ಮಹಿಳಾ ಕಾಲೇಜಿನಲ್ಲಿ ಅಡ್ಮಿಶನ್‍ಗಾಗಿ ಅರ್ಜಿ ಸಲ್ಲಿಸಿದ ಆತ. ತನಗೆ ಬೇಕಾಗಿದ್ದ ಯುವತಿಯನ್ನು ಆಯ್ಕೆ ಮಾಡಿಕೊಳ್ಳುವ ಸಲುವಾಗಿ ಅಂತೆ..!!

ಹೌದು ಮತ್ತೆ.. ಅನಾದಿ ಕಾಲದಿಂದ ಮಹಿಳೆಯರ ಬಗ್ಗೆ ಪುರುಷರು ತೋರುತ್ತಿರುವ ಅಸಡ್ಡೆಯ ಕಾರಣ ಅವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ನಮ್ಮ ದೇಶದಲ್ಲಿ ಮಹಿಳೆಯರು, ಪುರುಷರ ಅನುಪಾತ ಸಮಾನವಾಗಿ ಇಲ್ಲ. ಇದರಿಂದ ಪುರುಷರಿಗೆ ಮದುವೆಯಾಗುವುದು ತಡವಾಗುತ್ತಿದೆ. ಆದರೆ ಕೇವಲ ನಮ್ಮ ದೇಶದಲ್ಲಷ್ಟೇ ಅಲ್ಲ. ಈ ಪರಿಸ್ಥಿತಿ ಇತರೆ ದೇಶಗಳಲ್ಲೂ ಇದೆ. ಅದಕ್ಕೆ ನಮ್ಮ ನೆರೆ ದೇಶವಾದ ಚೀನಾ ಸಹ ಹೊರತಾಗಿಲ್ಲ. ಅಲ್ಲೂ ಸಹ ಬ್ರಹ್ಮಚಾರಿಗಳ ಸಂಖ್ಯೆ ಬೆಳೆಯುತ್ತಿದೆ. ಗಂಡಿಗೆ ಹೆಣ್ಣು ಸಿಗುವುದು ಕಷ್ಟವಾಗಿದೆ. ಇದರಿಂದ ಆ ಯುವಕ ಏನು ಮಾಡಿದ ಗೊತ್ತಾ..? ಗೊತ್ತಾದರೆ ಶಾಕ್ ಆಗ್ತೀರ. ಇಷ್ಟಕ್ಕೂ ಏನು ನಡೆಯಿತೆಂದರೆ..

ಚೀನಾದ ಬೀಜಿಂಗ್‍ನಲ್ಲಿ ಇರುವ ಮಹಿಳಾ ಯೂನಿವರ್ಸಿಟಿ ಅದು. ಅದರಲ್ಲಿ ಕೇವಲ ಮಹಿಳೆಯರಿಗೆ ಮಾತ್ರ ಶಿಕ್ಷಣಕ್ಕಾಗಿ ಅಡ್ಮಿಷನ್ ನೀಡುತ್ತಾರೆ. ಆ ರೀತಿ ಪ್ರತಿ ವರ್ಷ 1500 ಮಂದಿ ಯುವತಿಯರಿಗೆ ಅಲ್ಲಿ ಅಡ್ಮಿಷನ್ ನೀಡಲಾಗುತ್ತದೆ. ಅಲ್ಲಿನ ವುಮೆನ್ ಫೆಡರೇಷನ್ ಈ ಕಾಲೇಜನ್ನು ನಡೆಸುತ್ತಿದೆ. ಆದರೆ 1500 ಮಂದಿ ಯುವತಿಯರ ಜತೆಗೆ ಅವರಲ್ಲಿ ಶೇ.1ರಷ್ಟು ಯುವಕರಿಗೂ ಆ ಯೂನಿವರ್ಸಿಟಿಯಲ್ಲಿ ಪ್ರವೇಶ ಕಲ್ಪಿಸುತ್ತಾರಂತೆ. ಇದು ಅಚ್ಚರಿ ಅನ್ನಿಸಿದರೂ ನಿಜ. ಆ ವಿವಿಯಲ್ಲಿ 1500 ಯುವತಿಯರ ಜತೆಗೆ ಶೇ.1ರಷ್ಟು ಗಂಡಸರಿಗೂ ಸಹ ಆರ್ಟ್ಸ್ ಗ್ರೂಪ್‌ನಲ್ಲಿ ಸೇರಲು ಪ್ರವೇಶ ನೀಡಲಾಗುತ್ತದೆ.

ಈ ಬಾರಿಯೂ ಕೆಲವು ಯುವಕರು ಆ ವಿವಿಯಲ್ಲಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದರು. ಇದು ಪ್ರತಿವರ್ಷ ನಡೆಯುವ ವಿಷಯವೇ ಆದರೂ. ಈ ಸಲ ಅರ್ಜಿ ಸಲ್ಲಿಸಿದ ಯುವಕರಲ್ಲಿ ಒಬ್ಬ ವಿಶೇಷ ಆಕರ್ಷಣೆಯಾಗಿ ನಿಂತ. ಯಾಕೆಂದರೆ.. ಆತ ಸಂದರ್ಶನದಲ್ಲಿ ಯೂನಿವರ್ಸಿಟಿಗೆ ಯಾಕೆ ಸೇರುತ್ತಿದ್ದಾನೆ.. ಎಂದು ಕೇಳಿದ್ದಕ್ಕೆ.. ತಮ್ಮ ಊರಿನಲ್ಲಿ 130 ಮಂದಿ ಯುವಕರಿಗೆ 100 ಮಂದಿ ಯುವತಿಯರು ಇದ್ದಾರೆ. ಅವರಲ್ಲಿ ನನಗೆ ಸೂಕ್ತ ಯುವತಿ ಸಿಗುತ್ತಾಳೋ ಇಲ್ಲವೋ ಎಂದು ಭಯವಾಗಿದೆ. ಹಾಗಾಗಿ 1500 ಮಂದಿ ಪ್ರತಿ ವರ್ಷ ಸೇರುವ ಆ ವಿವಿಯನ್ನು ಆಯ್ಕೆ ಮಾಡಿಕೊಂಡೆ ಎಂದು ಹೇಳಿದ್ದಾನೆ. ಹಾಗಾಗಿ ಸಂದರ್ಶಕರು ಇಂಗು ತಿಂದ ಮಂಗನಂತಾದರು. ಆದರೆ ಆ ಯುವಕನ ತಂದೆಗೆ ಮಾತ್ರ ತನ್ನ ಮಗ ಈ ರೀತಿ ಮಾಡಿದ್ದು ಇಷ್ಟವಾಗಲಿಲ್ಲ. ಅಷ್ಟೆಲ್ಲಾ ಮಂದಿ ಯುವತಿಯರ ನಡುವೆ ಹೇಗಿರುತ್ತಾನೋ ಏನೋ ಎಂದು ಅವರು ಗಾಬರಿ ಬೀಳುತ್ತಿದ್ದಾನಂತೆ. ಅದೇನೇ ಇರಲಿ ಸುದ್ದಿ ಸ್ವಲ್ಪ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

SHARE