ಆ ವೃದ್ಧನಿಗೆ ಸಹಾಯ ಮಾಡುತ್ತಿದ್ದರೆ… ಆತ ನನ್ನ ಎದೆಗೆ ಕೈಹಾಕಿದ. ಬಳಿಕ ಏನಾಯಿತೆಂದರೆ…?

ಆಗ ನಾನು ಇಂದೋರ್‌ನಿಂದ ದಿಲ್ಲಿಗೆ ಹೋಗುತ್ತಿದ್ದೆ. ಫ್ಲೈಟ್‌ನಲ್ಲಿ ಪ್ರಯಾಣ. ಟಿಕೆಟ್ ಮೊದಲೇ ಬುಕ್ ಮಾಡಿಕೊಂಡೆ. ಆದರೂ ಏರ್‌ಪೋರ್ಟ್‌ಗೆ ಹೋಗುವುದು ತುಂಬಾ ತಡವಾಯಿತು. ಕೊನೆಗೆ ಗೇಟ್ ಬಳಿ ನನ್ನನ್ನು ಮತ್ತು ಇನ್ನೊಬ್ಬ ಅಂಕಲ್‌ರನ್ನು ಒಳಗೆ ಬಿಡಲಿಲ್ಲ. ಬಹಳಷ್ಟು ಹೊತ್ತು ಸಿಬ್ಬಂದಿ ಜತೆಗೆ ವಾದಿಸಿದೆ. ಕೊನೆಗೆ ಅವರು ನಮಗೆ ಫ್ಲೈಟ್‌ನಲ್ಲಿ ಪ್ರಯಾಣಿಸಲು ಅನುಮತಿಸಿದರು. ಆದರೆ ಫ್ಲೈಟ್ ಹತ್ತುವಾಗ ಆ ಅಂಕಲ್ ಕೆಳಗೆ ಬಿದ್ದರು. ನೋಡುತ್ತಿದ್ದರೆ ತುಂಬಾ ವಯಸ್ಸಾಗಿತ್ತು. ಹಾಗಾಗಿಯೇ ಮೆಟ್ಟಿಲು ಹತ್ತುವುದು ಕಷ್ಟವಾಗುತ್ತಿತ್ತು. ಕೂಡಲೆ ಆತನಿಗೆ ಸಹಾಯ ಮಾಡಿದೆ. ಆತನ ಕೈಯನ್ನು ನನ್ನ ಭುಜದ ಮೇಲೆ ಹಾಕಿಕೊಂಡು ಅವರನ್ನು ಮೆಟ್ಟಿಲು ಹತ್ತಿಸುವ ಪ್ರಯತ್ನ ಮಾಡಿದೆ.

ಆ ರೀತಿ ಆ ಅಂಕಲ್‌ರನ್ನು ವಿಮಾನಕ್ಕೆ ಮೆಟ್ಟಿಲ ಮೂಲಕ ಹತ್ತಿಸುತ್ತಿದ್ದಾಗ ನನ್ನ ಭುಜದ ಮೇಲಿನ ಅವರ ಕೈ ಕೆಳಗೆ ಬಿತ್ತು. ಅದು ನನ್ನ ವಕ್ಷೋಜಗಳನ್ನು ತಾಕಿತು. ಮೇಲಿನಿಂದ ಏರ್‌ಹೋಸ್ಟೆಸ್ ಅದನ್ನು ನೋಡಿದಳು. ಆಗ ನನಗನ್ನಿಸಿತು. ಅನಗತ್ಯವಾಗಿ ಆ ಅಂಕಲ್‌ಗೆ ಸಹಾಯ ಮಾಡಿದೆ ಎಂದು. ನನ್ನನ್ನು ನಾನೇ ಬೈದುಕೊಂಡೆ.. ಆ ಅಂಕಲ್ ಅಷ್ಟು ನೀಚ ಎಂದು, ಆತನಿಂದ ನನಗೆ ಆ ರೀತಿ ಆಗಿದ್ದಕ್ಕೆ ತೀವ್ರವಾಗಿ ಆಲೋಚಿಸುತ್ತಾ ಒಳಗೊಳಗೆ ಕುದಿಯುತ್ತಿದ್ದೆ. ಕೊನೆಗೆ ಫ್ಲೈಟ್ ಡೋರ್ ಬಳಿಗೆ ಬಂದ ಮೇಲೆ, ಆತನನ್ನು ನಿರ್ದಾಕ್ಷಿಣ್ಯವಾಗಿ ಏರ್‌ಹೋಸ್ಟೆಸ್‌ಗೆ ಒಪ್ಪಿಸಿ ಕೂಡಲೆ ನನ್ನ ಸೀಟಿಗೆ ಹೋಗಿ ಕುಳಿತುಕೊಂಡೆ.

