ತಂದೆ ಮತ್ತು ಮಗಳು – ಹೃದಯ ಮುಟ್ಟುವ ಕಥೆ ಒಮ್ಮೆ ಓದಿ…

ಅದೊಂದು ಮಧ್ಯಮ ವರ್ಗದ ಸಂಸಾರ. ಹುಡುಗಿ ಚಿಕ್ಕವಳಿರುವಾಗಲೇ ತಾಯಿ ತೀರಿಹೋದಳು. ಅಂದಿನಿಂದ ಆ ಹುಡುಗಿಗೆ ತಂದೆಯೇ ಸರ್ವಸ್ವ. ತನ್ನ ಮಗಳಿಗೆ ಯಾವುದೇ ಕುಂದು ಕೊರತೆ ಬಾರದಂತೆ ಕಣ್ಣಿನ ರೆಪ್ಪೆಯಂತೆ ಕಾಪಾಡುತ್ತಿದ್ದ. ತನ್ನ ಮಗಳ ಬೇಡಿಕೆಗಳೆಲ್ಲವನ್ನೂ ಈಡೇರಿಸುತ್ತಾ ಮುದ್ದಾಗಿ ಬೆಳೆಸಿದಒಬ್ಬ ತಂದೆಯ…ಕತೆಯಿದು… ಎಲ್ಲರಂತೆ ತನ್ನ ಮಗಳೂ ಇರಬೇಕೆಂದು ಪ್ರತಿಷ್ಠಿತ ಕಾಲೇಜಿನಲ್ಲಿ ಓದಿಸುತ್ತಿದ್ದಾನೆ… ಹುಡುಗಿ ಇಂಜಿನಿಯರಿಂಗ್ ಎರಡನೇ ವರ್ಷದಲ್ಲಿ ವ್ಯಾಸಂಗಮಾಡುತ್ತಿದ್ದಾಳೆ…ಒಂದು ದಿನ..

ಮಗಳು: ಅಪ್ಪಾ…ನನಗೊಂದು ಒಳ್ಳೆಯ ಮೊಬೈಲ್ ಬೇಕು…ತಂದೆ : ಈಗ ನಿನ್ನ ಬಳಿ ಒಂದು ಮೊಬೈಲ್ ಇದೆಯಲ್ಲಾ…ಮತ್ತೆ ಇನ್ನೊಂದ್ಯಾಕೆ.ಮಗಳು : ಅದು ಅಷ್ಟೇನೂ ಚೆನ್ನಾಗಿಲ್ಲ…ನನ್ನಸ್ನೇಹಿತರೆಲ್ಲರೂ ಒಳ್ಳೆಯ ಮೊಬೈಲ್ ಉಪಯೋಗಿಸುತ್ತಿದ್ದಾರೆ.. ಅವರ ಮುಂದೆ ನನ್ನ ಈ ಮೊಬೈಲ್ ಉಪಯೋಗಿಸಲು ನಾಚಿಕೆಯಾಗುತ್ತಿದೆ. ಅಪ್ಪಾ…ಪ್ಲೀಸ್…ಪ್ಲೀಸ್…ನನಗೆ ಒನ್ನೊಂದು ಒಳ್ಳೆಯ ಮೊಬೈಲ್ ತೆಗೆದುಕೊಡಿ…ತಂದೆ : ಸ್ವಲ್ಪ ದಿನ ಕಾಯಮ್ಮ. ಈಗ ನನ್ನ ಬಳಿ ಅಷ್ಟು ಹಣ ಇಲ್ಲ.ಮಗಳು : ಹಾ…ಸರಿ..ಆದರೆ…ಆದಷ್ಟು ಬೇಗನೆ ತೆಗೆದುಕೊಡಪ್ಪಾ…
