ಇಂದಿನ ಭವಿಷ್ಯ: 16-05-2018

ಮೇಷ ರಾಶಿ
ಮಾತೃವರ್ಗದವರಿಂದ ಅಲ್ಪ ಕಿರಿಕಿರಿ ಆಗುವುದು. ಮಾತಿನ ಜಾಣ್ಮೆ ಹಾಗೂ ಹಿರಿತನದಿಂದಾಗಿ ಕುಟುಂಬದಲ್ಲಿನ ಬಿಗುವಿನ ವಾತಾವರಣವನ್ನು ದೂರ ಮಾಡಬಲ್ಲಿರಿ. ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಹರಿಸುವುದು ಒಳ್ಳೆಯದು.

ವೃಷಭ ರಾಶಿ
ಮಕ್ಕಳು ನಿಮ್ಮ ಮಾತನ್ನು ಕೇಳುತ್ತಿಲ್ಲ. ಅವರಿಗೆ ನಿಮ್ಮ ಮೇಲೆ ಪ್ರೀತಿ ಇಲ್ಲ ಎಂದು ನೊಂದುಕೊಳ್ಳದಿರಿ. ಕೆಲವರಿಗೆ ತಮ್ಮ ಪ್ರೀತಿ-ವಿಶ್ವಾಸವನ್ನು ಅಭಿವ್ಯಕ್ತಗೊಳಿಸುವ ಕ್ರಿಯೆ ಗೊತ್ತಿರುವುದಿಲ್ಲ. ಅಂತಹವರು ನಿಮ್ಮನ್ನು ಅಂತರಂಗದಿಂದ ಪ್ರೀತಿಸುವರು.

ಮಿಥುನ ರಾಶಿ
ಫಲಿತಾಂಶದ ಕಡೆಗೆ ತಲೆ ಕೆಡಿಸಿಕೊಳ್ಳದಿರಿ. ನಿಮ್ಮದು ಪರಿಶ್ರಮದ ಕೆಲಸವಾಗಿದ್ದರೆ ನಿಶ್ಚಿತವಾದ ಯಶಸ್ಸು ದೊರೆಯುವುದು. ಗುರುವಿನ ಕೃಪೆ ನಿಮ್ಮ ಮೇಲೆ ಇರುವುದರಿಂದ ಫಲಿತಾಂಶದ ಕಡೆಗೆ ಅನುಮಾನ ಬೇಡ.

ಕಟಕ ರಾಶಿ
ಕಷ್ಟಕಾಲದಲ್ಲಿಯೇ ನಿಜವಾದ ಗೆಳೆಯರ ಸ್ವಭಾವ ಗೊತ್ತಾಗುವುದು. ಹಾಗಾಗಿ ನಿಮ್ಮನ್ನು ಓಲೈಸಿ ನಿಮ್ಮಿಂದ ಸಹಾಯ ಪಡೆಯುವ ಗೆಳೆಯರು ಇಂದು ನಿಮ್ಮಿಂದ ದೂರವಾಗುವರು. ನಿಮ್ಮ ಕಾರ್ಯದಲ್ಲಿ ತಪ್ಪನ್ನು ತಿಳಿಸುವ ಸ್ನೇಹಿತರೆ ಇಂದು ಸಹಾಯ ಮಾಡುವರು.

ಸಿಂಹ ರಾಶಿ
ಕಠಿನ ಪರಿಶ್ರಮ ಬಿಟ್ಟರೆ ಅನ್ಯಮಾರ್ಗವಿಲ್ಲ. ಸರಳವಾದ ಪರಿಶ್ರಮವಿರದ ಪ್ರಯತ್ನದಿಂದ ಲಕ್ಷ್ಮೀಯು ಪ್ರಸನ್ನಳಾಗಬಹುದೆಂಬ ಭ್ರಮೆಯನ್ನು ಬಿಟ್ಟುಬಿಡಿ. ಸದ್ಯದ ಆರ್ಥಿಕ ಸಂಕಷ್ಟದ ಪರಿಸ್ಥಿತಿಯನ್ನು ನಿಭಾಯಿಸಲು ಹೆಚ್ಚು ಶ್ರಮ ಪಡಬೇಕಾಗುವುದು.

ಕನ್ಯಾ ರಾಶಿ
ಸಮಯ ಸಾಧಕರನ್ನು ಎಷ್ಟೆಂದು ದೂರ ಇಡುತ್ತೀರಿ? ಆದರೂ ನಿಮ್ಮ ತಾರ್ಕಿಕ ಹೆಜ್ಜೆಗಳು ಅವರಿಗೆ ಪಾಠವನ್ನು ಕಲಿಸುವುದು ಮತ್ತು ಅವರು ನಿಮ್ಮಿಂದ ದೂರ ಸರಿಯಲು ಸಹಕಾರಿಯಾಗುವುದು.

