12 ಮದುವೆ ಸಂಬಂಧಗಳನ್ನು ನೋಡಿದ…ಯಾವ ಹುಡುಗಿಯೂ ಇಷ್ಟಪಡಲಿಲ್ಲ.! ಪಕ್ಕದ ಮನೆ ಹುಡುಗಿ ಕಾರಣ ಎಂದು ಆಕೆಯನ್ನು ಏನು ಮಾಡಿದ ಗೊತ್ತಾ?

ಮದುವೆ ಎಂಬುದು ಜೀವನದಲ್ಲಿ ಯಾರಿಗೇ ಆಗಲಿ ಒಮ್ಮೆ ಮಾತ್ರ ಬರುವ ಶುಭ ಸಂದರ್ಭ. ಕೆಲವರು ಎರಡು, ಮೂರು, ನಾಲ್ಕು ಮದುವೆಗಳನ್ನು ಸಹ ಮಾಡಿಕೊಳ್ಳುತ್ತಾರೆ ಬಿಡಿ. ಅದು ಬೇರೆ ಸಂಗತಿ. ಆದರೆ ಯಾರಿಗೇ ಆಗಲಿ ಆ ಶುಭ ಸಂದರ್ಭ ಒಮ್ಮೆ ಮಾತ್ರ ಬರುತ್ತದೆ. ಆದರೆ ಕೆಲವರಿಗೆ ಯಾವುದೇ ಕಾರಣಕ್ಕೂ ಮದುವೆಯಾಗಲ್ಲ. ಒಂದು ಕಡೆ ವಯಸ್ಸು ಮೀರುತ್ತಿರುವುದು. ಎಷ್ಟೇ ಹುಡುಗಿಯರನ್ನು ನೋಡಿದರೂ ಮದುವೆಯಾಗಲ್ಲ. ಇದರಿಂದ ಮಾನಸಿಕವಾಗಿ ಕುಗ್ಗುವುದು ಸಹಜ. ಆದರೆ ಆ ಯುವಕ ಮಾತ್ರ ಮಾನಸಿಕವಾಗಿ ಕುಗ್ಗಿದ್ದಷ್ಟೇ ಅಲ್ಲ, ರಾಕ್ಷಸನಂತೆ ವರ್ತಿಸಿದ. ತನಗೆ ಮದುವೆಯಾಗದಿರಲು ಪಕ್ಕದ ಮನೆ ಹುಡುಗಿಯೇ ಕಾರಣ, ಆಕೆ ನನಗೆ ಮಾಟ ಮಂತ್ರ ಮಾಡಿಸಿದ್ದಾಳೆ ಎಂದು ನಂಬಿ ಅನಗತ್ಯವಾಗಿ ಏನೇನೂ ಗೊತ್ತಿಲ್ಲದ ಆ ಹುಡುಗಿಯನ್ನು ಮುಗಿಸಿದ. ಇಷ್ಟಕ್ಕೂ ನಡೆದದ್ದೇನೆಂದರೆ..

ಛತ್ತೀಸ್‌ಗಢ್ ರಾಜ್ಯದ ಮುರೇಥಿ ಗ್ರಾಮದಲ್ಲಿ ವಾಸವಾಗಿರುವ ಪಿಂಟೂಗೆ ಮದುವೆಯಾಗಿರಲಿಲ್ಲ. ಆತ 12 ಸಂಬಂಧಗಳನ್ನು ನೋಡಿದ್ದ. ಒಂದೂ ಸೆಟ್ ಆಗಲಿಲ್ಲ. ಇನ್ನೂ ಕೆಲವೊಮ್ಮೆಯಾದರೆ ಎಂಗೇಜ್‌ಮೆಂಟ್ ತನಕ ಬಂದಿದ್ದ ಸಂಬಂಧಗಳು ಸಹ ಕ್ಯಾನ್ಸಲ್ ಆದದ್ದು. ಇದರಿಂದ ಪಿಂಟೂ ತನಗೆ ಮದುವೆ ಆಗದಿರಲು ಕಾರಣ ಪಕ್ಕದ ಮನೆಯ ಅಮೆರಿಕ ಪಟೇಲ್ ಎಂಬ ಯುವತಿಯೇ ಕಾರಣ ಎಂದುಕೊಂಡ. ಆಕೆ ತನ್ನ ಮೇಲೆ ಮಾಟ ಮಂತ್ರ ಮಾಡಿಸಿದ್ದಾಳೆಂದು ನಂಬಿದ. ಈ ಹಿನ್ನೆಲೆಯಲ್ಲಿ ಆಕೆಯನ್ನು ಹೇಗಾದರೂ ಮಾಡಿ ಮುಗಿಸಬೇಕೆಂದು ಪ್ಲಾನ್ ಮಾಡಿದ.

ಆ ರೀತಿ ಪ್ಲಾನ್ ಮಾಡಿದ ಪಿಂಟೂ ಒಂದು ದಿನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅಮೆರಿಕ ಪಟೇಲ್ ಮೇಲೆ ಹಲ್ಲೆ ನಡೆಸಿದ. ಮನೆಯಲ್ಲಿ ಒಂಟಿಯಾಗಿದ್ದ ಸಮಯವನ್ನು ನೋಡಿ ಆಕೆ ಮೇಲೆ ಮೊದಲು ಬಡಿಗೆಯಿಂದ ಹಲ್ಲೆ ನಡೆಸಿದ. ಬಳಿಕ ಪಿಂಟೂ ಸಲ್ವಾರ್ ಕಮೀಜ್‍ನಿಂದ ನೇಣು ಬಿಗಿದ. ಆಬಳಿಕ ಆಕೆಯ ಕತ್ತು ಹಿಸುಕಿದ. ಅಲ್ಲಿಂದ ಪರಾರಿಯಾದ. ಆ ಯುವತಿಯನ್ನು ಪಿಂಟೂ ಸಾಯಿಸಿದ್ದು ಎಂದು ತಿಳಿದುಕೊಂಡ ಪೊಲೀಸರು ಆತನಿಗಾಗಿ ಬಲೆಬೀಸಿದರು. ಪಿಂಟೂ ಬಿಎ ಎರಡನೇ ವರ್ಷ ಓದುತ್ತಿದ್ದ. ಇದೀಗ ಪೊಲೀಸರ ಬಂಧನದಲ್ಲಿ ಪಿಂಟೂ ಇದ್ದಾನೆ. ಅದೇನೇ ಇರಲಿ ಸೈಕೋ ಒಬ್ಬನ ಕೈಗೆ ಸಿಕ್ಕಿದ ಯುವತಿ ಅನ್ಯಾಯವಾಗಿ ಪ್ರಾಣ ಕಳೆದುಕೊಂಡಳು. ಈ ರೀತಿಯ ದುಃಸ್ಥಿತಿ ಯಾರಿಗೂ ಬರಬಾರದು ಅಲ್ಲವೇ..?

SHARE