ವಿಮಾನದಲ್ಲಿ ಗಾಳಿ ಆಡುತ್ತಿಲ್ಲ ಎಂದು ಕಿಟಕಿ ತೆರೆದ… ಆ ಬಳಿಕ ಏನಾಯಿತು ಗೊತ್ತಾ..?

ಕೆಂಪು ಬಸ್ ಹತ್ತಿದಂತೆ ಏರ್ ಬಸ್ ಹತ್ತಿ ಮನಬಂದಂತೆ ನಡೆದುಕೊಳ್ಳುತ್ತೇವೆ ಎಂದರೆ ಆಗಲ್ಲ. ವಿಮಾನ ಹತ್ತಿದ ಬಳಿಕ ಕೆಲವು ರೂಲ್ಸ್ ಅಂಡ ರೆಗ್ಯುಲೇಷನ್ಸ್ ಫಾಲೋ ಆಗಬೇಕಾಗುತ್ತದೆ. ಹಾಗಾಗಿ ವಿಮಾನ ಹತ್ತಿದ ಕೂಡಲೆ ವಿಮಾನ ಸಿಬ್ಬಂದಿ ಪ್ರಯಾಣಿಸಬೇಕಾದರೆ ಮಾಡಬೇಕಾದ, ಮಾಡಬಾರದ ಕೆಲಸಗಳ ಬಗ್ಗೆ ತಿಳಿಸುತ್ತಾರೆ… ಅದಕ್ಕೆ ಸಂಬಂಧಿಸಿದ ಬ್ರೋಚರ್ಸ್ ಸಹ ಕೊಡುತ್ತಾರೆ. ಎಲ್ಲರೂ ಆ ನಿಯಮಗಳನ್ನು ಪಾಲಿಸಿ ತೀರಬೇಕು. ಯಾವುದೇ ಸಣ್ಣ ಎಡವಟ್ಟದಾದರೂ ಜೀವ ಮೇಲೆಯೇ ಲೀನವಾಗುತ್ತದೆ. ನಿಯಮಗಳು, ನಿಬಂಧನೆಗಳು ತಿಳಿಸಿದರೂ ಪ್ರಯಾಣಿಕನೊಬ್ಬ ವಿಮಾನದಲ್ಲಿ ಗಾಳಿ ಆಡುತ್ತಿಲ್ಲ ಎಂದು ಎಮರ್ಜೆನ್ಸಿ ಡೋರ್ ಓಪನ್ ಮಾಡಿದ… ಬಳಿಕ ಏನಾಯಿತು ಗೊತ್ತಾ..

ಚೀನಾ ಮೂಲದ 25 ವರ್ಷದ ಯುವಕ ವಿಮಾನದಲ್ಲಿ ಗಾಳಿ ಆಡುತ್ತಿಲ್ಲ ಎಂದು ಟೇಕಾಫ್ ಆಗುತ್ತಿದ್ದ ಸಮಯದಲ್ಲಿ ಎಮರ್ಜೆನ್ಸಿ ಡೋರ್ ಓಪನ್ ಮಾಡಿದ. ಇದರಿಂದ ಆ ಎಮರ್ಜೆನ್ಸಿ ಡೋರ್ ಸಂಪೂರ್ಣವಾಗಿ ಕಿತ್ತು ಬಂದು ಕೆಳಗೆ ಬಿದ್ದು ಹೋಯಿತು. ಅದರಿಂದ ಹತಾಶನಾಗಿದ್ದಾನೆ ಆ ಯುವಕ.. ಇನ್ನೊಂದು ಕಡೆ ನಿಯಮಗಳಿಗೆ ವಿರುದ್ಧವಾಗಿ ಡೋರ್ ಓಪನ್ ಮಾಡಿದ ಎಂದು ಆತನನ್ನು ವಶಕ್ಕೆ ಪಡೆದಿದ್ದಾರೆ. 15 ದಿನಗಳ ಜೈಲು ಶಿಕ್ಷೆ ಜತೆಗೆ 70 ಸಾವಿರ ಯುವಾನ್‌ ದಂಡ ಸಹ ವಿಧಿಸಿದ್ದಾರೆ. ಅಂದರೆ ನಮ್ಮ ಕರೆನ್ಸಿಯಲ್ಲಿ ಅದರ ಬೆಲೆ ಸುಮಾರು ಏಳೂವರೆ ಲಕ್ಷಗಳು. ಈ ವಿಚಿತ್ರವಾದ ಘಟನೆ ಚೀನಾದಲ್ಲಿನ ಮಿಯಾನ್ಯಾಂಗ್ ನಂಜಿಯಾ ಏರ್‌‍ಪೋರ್ಟ್‌ನಲ್ಲಿ ಏಪ್ರಿಲ್ 27ರಂದು ನಡೆದಿದೆ.

ಚೀನಾದಲ್ಲಿ ಈ ರೀತಿ ವಿಮಾನದಲ್ಲಿ ಭೀಭತ್ಸವನ್ನು ಸೃಷ್ಟಿಸಿದ್ದು ಇದೇ ಹೊಸದಲ್ಲ. 2014ರಲ್ಲಿ ಇದೇ ರೀತಿ ಡೊಮೆಸ್ಟಿಕ್ ವಿಮಾನದಲ್ಲಿ ಓರ್ವ ಪ್ಯಾಸೆಂಜರ್ ಎಮರ್ಜೆನ್ಸಿ ಡೋರ್ ಓಪನ್ ಮಡಿದ. 2017ರಲ್ಲಿ ಓರ್ವ ಮಹಿಳಾ ಪ್ರಯಾಣಕಿ ವಿಮಾನದ ಇಂಜಿನ್‌ನಲ್ಲಿ ಕಾಯಿನ್ ಹಾಕಿದ್ದಳು. ಇನ್ನು ಈ ವರ್ಷದ ಜನವರಿಯಲ್ಲಿ ಸ್ಪೆಯಿನ್‌ನಲ್ಲಿ ಓರ್ವ ವ್ಯಕ್ತಿ ವಿಮಾನದಲ್ಲಿ ಕುಳಿತು ಬೋರ್ ಆಗುತ್ತಿದೆ ಎಂದು ವಿಮಾನದ ರೆಕ್ಕೆ ಮೇಲೆ ಹೋಗಿ ಕುಳಿತಿದ್ದ. ಆಗಾಗ ಇಂತಹ ಘಟನೆಗಳು ವಿಮಾನದಲ್ಲಿ ನಡೆಯುತ್ತಿರುತ್ತವೆ. ಈ ರೀತಿ ಘಟನೆಗಳೇ ಒಮ್ಮೆಮ್ಮೊ ದೊಡ್ಡ ಅಪಘಾತಗಳಿಗೂ ಕಾರಣವಾಗುತ್ತವೆ.

SHARE