ಮಾವಿನ ಹಣ್ಣುಗಳು ಸಹಜವಾಗಿ ಹಣ್ಣಾಗಿದ್ದೇ, ರಾಸಾಯನಿಕಗಳಿಂದ ಹಣ್ಣಾಗಿಸಿದ್ದಾರಾ ಅಂತ ತಿಳಿದುಕೊಳ್ಳುವುದು ಹೇಗೆ..?

ಈ ಸೀಸನ್‌ನಲ್ಲಿ ನಮಗೆ ಅಧಿಕವಾಗಿ ಲಭಿಸುವ ಹಣ್ಣುಗಳಲ್ಲಿ ಮಾವಿನಹಣ್ಣು ಸಹ ಒಂದು. ಇವನ್ನು ತಿನ್ನುವುದರಿಂದ ನಮಗೆ ಅನೇಕ ಲಾಭಗಳಿವೆ. ಅನೇಕ ಆರೋಗ್ಯಕರ ಪ್ರಯೋಜನಗಳನ್ನು ನೀಡುವ ಔಷಧಿ ಗುಣಗಳು ಮಾವಿನ ಹಣ್ಣಿನಲ್ಲಿವೆ. ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳು ಮಾವಿನ ಹಣ್ಣಿನ ಮೂಲಕ ನಮಗೆ ಲಭಿಸುತ್ತವೆ. ಆದರೆ ಬಹಳಷ್ಟು ಮಂದಿ ವ್ಯಾಪಾರಿಗಳು ಮಾವಿನಹಣ್ಣುಗಳನ್ನು ಗಿಡದಲ್ಲೇ ಹಣ್ಣಾಗಲು ಬಿಡುತ್ತಿಲ್ಲ. ಹಸಿಯಾಗಿರುವ ಅವನ್ನು ತಂದು ಕಾರ್ಬೈಡ್‌ನಂತಹ ರಾಸಾಯನಿಕಗಳನ್ನು ಹಾಕಿ ಹಣ್ಣಾಗಿಸುತ್ತಿದ್ದಾರೆ. ಈ ರೀತಿಯ ಹಣ್ಣುಗಳನ್ನು ತಿನ್ನುವುದರಿಂದ ಅನೇಕ ಅನಾರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಆದರೆ ಮಾರುಕಟ್ಟೆಯಲ್ಲಿ ನಮಗೆ ಲಭಿಸುವ ಮಾವಿನ ಹಣ್ಣುಗಳನ್ನು ಸಹಜವಾಗಿ ಹಣ್ಣಾಗಿಸಿದ್ದಾರಾ? ರಾಸಾಯನಿಕಗಳನ್ನು ಬಳಸಿ ಹಣ್ಣಾಗಿಸಿದ್ದಾರಾ? ಎಂದು ತಿಳಿದುಕೊಳ್ಳುವುದು ಮುಖ್ಯ. ಹಾಗಿದ್ದರೆ ಸಹಜವಾಗಿ ಹಣ್ಣಾಗಿದ್ದನ್ನು, ಕೃತಕವಾಗಿ ಹಣ್ಣಾಗಿರುವುದನ್ನು ತಿಳಿದುಕೊಳ್ಳುವುದು ಹೇಗೆ? ಅವನ್ನು ಹೇಗೆ ಗುರುತಿಸುವುದು ಎಂದು ಈಗ ತಿಳಿದುಕೊಳ್ಳೋಣ..!

1. ಬಣ್ಣ
ಸಹಜಸಿದ್ಧವಾಗಿ ಹಣ್ಣಾದ ಮಾವು ಸಂಪೂರ್ಣ ಹಳದಿ ಬಣ್ಣದಲ್ಲಿರುತ್ತದೆ. ಆದರೆ ಕೃತಕವಾಗಿ ಹಣ್ಣಾಗಿಸಿದ ಮಾವಿನ ಹಣ್ಣಿನ ಮೇಲೆ ಅಲ್ಲಲ್ಲಿ ಎಲೆಹಸಿರು ಬಣ್ಣದ ಪ್ಯಾಚ್‌ಗಳು ಇರುತ್ತವೆ. ಈ ವ್ಯತ್ಯಾಸವನ್ನು ಗಮನಿಸಬೇಕು.

2. ರುಚಿ
ರಾಸಾಯನಿಕಗಳನ್ನು ಬಳಸಿ ಹಣ್ಣಾಗಿಸಿದ ಮಾವು ತಿಂದರೆ ಸಿಹಿಯ ಜತೆಗೆ ರುಚಿ ಕಡಿಮೆ ಇರುತ್ತದೆ. ಇದರ ಜತೆಗೆ ಹಣ್ಣನ್ನು ತಿನ್ನುವಾಗ ನಾಲಿಗೆ ಉರಿದಂತೆ ಅನ್ನಿಸುತ್ತದೆ. ಯಾಕೆಂದರೆ ಅದರಲ್ಲಿ ಇನ್ನೂ ರಾಸಾಯಾನಿಕ ಉಳಿದಿದ್ದರೆ ಅದು ನಮ್ಮ ನಾಲಿಗೆಗೆ ತಾಕಿಗದಾಗ ಉರಿ ಅನ್ನಿಸುತ್ತದೆ.

3. ತಿರುಳು
ರಾಸಾಯನಿಕಗಳನ್ನು ಬಳಸಿ ಹಣ್ಣಾಗಿಸಿದ ಮಾವಿನ ತಿರುಳು ಗಾಢ ಬಣ್ಣದಲ್ಲಿರುತ್ತದೆ. ಅದೇ ರೀತಿ ಸಹಜವಾಗಿ ಹಣ್ಣಾದ ಮಾವಿನ ತಿರುಳು ಹಳದಿ, ಕೆಂಪು ಬಣ್ಣಗಳಲ್ಲಿರುತ್ತದೆ.

4. ಜ್ಯೂಸ್
ಸಹಜಸಿದ್ಧವಾಗಿ ಹಣ್ಣಾದ ಮಾವಿನಿಂದ ಜ್ಯೂಸ್ ತೆಗೆದರೆ ಹೆಚ್ಚು ಬರುತ್ತದೆ. ಅದೇ ರಾಸಾಯನಿಕಗಳನ್ನು ಬಳಸಿ ಹಣ್ಣಾಗಿಸಿದ ಮಾವಿನಿಂದ ಜ್ಯೂಸ್‌ ತೆಗೆದರೆ ಹೆಚ್ಚು ಬರಲ್ಲ. ಕಡಿಮೆ ಜ್ಯೂಸ್ ಬರುತ್ತದೆ.

5. ಹಣ್ಣು
ಸಹಜಸಿದ್ಧವಾಗಿ ಹಣ್ಣಾದ ಮಾವಿನ ಹಣ್ಣು ನೋಡಲು ಸಾಮಾನ್ಯವಾಗಿ ಇರುತ್ತದೆ. ಆದರೆ ರಾಸಾಯನಿಕಗಳನ್ನು ಬಳಸಿ ಹಣ್ಣಾಗಿಸಿದ ಮಾವು ಹೊಳೆಯುತ್ತಾ ಆಕರ್ಷಕವಾಗಿ ಕಾಣಿಸುತ್ತದೆ.

SHARE