ತಂದೆ : OK..ಅಮ್ಮಾ ತೆಗೆದುಕೊಡ್ತೀನಿ..ಒಂದು ಸಂಜೆ ಮಗಳು ಕಾಲೇಜಿನಿಂದ ಹಿಂದಿರುಗಿ ಬಂದಾಗ…ಮನೆಯಲ್ಲಿ ಅವಳ ತಂದೆ ಬೆಡ್ ರೂಂನಲ್ಲಿ ಕುಳಿತು ಏನನ್ನೋ ಬರೆಯುತ್ತಿದ್ದಾರೆ. ಒಮ್ಮೆಲೇ ತನ್ನ ಮಗಳು ಬೆಡ್ ರೂಂ ಬಾಗಿಲು ತೆಗೆದ ಶಬ್ದ ಕೇಳಿ, ಬರೆಯತ್ತಿರುವುದನ್ನು ನಿಲ್ಲಿಸಿದ ತಂದೆ…ಅವಸರವಸರವಾಗಿ ಪಕ್ಕದಲ್ಲೇ ಇದ್ದ ಟೇಬಲ್ ಡ್ರಾವರ್ ನಲ್ಲಿ ಇಡುತ್ತಿರುವುದನ್ನು ಮಗಳು ಗಮನಿಸುತ್ತಾಳೆ…ಮಗಳು : ಅಪ್ಪಾ ಏನು ಬರೆಯುತ್ತಿದ್ದಿರಿ…ಅಡಗಿಸಿಟ್ಟಿರಲ್ಲಾ… ತಂದೆ : ಏನಿಲ್ಲಮ್ಮಾ..Office pending work ಮಾಡುತ್ತಿದ್ದೆ…

ಮಗಳು : ಮತ್ತೆ..ನನ್ನನ್ನು ನೋಡಿ ಯಾಕೆ ಬಚ್ಚಿಡುತ್ತಿದ್ದೀರ? ತಂದೆ : ಆಫೀಸ್ ಕೆಲಸ ಮನೆಯಲ್ಲಿ ಮಾಡಬಾರದು. ನನ್ನ ಮುದ್ದು ಮಗಳು ನನ್ನೊಟ್ಟಿಗೆ ಇರುವಷ್ಟು ಸಮಯ ಅವಳನ್ನು ನೋಡಿಕೊಳ್ಳಬೇಕು. ಮಗಳು; (ನಗುತ್ತಾ)..ಹಾ..ಸರಿ..ಬನ್ನಿ ಅಪ್ಪಾ ಕಾಫೀ ಕುಡಿಯೋಣ…ತಂದೆ : ಆಗಲಮ್ಮಾ..ನಡಿ…ನಡಿ..ಕಾಫೀ ಕುಡಿಯೋಣ…” ಆ ನಂತರ ಒಂದು ದಿನ”… ಮಗಳು : ಅಪ್ಪಾ ನನಗೊಂದು ಬೈಕ್ ಬೇಕು. ನನ್ನ ಎಲ್ಲಾ ಸ್ನೇಹಿತರ ಬಳಿಯೂ ಬೈಕ್ ಇದೆ. ಅಪ್ಪ : ಈಗ ನನ್ನ ಬಳಿ ಅಷ್ಟು ಹಣ ಇಲ್ಲ..ಮಗಳು : ಹೋಗಲಿ Instalment ತೆಗೆದುಕೊಂಡು…ತಿಂಗಳು ತಿಂಗಳು ಕಟ್ಟೋಣ…ತಂದೆ : ಬೇಡಮ್ಮಾ …ಕಟ್ಟಲಾಗದಿರುವಾಗ ಹೇಗೆ ತೆಗೆದುಕೊಳ್ಳೊದು ಹೇಳು.ಮಗಳು : ಕೊನೇ ಪಕ್ಷ Lap top ಆದರೂ ತೆಗೆದು ಕೋಡಿಯಪ್ಪಾ…ಪ್ಲೀಸ್… ತಂದೆ : ಇನ್ನು ಕೆಲವು ದಿನಗಳು ಕಾಯಮ್ಮಾ..ಆಗ ನಿನಗೆ ಏನು ಬೇಕೋ ಅದನ್ನೆಲ್ಲಾ ತೆಗೆದು ಕೊಡುತ್ತೇನೆ.

