ್ದೆಯಲ್ಲಿದ್ದರೆ ಮುಂಬಡ್ತಿ ಇಷ್ಟರಲ್ಲೇ ದೊರೆಯುವ ಸಾಧ್ಯತೆ ಇರುತ್ತವೆ. ಇದಕ್ಕೆಲ್ಲ ನಿಮ್ಮ ಪ್ರಾಮಾಣಿಕತೆ, ಶ್ರಮ ಹಾಗೂ ಶ್ರದ್ಧೆಯೇ ಕಾರಣವಾಗುವುದು. ಅವರಿವರ ಮಾತುಗಳಿಗೆ ಕಿವಿಗೊಡದಿರಿ.

ಕುಂಭ ರಾಶಿ
ಕಳೆದು ಹೋಗಿದ್ದ ಅಥವಾ ನಿಮಗೆ ಬರಬೇಕಾದ ಹಣವು ಬರುವ ಸೂಚನೆಯಿಂದು ನಿಮಗೆ ತಲುಪುವುದು. ಇದರಿಂದ ನಿಮ್ಮ ಆರ್ಥಿಕ ಸಂಕಷ್ಟಕ್ಕೆ ತೆರೆಬೀಳಲಿದೆ. ಪ್ರತಿಭಾವಂತರಿಗೆ ಉತ್ತಮ ಅವಕಾಶಗಳು ಒದಗಿ ಬರುವುದು.

ಮೀನ ರಾಶಿ
ನಿಮ್ಮ ಕಾರ್ಯಾನುಭವ ಹಾಗೂ ಜಾಣತನ ಎಲ್ಲರ ಪ್ರಶಂಸೆಗೆ ಪಾತ್ರವಾಗಲಿದೆ. ಹಿರಿಯರ ಆರೋಗ್ಯದ ಬಗ್ಗೆ ವಿಶೇಷ ಗಮನವಿರಲಿ. ಏಕಾಂತನದಿಂದ ಹೊರ ಬರಲು ಉತ್ತಮ ಗ್ರಂಥಗಳ ಓದುವಿಕೆಯು ಸಹಕಾರಿಯಾಗುವುದು.

SHARE