ಹೋಳಿ ಹಬ್ಬದಂದು ಮೈಮೇಲೆ ಬೀಳುವ ಮೊದಲ ಬಣ್ಣ ನಿಮ್ಮ ಭವಿಷ್ಯ ನಿರ್ಧರಿಸುತ್ತೆ !!

ಹೋಳಿ ಹಬ್ಬಕ್ಕೆ ಮತ್ತೊಂದು ಹೆಸರೇ ಕಾಮನ ಹಬ್ಬ. ಈ ಹಬ್ಬದ ಅರ್ಥವೇ ಕೆಟ್ಟ ವಿಚಾರಗಳನ್ನು ದೂರ ಮಾಡಿಕೊಂಡು ಒಳ್ಳೆಯ ವಿಚಾರಗಳನ್ನು ಸ್ವೀಕರಿಸಬೇಕು ಎಂದು ಜನರಿಗೆ ಈ ಹಬ್ಬವು ಸಾರಿ ಹೇಳುತ್ತದೆ .ಶಿವನು ಈ ದಿನ ತನ್ನ ಮೂರನೇ ಕಣ್ಣನ್ನು ತೆರೆದು’ ಕಾಮನನ್ನು ಸುಟ್ಟಿದ್ದ ನೆನಪಿಗಾಗಿ ಕಾಮ ದಹನ ಮಾಡುತ್ತಾರೆ. ಚಿಕ್ಕವರು ದೊಡ್ಡವರು ಎನ್ನುವ ಭೇದ ಭಾವವಿಲ್ಲದೇ ಎಲ್ಲರೂ ತುಂಬಾ ಸಂತೋಷದಿಂದ ಈ ಹಬ್ಬವನ್ನು ಆಚರಿಸುತ್ತಾರೆ .

ಹೋಳಿ ಹಬ್ಬದಂದು ಹಚ್ಚುವ ಬಣ್ಣಗಳೂ ವಿಶೇಷತೆಯನ್ನು ಹೊಂದಿದೆ. ಹೋಳಿ ಹಬ್ಬದ ದಿನದಲ್ಲಿ ಮೊದಲು ಯಾವ ಬಣ್ಣ ನಮ್ಮ ಮೇಲೆ ಬೀಳುತ್ತದೆ ಎಂಬುದರ ಮೇಲೆ ನಮ್ಮ ಆ ವರ್ಷದ ಜೀವನ ಭವಿಷ್ಯ ಹೇಳುತ್ತದೆ ಎಂಬ ಐತಿಹ್ಯ ಉತ್ತರ ಭಾರತದಲ್ಲಿದೆ.
ಹಾಗಾಗಿಯೇ ಅಲ್ಲಿನ ಹಿರಿಯರು ತಮ್ಮ ಕುಟುಂಬಸ್ಥರಿಗೆ ಹೊರಗಡೆ ಹೋಗುವ ಮುನ್ನವೇ ಉತ್ತಮ ಸಂದೇಶ ಹಾಗೂ ಭವಿಷ್ಯ ಹೇಳುವಂತಹ ಬಣ್ಣವನ್ನು ಹಚ್ಚಿ ಭವಿಷ್ಯ ಚೆನ್ನಾಗಿರಲೆಂದು ಆಶೀರ್ವಾದ ಮಾಡುತ್ತಾರೆ.

ಹಿರಿಯರ ಆಶೀರ್ವಾದದ ನಂತರವೇ ಅಲ್ಲಿನ ನಾಗರೀಕರು ಸ್ನೇಹಿತರೊಡನೆ ಬಣ್ಣದೋಕುಳಿ ಆಡುವುದು. ನೀವು ಕೂಡ ಈ ಬಣ್ಣಗಳ ಸಂದೇಶ ತಿಳಿದು ನಿಮ್ಮ ಆತ್ಮೀಯರಿಗೆ ಒಳ್ಳೆಯ ಸಂದೇಶದ ಬಣ್ಣವನ್ನು ಹಚ್ಚಿ. ಹೋಳಿ ಹಬ್ಬದ ಸಂದೇಶ ಹೇಳುವ ಕೆಲವು ಬಣ್ಣಗಳು ಇಲ್ಲಿವೆ.

1.ನೀಲಿ: ಪ್ರಶಾಂತತೆಯ ಪ್ರತೀಕವಾಗಿದ್ದು, ಆನಂದ ಮತ್ತು ಮನಸ್ಸಿಗೆ ಉಲ್ಲಾಸ ನೀಡುತ್ತದೆ.
2. ಹಸಿರು: ಇದರ ಪ್ರಭಾವ ನಿಧಾನವಾದರೂ ಈ ಬಣ್ಣದಿಂದ ಶಾಂತಿ, ನೆಮ್ಮದಿ, ವಿಶ್ರಾಂತಿ ಲಭ್ಯ.
3. ನೇರಳೆ: ಇದು ಮನಸ್ಸಿಗೆ ಪ್ರಶಾಂತತೆಯ ಅನುಭವ ನೀಡುತ್ತದೆ.
4.ಹಳದಿ: ಇದು ಶಕ್ತಿಶಾಲಿಯ ಸಂಕೇತ ಮತ್ತು ವ್ಯಾಮೋಹ ವರ್ಧನೆಯಾಗಿದ್ದು, ಮನಸ್ಥಿತಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
5. ಕೆಂಪು: ಈ ಬಣ್ಣ ಭಾವೋದ್ವೇಗ ಹೆಚ್ಚಿಸುತ್ತದೆ.
6. ಕಿತ್ತಳೆ: ಸಾಮಾನ್ಯವಾಗಿ ಕಿತ್ತಳೆ ಬಣ್ಣ ಮನಸ್ಸಿನ ಭಾವನೆ, ವರ್ತನೆಗಳ ಮೇಲೆ ನೇರವಾಗಿ ಪರಿಣಾಮ ಬೀರುವುದಲ್ಲದೆ, ಈ ಬಣ್ಣವು ತೀಕ್ಷ್ಣ ಸ್ವಭಾವ ಹಾಗೂ ಸೌಹಾರ್ದ ರೂಪವನ್ನು ಪಡೆದಿದೆ. ಇದರಿಂದ ವ್ಯಾಮೋಹ ಕೂಡ ಹೆಚ್ಚಾಗುತ್ತದೆ.

ನೀವು ಕೂಡ ಈ ಬಣ್ಣಗಳ ಸಂದೇಶ ತಿಳಿದು ನಿಮ್ಮ ಆತ್ಮೀಯರಿಗೆ ಒಳ್ಳೆಯ ಸಂದೇಶದ ಬಣ್ಣವನ್ನು ಹಚ್ಚಿ ಹಾಗು ನಿಮ್ಮ ಸ್ನೇಹಿತರಿಗೆ ಒಳ್ಳೆಯ ಭವಿಷ್ಯ ತರುವಂತಹ ಬಣ್ಣವನ್ನು ಹಚ್ಚಿ ನೀವು ಸಹ ಬಣ್ಣಗಳ ಹಬ್ಬವಾದ ಹೋಳಿ ಹಬ್ಬವನ್ನು ಸಂತೋಷದಿಂದ ಆಚರಿಸಿ.

SHARE