ಮಗಳು; (ಮೊಂಡುತನದಿಂದ) ಹೋಗಿ ಅಪ್ಪಾ…ನನಗೆ ಆಗ ಬೇಡ…“ಎಲ್ಲಾ ಸರಿಯಾಗಿದೆ ಅಂದುಕೊಳ್ಳುತ್ತಿರುವಾಗಲೇ…ಸಡನ್ ಆಗಿ ..ಒಂದು ದಿನ…”ಮಗಳು :(ಸಂತೋಷದಿಂದ) ಅಪ್ಪಾ.. ನಮ್ಮ ಕಾಲೇಜ್ ನಲ್ಲಿ ಟೂರ್ ಪ್ಲಾನ್ ಮಾಡಿದ್ದಾರೆ. ನನ್ನ ಸ್ನೇಹಿತರೆಲ್ಲರೂ ಹೋಗುತ್ತಿದ್ದಾರೆ. ನಾನೂ ಹೋಗಬೇಕು . ನನಗೆ 4000 ರೂಪಾಯಿಗಳನ್ನು ಕೊಡಿ.
ತಂದೆ : ತಿಂಗಳ ಕೊನೆಯಲ್ಲವೇನಮ್ಮಾ. ಈಗ ಅಷ್ಟು ಹಣ ಎಲ್ಲಿಂದ ತರುವುದು. ಕಾಲೇಜ್ ಟೂರ್ ಗೆ ಕಟ್ಟಿದ ನಂತರ ನಿನ್ನ ಖರ್ಚಿಗೆ 300 ರೂಪಾಯಿಗಳು ಬೇಕು. ಎಲ್ಲಾ ಈಗಲೇ ಖರ್ಚು ಮಾಡಿಬಿಟ್ಟರೆ…ಇನ್ನು ಮನೆ ಖರ್ಚಿಗೆ ಏನೂ ಉಳಿಯುವುದಿಲ್ಲ. ಇನ್ನೊಮ್ಮೆ ಹೋಗುವಿಯಂತೆ…

ಮಗಳು : (ಕೋಪದಿಂದ ಅಳುತ್ತಾ) ಮೊಬೈಲ್ ಕೇಳಿದೆ..ಬೈಕ್ …ಲ್ಯಾಪ್ ಟಾಪ್ ಕೇಳಿದೆ. ಎಲ್ಲವಕ್ಕೂ ಸ್ವಲ್ಪ ದಿನ ಇರು..ಹಣವಿಲ್ಲಾ ಎಂದು ಹೇಳುತ್ತಾ ಬಂದಿರಿ. ಅವೆಲ್ಲವೂ ಕಾಸ್ಟ್ಲೀ ಎಂದು ಸುಮ್ಮನಿದ್ದೆ. ಈಗ ಟೂರ್ ಗೆ ಕೂಡಾ ಅದೇ ರೀತಿ ಹೇಳುತ್ತಿದ್ದೀರಿ. ಇಷ್ಟಕ್ಕೂ ನಿಮಗೇನಾಗಿದೆ. ಈ ಹಿಂದೆ ನಾನು ಏನೇ ಕೇಳಿದರೂ ಇಲ್ಲವೆನ್ನುತ್ತಿರಲಿಲ್ಲ. ಆದರೆ, ಈಗ ನೀವು ಮೊದಲಿನಂತಿಲ್ಲ. ಬದಲಾಗಿದ್ದೀರಿ. ಅಸಲಿಗೆ ಸಂಪಾದಿಸಿದ್ದನ್ನೆಲ್ಲಾ ಏನು ಮಾಡುತ್ತಿದ್ದೀರಿ? ನನಗಿಂತಲೂ ..ನನ್ನ ಸಂತೋಷಕ್ಕಿಂತಲೂ ಮಿಗಿಲಾದದ್ದಿಲ್ಲ ಎನ್ನುತ್ತಿದ್ದವರು..ಈಗ ನೀವು ಮಾಡುತ್ತಿರುವುದೇನು..?
