ಕೈಯ ಯಾವ ಬೆರಳಿನಿಂದ ಕುಂಕುಮ ಇಟ್ಟುಕೊಂಡರೆ ಯಾವ ರೀತಿಯ ಫಲಿತಾಂಶ ಸಿಗುತ್ತದೆ ಗೊತ್ತಾ…?

ಕುಂಕುಮ ಇಟ್ಟುಕೊಳ್ಳುವುದು ಎಂಬುದು ಹಿಂದೂ ಸಂಪ್ರದಾಯದಲ್ಲಿ ಒಂದು ಮುಖ್ಯವಾದ ಆಚಾರವಾಗಿದೆ. ಮಹಿಳೆಯರು ತಮ್ಮತಮ್ಮ ಗಂಡಂದಿರ ಕ್ಷೇಮಕ್ಕಾಗಿ, ಅವರು ಸೌಭಾಗ್ಯಕ್ಕಾಗಿ ಕುಂಕುಮ ಧರಿಸುತ್ತಾರೆ. ಭಕ್ತರು ಪೂಜೆ ಮಾಡುವಾಗ ಕುಂಕುಮ ಧರಿಸುತ್ತಾರೆ. ದೇವಾಲಯಗಳಲ್ಲಿ ದೇವರ ದರ್ಶನ ಪಡೆಯುವಾಗ ತಿಲಕ ಧರಿಸುತ್ತಾರೆ. ಆದರೆ ಇದರಲ್ಲಿ ಮುಖ್ಯವಾಗಿ ಶಿವ ಭಕ್ತರು ವಿಭೂತಿಯನ್ನು ಧರಿಸಿದರೆ, ವಿಷ್ಣು ಭಕ್ತರು ನಾಮ ಧರಿಸುತ್ತಾರೆ. ಆದರೆ ಇದೆಲ್ಲವೂ ತಿಲಕದ ಲೆಕಕ್ಕೇ ಬರುತ್ತದೆ. ಇನ್ನು ಹಿರಿಯರು ಆಶೀರ್ವಾದ ಮಾಡುತ್ತಾ ಸಹ ಕೆಲವು ಸಂದರ್ಭಗಳಲ್ಲಿ ಕುಂಕುಮ ಇಡುತ್ತಾರೆ. ಈ ಹಿನ್ನೆಲೆಯಲ್ಲಿ ಕುಂಕುಮ ಇಟ್ಟುಕೊಳ್ಳಲು ಬಹಳಷ್ಟು ಮಂದಿ ಬಲಗೈಯ ಉಂಗುರ ಬೆರಳನ್ನು ಬಳಸುತ್ತಾರೆ. ಆದರೆ ನಿಮಗೆ ಗೊತ್ತೇ..? ಅದಷ್ಟೇ ಅಲ್ಲ… ಇತರೆ ಬೆರಳುಗಳಲ್ಲಿ ಸಹ ತಿಲಕ ಇಡಬಹುದು. ಹಾಗಿದ್ದರೆ ಯಾವ ಬೆರಳಿನಿಂದ ತಿಲಕ ಇಟ್ಟುಕೊಂಡರೆ ಯಾವ ರೀತಿಯ ಫಲಿತಾಂಶ ಸಿಗುತ್ತದೆ ಎಂಬುದನ್ನು ಈಗ ತಿಳಿದುಕೊಳ್ಳೋಣ..!

1. ಹಿಂದೂ ಶಾಸ್ತ್ರಗಳ ಪ್ರಕಾರ ಮಧ್ಯದ ಬೆರಳು ಶನಿಗ್ರಹ ಸ್ಥಾನ. ಈ ಗ್ರಹ ನಮಗೆ ದೀರ್ಘಾಯಸ್ಸು ಕೊಡುತ್ತದೆ. ಆದಕಾರಣ ಈ ಬೆರಳಿನಿಂದ ತಿಲಕನ್ನು ಧರಿಸಿದರೆ ಅವರಿಗೆ ಆಯಸ್ಸು ಹೆಚ್ಚುತ್ತದೆ.

2. ಉಂಗುರ ಬೆರಳಿನಿಂದ ತಿಲಕ ಧರಿಸಿದರೆ ಮಾನಸಿಕ ನೆಮ್ಮದಿ ಸಿಗುತ್ತದೆ. ಯಾಕೆಂದರೆ ಆ ಬೆರಳಿನ ಸ್ಥಾನ ಸೂರ್ಯನದು. ಅವನು ನಮಗೆ ಮಾನಸಿಕ ನೆಮ್ಮದಿಯನ್ನು ಉಂಟು ಮಾಡುತ್ತಾನೆ. ಆದಕಾರಣ ಆ ಬೆರಳಿನಿಂದ ತಿಲಕ ಧರಿಸಿದರೆ ಮನಸ್ಸು ನಮ್ಮದಿಯಾಗಿ ಇರುತ್ತದೆ. ಸೂರ್ಯನಲ್ಲಿ ಇರುವ ಶಕ್ತಿ ನಮಗೆ ಲಭಿಸುತ್ತದೆ. ಬುದ್ಧಿವಂತರಾಗುತ್ತಾರೆ.

3. ಹೆಬ್ಬೆರಳಿನಿಂದ ಕುಂಕುಮ ಇಟ್ಟುಕೊಳ್ಳುವವರಿಗೆ ದೈಹಿಕ ದೃಢತ್ವ, ಧೈರ್ಯ ಲಭಿಸುತ್ತದೆ. ಯಾಕೆಂದರೆ ಆ ಬೆರಳಿನ ಸ್ಥಾನ ಶುಕ್ರನದು. ಅವನು ನಮಗೆ ಬೆಟ್ಟದಷ್ಟು ಶಕ್ತಿಯನ್ನು ನೀಡುತ್ತಾನೆ. ಬುದ್ಧಿಯನ್ನು, ಆರೋಗ್ಯವನ್ನು ಕರುಣಿಸುತ್ತಾನೆ.

4. ತೋರು ಬೆರಳಿನಿಂದ ತಿಲಕ ಧರಿಇಸಿದರೆ ಮೋಕ್ಷ ಲಭಿಸುತ್ತದೆ. ಆ ಬೆರಳಿನ ಸ್ಥಾನ ಗುರುವಿನದು. ಅವನು ಜ್ಞಾನವನ್ನು ಪ್ರಸಾದಿಸುತ್ತಾರೆ. ಮೋಕ್ಷ ಉಂಟು ಮಾಡುತ್ತಾನೆ. ಸಮಸ್ಯೆಗಳಿಂದ ಮುಕ್ತಗೊಳಿಸುತ್ತಾನೆ.

5. ನಮ್ಮ ದೇಹದಲ್ಲಿ ಒಟ್ತು 13 ಜಾಗಗಳಲ್ಲಿ ತಿಲಕ ಧರಿಸಬಹುದು. ಅದರೆ ಬಹಳಷ್ಟು ಮಂದಿ ಹಣೆಯ ಮೇಲೆ ತಿಲಕ ಧರಿಸುತ್ತಾರೆ. ಯಾಕೆಂದರೆ ಆ ಸ್ಥಾನ ಅಂಗಾರಕನದು. ಆತನಿಗೆ ಕೆಂಪು ಎಂದರೆ ಇಷ್ಟ. ಹಾಗಾಗಿ ಕೆಂಪು ಬಣ್ಣದ ತಿಲಕ ತುಂಬಾ ಮಂದಿ ಧರಿಸುತ್ತಾರೆ.

SHARE