ಇಂದಿನ ಭವಿಷ್ಯ: 12-03-2018

ಮೇಷ ರಾಶಿ
ತನ್ನ ಭಕ್ತರನ್ನು ಕಾಪಾಡುವ ಗುಣ ಭಗವಂತನದು. ಹಾಗಾಗಿ ಇಂದು ನಿಮಗೆ ನಿಮ್ಮ ಹಲವು ಇತಿಮಿತಿಗಳನ್ನು ತಿಳಿಸಿಕೊಡುವಂತಹ ಹಿರಿಯರೊಬ್ಬರನ್ನು ನಿಮ್ಮ ಬಾಳಿಗೆ ಕಳುಹಿಸಿಕೊಡುವನು. ಇದರಿಂದ ನಿಮ್ಮ ಜೀವನದಲ್ಲಿ ಮಹತ್ತರ ಬದಲಾವಣೆ ಆಗುವುದು.

ವೃಷಭ ರಾಶಿ
ಹಲವು ತಪ್ಪುಗಳು ನಿಮ್ಮನ್ನು ಪಾಪ ಪ್ರಜ್ಞೆಯಲ್ಲಿ ಬಾಧಿಸುವುದು. ಅದಕ್ಕಾಗಿ ಪಶ್ಚಾತ್ತಾಪವೇ ಪ್ರಾಯಶ್ಚಿತ್ತ. ಹಾಗಾಗಿ ನಿಮ್ಮ ತಪ್ಪುಗಳನ್ನು ಪ್ರಾಂಜ್ವಲ ಮನಸ್ಸಿನಿಂದ ಒಪ್ಪಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳಿರಿ.

ಮಿಥುನ ರಾಶಿ
ನೂತನ ಅಲಂಕಾರಿಕ ವಸ್ತುಗಳು ನಿಮ್ಮ ಮನೆಯನ್ನು ಅಲಂಕರಿಸುವವು. ಮಕ್ಕಳ ಆಟ-ಪಾಠಗಳು ನಿಮಗೆ ಮುದ ನೀಡುವುದು. ಸಂಗಾತಿಯ ಸಲಹೆಗಳನ್ನು ಸ್ವೀಕರಿಸಿ ಮುಂದುವರಿಯುವುದು ಒಳ್ಳೆಯದು.

ಕಟಕ ರಾಶಿ
ಇಂದು ನೀವು ಹೆಚ್ಚು ಮೌನವನ್ನು ಆಶ್ರಯಿಸುವುದು ಒಳ್ಳೆಯದು. ನಿಮ್ಮನ್ನು ದ್ವೇಷಿಸುತ್ತಿದ್ದವರೂ ಇಂದು ನಿಮಗೆ ಹತ್ತಿರವಾಗುವರು. ಮನೆ ಕಟ್ಟಲು ನಿವೇಶನ ಖರೀದಿಸಲು ಮನಸು ಮಾಡುವಿರಿ. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.

ಸಿಂಹ ರಾಶಿ
ದೂರದ ಪ್ರಯಾಣ ಒದಗಿ ಬರಲಿದೆ. ಅಂದುಕೊಂಡದ್ದನ್ನು ಮಾಡಲು ಹಿರಿಯರಿಂದ ಒಪ್ಪಿಗೆ ದೊರೆಯುವುದು. ಮಕ್ಕಳ ಹಠಮಾರಿತನವು ನಿಮಗೆ ಕೋಪವನ್ನುಂಟು ಮಾಡುವುದು. ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕಿರಿ.

ಕನ್ಯಾ ರಾಶಿ
ದೈವ ಕೃಪೆಯು ಇಂದು ನಿಮ್ಮ ಮೇಲಿದ್ದು ನೀವು ಮಾಡುವ ಕೆಲಸ-ಕಾರ್ಯಗಳೆಲ್ಲವೂ ಯಶಸ್ಸಿನತ್ತ ಸಾಗುವುದು. ಆದರೆ ಈ ಬಗ್ಗೆ ಹೆಚ್ಚು ಆತುರ ಬೇಡ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ.

