“ಹೆಲ್ಮೆಟ್ ಧರಿಸುವುದಿಲ್ಲ… ಸತ್ತರು ಗಂಡಸಿನಂತೆಯೇ ಸಾಯುತ್ತೇನೆ” ಎಂದು ಸ್ಟಿಕ್ಕರ್ ಅಂಟಿಸಿದ್ದ ಯುವಕನಿಗೆ ಬುದ್ದಿ ಕಲಿಸಿದ ಪೊಲೀಸ್

ಇದೊಂದು ವಿಶಿಷ್ಟ ಘಟನೆ ಎನ್ನಬಹುದು. ತಪ್ಪು ಮಾಡಿದ ವ್ಯಕ್ತಿಯೇ ನಾನು ತಪ್ಪು ಮಾಡಿದ್ದೇನೆ ಏನ್ ಮಾಡ್ತೀರಾ ? ಎಂದು ದಿಮಾಕಿನಿಂದ ಊರು ತಿರುಗುತ್ತಿರುವುದನ್ನು ಕಂಡ ಪೊಲೀಸ್ ಸರಿಯಾಗಿಯೇ ಟಾಂಗ್ ಕೊಟ್ಟಿದ್ದಾರೆ. ಹೌದು, ಹೈದ್ರಾಬಾದ್‍‍ನಲ್ಲಿ ಯುವಕನೊಬ್ಬ ಹೆಲ್ಮೆಟ್ ಇಲ್ಲದೆಯೇ ಬೈಕ್ ಚಲಾಯಿಸಿದ್ದಲ್ಲದೇ ಟ್ರಾಫಿಕ್ ಪೊಲೀಸರ ವಿರುದ್ಧವೇ ಪೊಸ್ಟರ್ ಅಂಟಿಸಿಕೊಂಡು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಗುರಿಯಾಗಿದ್ದಾನೆ. ಏನಪ್ಪಾ ಮ್ಯಾಟರ್ ಮುಂದೆ ಓದಿ…

ಸದ್ಯಕ್ಕೆ ಸಾಮಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಚಿತ್ರವು ಹೈದರಾಬಾದ್ ನಗರದಲ್ಲಿನ ಕೃಷ್ಣ ರೆಡ್ದಿ ಎಂಬ ಯುವಕ ತನ್ನ ಬೈಕ್‍‍ನ ಮೇಲೆ ‘ನಾನು ಹೆಲ್ಮೆಟ್ ಧರಿಸುವುದಿಲ್ಲ ನಾನು ಸತ್ತರು ಗಂಡಸಿನಂತೆಯೇ ಸಾಯುತ್ತೇನೆ’ ಎಂದು ಸ್ಟಿಕರ್ ಅಂಟಿಸಿಕೊಂಡದ್ದನು. ಜೊತೆಗೆ ತನ್ನ ಫೇಸ್‌ಬುಕ್ ಖಾತೆಯಲ್ಲಿ ಕೂಡ ಈ ಬಗ್ಗೆ ಬರೆದುಕೊಂಡಿದ್ದನಂತೆ.

ಈ ಫೋಟೋವನ್ನು ನೋಡಿದ ಹೈದ್ರಾಬಾದ್ ಪೊಲೀಸರು ಯುವಕನ ಸ್ಟಿಕರ್‌ಗೆ ಟಾಂಗ್ ಕೊಟ್ಟಿದ್ದು, ‘ಕೃಷ್ಣ ರೆಡ್ದಿಯವರೇ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ, ನಾವು ನಿಮ್ಮನ್ನು ಸಾಯುಲು ಬಿಡುವುದಿಲ್ಲ. ನಾವು ನಿಮ್ಮನ್ನು ಗಂಡಸಿನಂತೆಯೇ ಬದುಕಲು ನೋಡಲು ಇಚ್ಛಿಸುತ್ತೇವೆ. ಎಂದು ತಮ್ಮ ಫೇಸ್‍‍ಬುಕ್ ಪೇಜ್‍‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೋಲಿಸರಿಗೆ ಸಿಕ್ಕ ಕೃಷ್ಣ ಮತ್ತು ಆತನ ಬೈಕ್ ಮೇಲಿನ ಸಾಲುಗಳ ಬಗ್ಗೆ ಹೈದ್ರಾಬಾದ್ ಪೊಲೀಸರು ಯಾವ ರೀತಿಯ ಕ್ರಮಕ್ಕೆ ಮುಂದಾಗಿದ್ದಾರೆ ಎಂಬುದರ ಬಗ್ಗೆ ಮಾಹಿತಿಯು ಲಭ್ಯವಿಲ್ಲವಾದರೂ ಸಹ, ಪೊಲೀಸರು ತಮ್ಮಿಂದಾಗುವಷ್ಟು ಸರಿಯಾದ ಕ್ರಮಗಳನ್ನು ಮತ್ತು ಸೂಚನೆಗಳನ್ನು ನೀಡುತ್ತಲೇ ಇರುತ್ತಾರೆ ಎಂಬುದು ಖುಷಿಯ ವಿಚಾರವಾಗಿದೆ.

SHARE