ತಂದೆ : ( ನೋವಿನಿಂದ) ಹಾಗಲ್ಲಮ್ಮಾ…ಮಗಳು : (ಅಳುತ್ತಾ)…ಬೇಡಪ್ಪ.ನೀವು ನನ್ನೊಂದಿಗೆ ಮಾತಾಡಬೇಡಿ. ನನಗೇನೂ ಹೇಳಬೇಡಿ ಎಂದು ರೂಂನೊಳಗೆ ಹೋಗಿ ಬಾಗಿಲು ಹಾಕಿಕೊಳ್ಳುತ್ತಾಳೆ.ಆ ಹುಡುಗಿ ತನ್ನ ತಂದೆಯೊಡನೆ ಜಗಳವಾಡಿ ಎರಡು ದಿನಗಳು ಕಳೆದಿವೆ… ಮಗಳು ಮಾತನಾಡುವುದನ್ನ ಬಿಟ್ಟಂದಿನಿಂದಲೂ ಅವಳ ತಂದೆ ಊಟ ಮಾಡದೆ…ನೊಂದುಕೊಳ್ಳುತ್ತಿದಾನೆ.ಮೂರನೇ ದಿನ ಮಗಳು ರೂಂ ನಲ್ಲಿರುವಾಗ…
ತಂದೆ : ಮಗೂ ನಿನಗೆ ಇಷ್ಟವಾದ ಅಡುಗೆ ಮಾಡಿದ್ದೀನಿ. ಊಟ ಮಾಡೋಣ…ಬಾಮ್ಮಾ…
ಮಗಳು : (ಕೋಪದಿಂದ) ನನಗೇನೂ ಬೇಡ. ನೀವೇ ತಿನ್ನಿ.. ನನ್ನ ಇಷ್ಟಗಳೆಲ್ಲವೂ ಯಾವಾಗಲೋ ಸತ್ತು ಹೋದವು… ನನ್ನನ್ನು ಮಾತಾಡಿಸಬೇಡಿ.
ಪ್ಲೀಸ್..ಎಂದು (ಜೋರಾಗಿ ಬಾಗಿಲು ಹಾಕಿಕೊಳ್ಳುತ್ತಾಳೆ)… ಮಗಳ ಮಾತುಗಳಿಂದ ಬೇಸರಗೊಂಡ ತಂದೆ…ತನ್ನ ರೂಮಿಗೆ ಹೋಗಿ ಮಲಗಿಕೊಳ್ಳುತ್ತಾನೆ… ಮಾರನೆಯ ದಿನ ಬೆಳಿಗ್ಗೆ ಎಷ್ಟು ಹೊತ್ತಾದರೂ ಬಾಗಿಲು ತೆಗೆಯುವುದಿಲ್ಲ… ಯಾವಾಗಲೂ ನನ್ನನ್ನು ಏಳಿಸುತ್ತಿದ್ದ ತಂದೆ , ಇಂದು ಯಾಕೆ ಇನ್ನೂ ಬಾಗಿಲು ತೆಗೆದಿಲ್ಲ ಎಂದು ಮಗಳಿಗೆ ಅನುಮಾನ ಬಂದು ಬಾಗಿಲು ತೆಗೆಯುತ್ತಾಳೆ…ತಂದೆ ಅಲುಗಾಡದೆ ಹಾಗೇ ಮಲಗಿದ್ದಾರೆ. ಮಗಳ ಮನಸಿಗೆ ಹೇಳಲಾಗದ ಹೆದರಿಕೆ ಉಂಟಾಗುತ್ತದೆ. ತಂದೆಯ ಎದೆಯ ಮೇಲೆ ಡ್ರಾವರ್ ಕೀ ಇದೆ. ಅದನ್ನು ತೆಗೆದುಕೊಂಡು ಡ್ರಾವರ್ ತೆಗೆದು ನೋಡಿದರೆ…ಅದರಲ್ಲಿ ಒಂದು ಪತ್ರವಿದೆ… ಆ ಪತ್ರದಲ್ಲಿ..???