ಈ ಘಟನೆ ಬಳಿಕ ನನ್ನ ಮನಸ್ಸು ಕುದಿಯುತ್ತಿತ್ತು. ಆತ ನನ್ನ ಎದೆಯನ್ನು ಮುಟ್ಟಿದ್ದಕ್ಕೆ ಕೆನ್ನೆಗೆ ನಾಲ್ಕು ಭಾರಿಸಬೇಕಾಗಿತ್ತು ಎಂಬಷ್ಟು ಕೋಪ ಉಕ್ಕಿ ಬರುತ್ತಿತ್ತು. ಆದರೂ ಸುಮ್ಮನಾಗಿದ್ದೆ. ಕೊನೆಗೆ ಫ್ಲೈಟ್ ಇಳಿಯುವಾಗ ಆತ ಲಗೇಜ್ ಕೌಂಟರ್ ಬಳಿ ಕಾಣಿಸಿದ. ಆತ ನನ್ನ ಭುಜದ ಮೇಲೆ ಹಾಕಿದ ಕೈ ನೋಡಿದೆ. ಅದನ್ನು ಕದಲಿಸುತ್ತಿಲ್ಲ. ಯಾಕೆಂದರೆ ಆತನಿಗೆ ಪಾರ್ಶ್ವವಾಯು ಆಗಿತ್ತು. ಆ ಕೈಗೆ ಚಲನೆ ಇರಲಿಲ್ಲ. ಒಂದೇ ಕೈಯಲ್ಲಿ ಆತ ಲಗೇಜ್ ತೆಗೆದುಕೊಳ್ಳುವುದನ್ನು ನೋಡಿದೆ. ಆಗ ಅನ್ನಿಸಿತು ನನಗೆ. ನಾನು ತುಂಬಾ ದೊಡ್ಡ ತಪ್ಪು ಮಾಡಿದೆ ಎಂದು. ಆತನನ್ನು ಅವರ ಸೀಟ್‌ವರೆಗೂ ಕರೆದೊಯ್ದು ಕೂರಿಸಿದ್ದರೆ ಚೆನ್ನಾಗಿತ್ತು ಎಂದುಕೊಂಡೆ. ಏರ್‌ಹೋಸ್ಟೆಸ್‌ಗೆ ಒಪ್ಪಿಸಬಾರದಿತ್ತು ಎಂದು ಫೀಲ್ ಆದೆ. ಆದರೆ ಅವರ ಮೇಲೆ ಕೈ ಮಾಡದಿದ್ದಕ್ಕೆ ಸಂತೋಷಪಟ್ಟೆ. ಒಂದು ವೇಳೆ ಆ ರೀತಿ ಮಾಡಿದ್ದರೆ ಆ ದೇವರು ನನ್ನನ್ನು ಕ್ಷಮಿಸುತ್ತಿರಲಿಲ್ಲ. ಆಗ ನಡೆದ ಒಂದು ಘಟನೆ ನನಗೆ ಇನ್ನೂ ನೆನಪಿದೆ. ಲಗೇಜ್ ತೆಗೆದುಕೊಂಡ ಅವರು ನನಗೆ ಥ್ಯಾಂಕ್ಸ್ ಹೇಳಿ ಮುಂದೆ ಸಾಗಿದರು. ಆಗ ನನಗೆ ಇನ್ನಷ್ಟು ನಾಚಿಕೆಯಾದಂತಾಯಿತು. ನನ್ನ ಗೌರವವನ್ನು ನಾನು ಕಳೆದುಕೊಂಡಷ್ಟು ಫೀಲ್ ಆದೆ. ಪುರುಷರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವುದು ಹೆಚ್ಚಾಗುತ್ತಿದೆ. ಆದರೆ ಎಲ್ಲಾ ಪುರುಷರೂ ಆ ರೀತಿ ಇರಲ್ಲ. ಅದು ನನಗೆ ತಡವಾಗಿ ಗೊತ್ತಾಯಿತು. ಗೊತ್ತಾದ ಬಳಿಕ ಚಿಂತಿಸಿದೆ…!

SHARE