ತುಲಾ ರಾಶಿ
ದೂರದ ಊರಿಗೆ ಕ್ಷಿಪ್ರವಾದ ಪ್ರವಾಸ ಕೈಗೊಳ್ಳುವ ನಿರ್ಧಾರ ಮಾಡುವಿರಿ. ಇದರಿಂದ ಮಡದಿ ಮಕ್ಕಳು ಸಂತೋಷವನ್ನು ಹೊಂದುವರು. ನಿಮಗೂ ಕೂಡಾ ಯಾಂತ್ರಿಕ ಜೀವನದಿಂದ ಕೆಲಕಾಲ ವಿಶ್ರಾಂತಿ ದೊರೆಯುವುದು.

ವೃಶ್ಚಿಕ ರಾಶಿ
ವೈದ್ಯರ ಸಲಹೆ ಸೂಚನೆಗಳನ್ನು ಶಿಸ್ತಿನಿಂದ ಪರಿಪಾಲಿಸಿರಿ. ಇದರಿಂದ ವಿಮುಖರಾದರೆ ಕಷ್ಟವೇ ಎದುರಾಗುವುದು. ಈದಿನ ಹಣವು ನೀರಿನಂತೆ ಖರ್ಚಾಗುವುದು. ಅನಾವಶ್ಯಕ ವಾದ-ವಿವಾದಗಳಿಂದ ದೂರವಿರಿ.

ಧನಸ್ಸು ರಾಶಿ
ಹಳೆಯ ಕಬ್ಬಿಣ, ರದ್ದಿ ಪೇಪರ್‌ ಮತ್ತು ತ್ಯಾಜ್ಯ ವಸ್ತುಗಳ ವಿಲೇವಾರಿಯಿಂದ ಹಣಕಾಸು ಬರುವ ಸಾಧ್ಯತೆ ಇದೆ. ಈದಿನ ಶನೇಶ್ಚರ ದೇವಸ್ಥಾನದಲ್ಲಿ ಎಳ್ಳುದೀಪ ಹಚ್ಚಿ ಆತನ ಪ್ರಸನ್ನತೆಯನ್ನು ಪಡೆಯಿರಿ.

ಮಕರ ರಾಶಿ
ಯುದ್ಧದ ಮೊದಲೇ ಸೋಲುವ ಕುರಿತು ಚಿಂತಿಸದಿರಿ. ಮಾಡು ಇಲ್ಲವೆ ಮಡಿ ಎನ್ನುವ ಧ್ಯೇಯೋದ್ದೇಶದಿಂದ ಹೋರಾಟ ಮಾಡಿರಿ. ಯಶಸ್ಸು ದೊರೆತರೆ ಜನರು ಹರ್ಷಿಸುವರು. ಸೋತರೆ ಅದು ಜೀವನಕ್ಕೊಂದು ಪಾಠ ಆಗುವುದು.

ಕುಂಭ ರಾಶಿ
ಕಷ್ಟಪಡುವ ಮನಸ್ಸಿದೆ. ಆದರೆ ಬೆಂಬಲಿಸಬೇಕಾದ ಗೆಳೆಯರು ಕೈಕೊಡುವ ಸಾಧ್ಯತೆ ಇರುತ್ತದೆ. ಆದರೆ ನಿಮ್ಮ ಆತ್ಮಬಲ ಮತ್ತು ನಿಮಗಿರುವ ದೈವಬಲದ ಮೇಲೆ ಎಲ್ಲಾ ಕಾರ್ಯವೂ ಸುಲಲಿತವಾಗುವುದು.

ಮೀನ ರಾಶಿ
ಈದಿನ ನೀರಿನಂತೆ ಹಣ ಖರ್ಚಾಗುವುದು. ಆದಾಗ್ಯೂ ಅದರಿಂದ ಹೆಚ್ಚಿನ ಲಾಭವನ್ನು ಪಡೆಯುವಿರಿ. ಪೂರ್ವಪುಣ್ಯದ ರಾಹುಗ್ರಹವು ಚಿತ್ತ ಚಾಂಚಲ್ಯವುಂಟು ಮಾಡುವ ಸಾಧ್ಯತೆ ಇದೆ. ಸುಬ್ರಮಣ್ಯ ಸ್ವಾಮಿಯ ಪ್ರಾರ್ಥನೆ ಮಾಡಿರಿ.

SHARE