ತಂದೆ : ಮಗೂ..ನನ್ನ ಬಂಗಾರಾ..ನನಗೆ ಕೆಲವು ದಿನಗಳಿಂದ Heart problem ಇದೆ. ಈಗ ನನ್ನ ಪ್ರಾಣಕ್ಕಿಂತಲೂ ನಿನ್ನ ಭವಿಷ್ಯ ಮುಖ್ಯ… ಯಾವಾಗ ಹೋಗುತ್ತೇನೋ ನನಗೇ ಗೊತ್ತಿಲ್ಲ. ಆದುದರಿಂದಲೇ ನಿನ್ನ ಹೆಸರಿನಲ್ಲಿ LIC funds… ನಿನ್ನ ಮುಂದಿನ ಓದಿಗಾಗಿ, ಖರ್ಚಿಗಾಗಿ ಬ್ಯಾಂಕ್ ನಲ್ಲಿ ಬ್ಯಾಲೆನ್ಸ್, ಈ ಮನೆಯನ್ನೂ ನಿನ್ನ ಹೆಸರಿಗೆ ಮಾಡಿಸಿದ್ದೇನೆ. ಇನ್ನೊಂದು ಮನೆಯನ್ನು ಕೊಂಡುಕೊಂಡಿದ್ದೀನಿ ಅದಕ್ಕೆ ಸಂಬಂಧಿಸಿದ ಡಾಕ್ಯುಮೆಂಟ್ಸ್ ಈ ಡ್ರಾವರ್ ನಲ್ಲೇ ಇಟ್ಟಿದ್ದೀನಿ. ನಿನ್ನ ತಾಯಿ ಸತ್ತ ನಂತರ, ಮೊದಲ ಬಾರಿಗೆ ನಿನ್ನನ್ನು ಎತ್ತಿಕೊಂಡಾಗ, ನಿನ್ನ ಪುಟ್ಟ ಕೈ ಯಿಂದ ನನ್ನ ಬೆರಳನ್ನು ಹಿಡಿದುಕೊಂಡೆ. ಆ ಕ್ಷಣದಿಂದಲೇ ನನ್ನ ಎಲ್ಲಾ ಸುಖವನ್ನು ಮರೆತು…ನಿನ್ನ ಆನಂದವನ್ನೇ ನನ್ನ ಜೀವನವನ್ನಾಗಿಸಿಕೊಂಡೆ. ನಿನಗೆ ನನ್ನ ಕೈಯಿಂದ ಒಂದು ದಿನ ಊಟ ಮಾಡಿಸಿದೇ ಹೋದರೂ, ಆ ದಿನವೆಲ್ಲವೂ ನನಗೆ ಹಸಿವಿರುವುದಿಲ್ಲ. ಊಟ ಮಾಡಬೇಕು ಅನ್ನಿಸುವುದಿಲ್ಲ. ನಿನ್ನ ಸಂತೋಷಕ್ಕಾಗಿ ಎಷ್ಟೇ ಕಷ್ಟಗಳು ಬಂದರೂ ನಗುತ್ತಾ ಸಹಿಸಿಕೊಂಡಿದ್ದೀನಿ…ಇನ್ನೂ ನನ್ನ ಪ್ರಾಣ ಹೋಗುವವರೆಗೂ ಸಹಿಸಿಕೊಂಡೇ ಇರುತ್ತೀನಿ. ಯಾಕೆಂದರೆ…ನನ್ನ ಪ್ರಾಣ…ನನ್ನ ಪ್ರಪಂಚ ಎಲ್ಲವೂ ನೀನೇ. ಹುಷಾರಾಗಿರು ಮಗಳೇ..ನೀನು ಚೆನ್ನಾಗಿ ಓದಿ, ಜೀವನದಲ್ಲಿ ಎತ್ತರಕ್ಕೆರುವುದನ್ನು ನೋಡಬೇಕೆನ್ನುವುದೇ ನನ್ನ ಕೊನೆಯ ಆಸೆ…

