ನಾಯಿಗಳು ಊಳಿಟ್ಟರೂ ಮುಲುಕಿದರೂ, ಅತ್ತರೂ, ಯಾರಾದರೂ ಮರಣಿಸುವ ಸಂಕೇತ..ಇದು ನಿಜವೇ..?

 

ನಾಯಿಗಳು ಊಳಿಟ್ಟರೂ ಮುಲುಕಿದರೂ, ಅತ್ತರೂ, ಯಮಧರ್ಮರಾಜ ಬರುತ್ತಿರುವುದರ ಸಂಕೇತವಂತೆ. ವಾಸನೆಯನ್ನು ನೋಡಿ ಕಳ್ಳರನ್ನು ಗುರುತಿಸುವ ಹಾಗೆ, ಮಾನವರಿಗೆ ಕಾಣಿಸದ ಅನೇಕ ದಿವ್ಯ, ದುಷ್ಟ ಶಕ್ತಿಗಳು ನಾಯಿಗಳಿವೆಯೆಂದು ನಮ್ಮ ಪೂರ್ವಜರು ಹೇಳುತ್ತಿದ್ದರು. ಇದರಲ್ಲಿ ವೈಜ್ಞಾನಿಕತೆ ಇದೆಯೇ ಎಂಬ ವಿಷಯವನ್ನು ಪಕ್ಕಕಿರಿಸಿದರೆ… ನಾಯಿಗಳು ಹಾಗೆ ವರ್ತಿಸಿದಾಗ ಅನೇಕ ಕಡೆ ಮರಣ ಸಂಭವಿಸಿದೆ.

ಆದುದರಿಂದಲೇ ಊರಿನ ನಾಯಿಗಳು ವಿಚಿತ್ರ ಶಬ್ಧದಿಂದ ರೋಧಿಸಿದರೆ… ಆ ದಿನ ಯಾರಾದರೂ ಮರಣಿಸುತ್ತಾರೆಂದು ಜನರು ಚಿಂತೆಗೀಡಾಗುತ್ತಾರೆ. ಇವುಗಳಿಗೆ ಆಧಾರ ಒದಗಿಸುವುದು ಕಷ್ಟಸಾಧ್ಯವಾದರೂ…ಆಧ್ಯಾತ್ಮಿಕರ ನಂಬಿಕೆಯ ಪ್ರಕಾರ… ಪಶು, ಪಕ್ಷಿಗಳಲ್ಲಿ ಕೆಲವು ವಿಶೇಷ ಶಕ್ತಿಗಳು ಇರುತ್ತವೆಯೆಂದೂ, ಮನುಷ್ಯರು ಗುರುತಿಸಲಾಗದಂತಹ ಎಷ್ಟೋ ವಿಷಯಗಳನ್ನು ಅವು ಗುರುತಿಸುತ್ತವೆ.

ನಾಯಿಗಳು ಮಾತನಾಡಲಾರವು. ಒಂದು ವೇಳೆ ಅವು ಮಾತನಾಡುವಂತಿದ್ದರೆ… ಈ ಭೂಮಿಯ ಮೇಲೆ ಮನುಷ್ಯರು ಇರುತ್ತಿರಲಿಲ್ಲ. ನಾಯಿಗಳಿಗೇ ಅಲ್ಲ ಯಾವುದೇ ಪ್ರಾಣಿ ಪಕ್ಷಿಗೆ ಮಾತನಾಡಲು ಬರುತ್ತಿದ್ದರೆ…ಮನುಷ್ಯ ಭೂಮಿಯನ್ನು ಶಾಸಿಸುತ್ತಿರಲಿಲ್ಲ. ಆದುದರಿಂದಲೇ ದೇವರು ಎಲ್ಲಾ ಪ್ರಾಣಿಗಳಿಗಿಂತಲೂ ಕಡಿಮೆ ಅರ್ಹತೆಗಳೊಂದಿಗೆ ಮನುಷ್ಯನನ್ನು ಹುಟ್ಟಿಸಿ, ಮಾತನಾಡುವ ಶಕ್ತಿಯನ್ನು ನೀಡಿ ಎಲ್ಲ ಪ್ರಾಣಿಗಳಿಗಿಂತಲೂ ಮೇಲಾಗಿ ಮಾಡಿದ ಎಂದು ಹೇಳುತ್ತಾರೆ. ಇನ್ನು ನಾಯಿಗಳು ಹೊರಡಿಸುವ ವಿಶೇಷ ಶಬ್ಧಗಳು ಅವುಗಳ ಅತೀತ ಶಕ್ತಿಗಳ ಬಾಗವೆಂದು ಹೇಳುತ್ತಾರೆ.

SHARE