ತುಲಾ ರಾಶಿ
ಕೋಪವೇ ನಿಮ್ಮ ಮೊದಲ ಶತ್ರು. ಅದನ್ನು ತಿಳಿದು ತಿಳಿದು ನೀವು ಮನೆಯ ಸದಸ್ಯರ ಮೇಲೆ ಕೋಪಗೊಳ್ಳುವುದರಿಂದ ಸಂಬಂಧಗಳಲ್ಲಿ ವಿರಸ ಮೂಡುವುದು. ಆದಷ್ಟು ತಾಳ್ಮೆಯಿಂದ ಇರಿ. ಶಿವನ ಜಪ ಮಾಡಿರಿ. ಇಲ್ಲವೇ ಮೌನ ತಾಳಿರಿ.

ವೃಶ್ಚಿಕ ರಾಶಿ
ರಣರಂಗದಲ್ಲಿನ ಅನುಭವ ಇಂದು ನಿಮ್ಮದಾಗುವುದು. ಕೆಲಸದ ಒತ್ತಡಗಳು ನಿಮ್ಮನ್ನು ಹೈರಾಣಾಗಿಸುವುದು. ಆದ್ಯತೆಯ ಮೇರೆಗೆ ಕೆಲವನ್ನು ಮಾಡಿರಿ. ಮನಸ್ಸಿನಲ್ಲಿ ಸದಾ ಆಂಜನೇಯ ಜಪವನ್ನು ಮಾಡಿರಿ.

ಧನಸ್ಸು ರಾಶಿ
ಅನಿರೀಕ್ಷಿತ ವ್ಯಕ್ತಿಗಳಿಂದ ಲಾಭ. ಕೆಲಸದಲ್ಲಿ ಜಾಗ್ರತೆ ವಹಿಸಿ. ಅಪರಿಚಿತ ವ್ಯಕ್ತಿಗಳ ಬಗ್ಗೆ ಹೆಚ್ಚಿನ ಒಲವು ಬೇಡ. ಗುರುವಿನ ಅನುಗ್ರಹ ಇರುವುದರಿಂದ ಗುರುವು ಸಕಾಲದಲ್ಲಿ ಎಚ್ಚರಿಕೆ ನೀಡುವರು.

ಮಕರ ರಾಶಿ
ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆ. ಆಂಜನೇಯ ಸ್ತೋತ್ರ ಪಠಿಸುವುದು ಒಳ್ಳೆಯದು. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಕೆಲವು ಹಿರಿಯ ಸಾಧಕರನ್ನು ಭೇಟಿ ಮಾಡುವಿರಿ.

ಕುಂಭ ರಾಶಿ
ನಿಮ್ಮ ಬುದ್ಧಿ ಸಾಮರ್ಥ್ಯ‌ದ ಬಗ್ಗೆ ನಿಮ್ಮ ಸುತ್ತಲಿನವರಿಗೆ ತಿಳಿಯಲಿದೆ. ಅವರೆಲ್ಲರೂ ನಿಮ್ಮ ಬುದ್ಧಿಮತ್ತೆಯನ್ನು ಮೆಚ್ಚುವರು. ಉದ್ಯೋಗಸ್ಥರಿಗೆ ಕೆಲಸದಲ್ಲಿ ಪ್ರಗತಿ ಸಿದ್ಧಿಯಾಗಲಿದೆ. ಈದಿನ ಬರುವ ವಾರ್ತೆಯು ಖುಷಿ ನೀಡುವುದು.

ಮೀನ ರಾಶಿ
ಖರ್ಚುವೆಚ್ಚಗಳಲ್ಲಿ ಬದಲಾವಣೆ ಉಂಟಾಗುವುದು. ಈದಿನ ಹಣಕಾಸಿನ ಮುಗ್ಗಟ್ಟನ್ನು ಎದುರಿಸುವಿರಿ. ಮನೆಯ ಸದಸ್ಯರ ಸಕಾಲಿಕ ನೆರವು ನಿಮಗೆ ನೆಮ್ಮದಿ ಮತ್ತು ಸಂತಸ ನೀಡುವುದು.

SHARE