ಹುಡುಗಿಯ ಬಾಯಿಂದ ಮಾತುಗಳು ಹೊರಡುತ್ತಿಲ್ಲ…ಒಂದೇ ಸಮನೆ ಕಣ್ಣುಗಳಿಂದ ನೀರು ಸುರಿಯುತ್ತಿದೆ. ಹೃದಯ ಒಡೆದು ಹೋಗುವ ಹಾಗೆ ಗಟ್ಟಿಯಾಗಿ ಅಳುತ್ತಾ…ತಂದೆಯ ಎದೆಯ ಮೇಲೆ ಒರಗಿದಳು…ನಿಮ್ಮನ್ನು ತಪ್ಪಾಗಿ ಅರ್ಥ ಮಾಡಿಕೊಂಡೆ. ನನ್ನನ್ನು ಕ್ಷಮಿಸಿ ಅಪ್ಪಾ…ಒಮ್ಮೆ ಕಣ್ಣು ತೆರೆದು ನೋಡಿ ಅಪ್ಪಾ…ಪ್ಲೀಸ್…ಕಣ್ಣು ತೆರೆಯಿರಿ. ನನ್ನನ್ನು ಬಿಟ್ಟು ಹೋಗಬೇಡಿ. ನನಗೆ ನಿಮ್ಮನ್ನು ಬಿಟ್ಟು ಬೇರ್ಯಾರೂ ಇಲ್ಲ. ಅಪ್ಪಾ…ನಿಮ್ಮ ಪ್ರೀತಿ ನನಗೆ ಬೇಕಪ್ಪಾ…ಪ್ಲೀಸ್ ನನ್ನನ್ನು ಒಬ್ಬಂಟಿಗಳನ್ನಾಗಿ ಬಿಟ್ಟು ಹೋಗಬೇಡಿ…

ನೋಟ್ : ನಮಗೆ ಎಷ್ಟು ಶಕ್ತಿ ಇದೆಯೋ ಅಷ್ಟರಲ್ಲೇ ಬದುಕ ಬೇಕೆಯೇ ಹೊರತು, ಅದಕ್ಕಿಂತಲೂ ಹೆಚ್ಚಿಗೆ ಆಸೆ ಪಡಬಾರದು…ಅದೇರೀತಿ..ನಮ್ಮನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ವ್ಯಕ್ತಿ ಒಮ್ಮೆಲೇ ಏಕೆ ಬದಲಾದರೆಂಬುದನ್ನು ಅರ್ಥ ಮಾಡಿಕೊಳ್ಳ ಬೇಕಲ್ಲದೆ ಅಪಾರ್ಥ ಮಾಡಿಕೊಳ್ಳಬಾರದು… ನಾವು ಅಪಾರ್ಥ ಮಾಡಿಕೊಳ್ಳುವುದರಿಂದ ಕೆಲವೊಮ್ಮೆ ಕೆಲವರು ನಮ್ಮ ಜೀವನದಿಂದ ಶಾಶ್ವತವಾಗಿ ದೂರವಾಗುವ ಸಾಧ್ಯತೆಗಳಿವೆ…
ಒಬ್ಬ ಮನುಷ್ಯ ನಮ್ಮ ಬಳಿಯಿದ್ದಾಗ ಆತನ ಬೆಲೆ ಗೊತ್ತಾಗುವುದಿಲ್ಲ. ಯಾವಾಗ ದೂರವಾಗುತ್ತಾನೋ ಆಗ ಆತನ ಬೆಲೆ ಗೊತ್ತಾಗುತ್ತದೆ…ಫ್ರೆಂಡ್ಸ್…ಆತುರಪಟ್ಟು ಯಾರನ್ನೂ ದೂರಮಾಡಿಕೊಳ್ಳಬೇಡಿ…!

SHARE