ಫ್ಲಿಪ್‌ಕಾರ್ಟ್‌ ಕಂಪನಿಯ ಮೊದಲ ಡೆಲಿವರಿ ಬಾಯ್‌ ಇಂದು ಕೋಟಿ ಕೋಟಿ ಆಸ್ತಿಯ ಒಡೆಯ !!

12 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಮೊದಲಿಗೆ ಸಣ್ಣ ಪ್ರಮಾಣದಲ್ಲಿ ಆರಂಭವಾದ ಫ್ಲಿಪ್‌ಕಾರ್ಟ್‌ ಹೆಚ್ಚಿನ ಬೇಡಿಕೆಯನ್ನು ಹೊಂದಿರಲಿಲ್ಲ. ಇದಕ್ಕಾಗಿ ಕೇವಲ ಒಬ್ಬನೇ ಡೆಲಿವರಿ ಬಾಯ್ಸ್ ಅನ್ನು ಕಂಪನಿ ನೇಮಕ ಮಾಡಿಕೊಂಡಿದ್ದರು ಎಂಬುದು ನಮಗೆಲ್ಲರಿಗೂ ತಿಳಿದಿರುವಂತಹ ವಿಚಾರ. ಹೊಸದಾಗಿ ಜನ್ಮ ತಾಳಿದ ಫ್ಲಿಪ್‌ಕಾರ್ಟ್‌ನ ಮೊದಲ ಎಂಪ್ಲಾಯಿಯಾಗಿ ಸೇರಿಸಿಕೊಂಡವರು ಅಂಬೂರ್ ಅಯ್ಯಪ್ಪನ್.

ಇಂದು ದೇಶದ ಆನ್‌ಲೈನ್ ಮಾರುಕಟ್ಟೆಯಲ್ಲಿ ತನ್ನದೇ ಅಧ್ಯಾಯವನ್ನು ಹೊಂದಿರುವ ಫ್ಲಿಪ್‌ಕಾರ್ಟ್‌ ಸದ್ಯ ವಾಲ್‌ಮಾರ್ಟ್ ಎನ್ನುವ ದೈತ್ಯ ಕಂಪನಿಯ ಪಾಲಾಗಿದೆ. ಫ್ಲಿಪ್‌ಕಾರ್ಟ್‌ ಭಾರೀ ಮೊತ್ತಕ್ಕೆ ಸೇಲ್ ಆಗಿರುವುದು ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡಲು ಕಾರಣವಾಗಿದೆ. ಇದೇ ಮಾದರಿಯಲ್ಲಿ ಫ್ಲಿಪ್‌ಕಾರ್ಟ್‌ ಹಲವು ಮಂದಿಗೆ ಬದುಕು ಕಟ್ಟಿಕೊಟ್ಟಿದೆ, ಹಲವರನ್ನು ಕೋಟ್ಯಾಧಿಪತಿಗಳನ್ನಾಗಿಸಿದೆ.

ಇದೇ ಮಾದರಿಯಲ್ಲಿ ಫ್ಲಿಪ್‌ಕಾರ್ಟ್‌ಗೆ ಡೆಲಿವರಿ ಬಾಯ್ಸ್ ಆಗಿ ಸೇರಿಕೊಂಡ ಮೊದಲ ನೌಕರ ಇಂದು ಫ್ಲಿಪ್‌ಕಾರ್ಟ್‌ ಶೇರುಗಳನ್ನು ಹೊಂದುವ ಮೂಲಕ ಕೋಟ್ಯಾಧಿಪತಿಯಾಗಿದ್ದಾನೆ. ಹೌದು, ತಮಿಳುನಾಡಿದ ವೆಲೂರು ಜಿಲ್ಲೆಯಲ್ಲಿರುವ ಅಬೂರ್ ನಿವಾಸಿಯಾದ ಅಯ್ಯಪ್ಪನ್, ಬೆಂಗಳೂರಿಗೆ ಬಂದು ಹಲವು ಕಡೆಗಳಲ್ಲಿ ಕೆಲಸ ಮಾಡಿ, ಕೊನೆಗೆ ಕೊರಿಯರ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿ, ಕೊರಿಯರ್ ಸೇವೆಯ ಒಳ-ಹೊರಗೆ ತಿಳಿದುಕೊಂಡರು.

ಇದೇ ಮುಂದೇ ಫ್ಲಿಪ್‌ಕಾರ್ಟಿನಲ್ಲಿ ಅವರಿಗೆ ಕೆಲಸ ಸಿಗುವಂತೆ ಮಾಡಿದೆ. ಫ್ಲಿಪ್‌ಕಾರ್ಟ್‌ ದಿನಕ್ಕೆ 1000 ಆರ್ಡರ್ಗಳನ್ನು ಪಡೆದುಕೊಂಡರು ಸಹ ಅಂಬೂರ್ ಅಯ್ಯಪ್ಪನ್ ಒಬ್ಬರೇ ಅಷ್ಟು ವಸ್ತುಗಳನ್ನು ತಲುಪಿಸುವ ಕೆಲಸ ಮಾಡ್ತಾ ಇದ್ದರು. ಮುಂದೆ ಫ್ಲಿಪ್‌ಕಾರ್ಟ್‌ ಹೆಚ್ಚಿನ ಪ್ರಮಾಣದ ಲಾಭವನ್ನು ಸಂಪಾದಿಸಿದ ಸಂದರ್ಭದಲ್ಲಿ ತನ್ನ ನೌಕರರಿಗೆ ಶೇರುಗಳನ್ನು ಹಂಚಿದ ಸಂಧರ್ಭದಲ್ಲಿ ಅಯ್ಯಪ್ಪನ್ ಸಹ ಕೋಟಿ ಮೌಲ್ಯದ ಶೇರುಗಳನ್ನು ತಮ್ಮದಾಗಿಸಿಕೊಂಡರು.

ಅಯ್ಯಪ್ಪನ್, ಡೆಲಿವರಿ ಬಾಯ್ ಆಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ ನಂತರದಲ್ಲಿ ಇಂದು ಫ್ಲಿಪ್‌ಕಾರ್ಟ್‌ನಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಫ್ ಕಸ್ಟಮರ್ ಎಕ್ಸ್‌ಪೀರಿಯನ್ಸ್ ಮ್ಯಾನೇಜ್ ಮೆಂಟ್ ಹುದ್ದೆಯನ್ನು ಅಲಂಕರಿಸಿದ್ದಾರೆ.

SHARE