ಓಂಕಾಳು ಬಳಸಿ ಕೇವಲ 15 ದಿನಗಳಲ್ಲಿ 5 ಕೆಜಿ ತೂಕ ಕಡಿಮೆ ಮಾಡಿಕೊಳ್ಳುವ ಸುಲಭ ವಿಧಾನ

ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು, ತೂಕವನ್ನು ಕಡಿಮೆ ಮಾಡಿಕೊಳ್ಳಬೇಕಾದರೆ ಸಾಕಷ್ಟು ಬೆವರರಿಸಬೇಕು.ಅದು ತುಂಬಾ ಕಷ್ಟವಾದ ಕೆಲಸ. ಕಠಿಣವಾದ ಡಯಟ್, ವ್ಯಾಯಾಮಗಳನ್ನು ಮಾಡಿದರೂ ತೂಕ ಕಡಿಮೆ ಮಾಡಿಕೊಳ್ಳುವುದು ಎಂಬುದು ತುಂಬಾ ಕಷ್ಟಕರವಾದ ಕೆಲಸ. ಪ್ರತಿ ದಿನ ಆಹಾರ ನಿಯಮಗಳನ್ನು ಪಾಲಿಸುತ್ತಾ ನಿತ್ಯ ವ್ಯಾಯಾಮ ಮಾಡುತ್ತಿದ್ದರೆ ಕ್ರಮೇಣ ತೂಕ ಕಡಿಮೆಯಾಗುತ್ತದೆ. ಆದರೆ ಓಂಕಾಳನ್ನು ನಾವೀಗ ಹೇಳುವ ವಿಧದಲ್ಲಿ ಬಳಸಿದರೆ 15 ದಿನಗಳಲ್ಲಿ 5 ಕೆಜಿ ತೂಕವನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು. ಓಂಕಾಳಿನಲ್ಲಿ ಅಧಿಕವಾಗಿ ಇರುವ ಥೈಮಲ್ ಎಂಬ ರಾಸಾಯನಿಕ ಬ್ಯಾಕ್ಟೀರಿಯಾ, ಫಂಗಲ್ ರೋಗಗಳನ್ನು ನಿಯಂತ್ರಿಸಲು ಸಹಕರಿಸುತ್ತದೆ. ಅಷ್ಟೇ ಅಲ್ಲದೆ ಆಂಟಿ ಸೆಫ್ಟಿಕ್ ಆಗಿಯೂ ಕೆಲಸ ಮಾಡುತ್ತದೆ.

ಓಂಕಾಳಿನಲ್ಲಿ ಅನೇಕ ವಿಟಮಿನ್‌ಗಳು, ಖನಿಜಗಳು, ನಾರಿನಂಶ, ಆಂಟಿ ಆಕ್ಸಿಡೆಂಟ್‍ಗಳು ಸಹ ಸಮೃದ್ಧವಾಗಿರುತ್ತವೆ. ಈಗ ಓಂಕಾಳನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿದುಕೊಳ್ಳೋಣ. ಇಷ್ಟೆಲ್ಲಾ ಪೋಷಕಾಂಶಗಳುಳ್ಳ ಓಂಕಾಳು ತೂಕವನ್ನು ಕಡಿಮೆ ಮಾಡುವಲ್ಲಿ ತುಂಬಾ ಉಪಯುಕ್ತ. ಆದರೆ ಓಂಕಾಳನ್ನು ತೆಗೆದುಕೊಳ್ಳಲು ಸಹ ಒಂದು ಪದ್ಧತಿ ಇದೆ. ಈಗ ಆ ಪದ್ಧತಿ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ಒಂದು ಸ್ಫೂನ್ ಓಂಕಾಳನ್ನು ಒಂದು ಗ್ಲಾಸ್ ನೀರಿನಲ್ಲಿ ರಾತ್ರಿಯಲ್ಲಾ ನೆನೆಸಬೇಕು. ಮರುದಿನ ಬೆಳಗ್ಗೆ ಓಂಕಾಳಿನ ಸಮೇತ ನೀರನ್ನು ಕುದಿಸಬೇಕು. ಕುದಿಸಿದ ನೀರನ್ನು ಶೋಧಿಸಿ ಕುಡಿಯಬೇಕು.. ಈ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಈ ಓಂಕಾಳು ನೀರನ್ನು ಕುಡಿದ ಬಳಿಕ ಒಂದು ಗಂಟೆ ಕಾಲ ಏನನ್ನೂ ತಿನ್ನಬಾರದು. ಈ ರೀತಿ ಪ್ರತಿ ದಿನ ಮಾಡಿದರೆ ತೂಕ ಖಂಡಿತ ಇಳಿಯುತ್ತಾರೆ. ಇನ್ನೂ ಬೇಗ ಒಳ್ಳೆಯ ಫಲಿತಾಂಶ ಸಿಗಬೇಕಾದರೆ ಮಧ್ಯಾಹ್ನ ಊಟ ಮಾಡುವುದಕ್ಕೂ ಒಂದು ಗಂಟೆ ಮೊದಲು ಸಹ ಇದನ್ನು ಕುಡಿಯಬೇಕು. ಈ ರೀತಿ ಬೆಳಗ್ಗೆ, ಮಧ್ಯಾಹ್ನ ತಪ್ಪದೆ ಮಾಡಿದರೆ 15 ದಿನಗಳಲ್ಲಿ ನಿಮ್ಮ ತೂಕ 5 ಕೆಜಿಯಷ್ಟು ಕಡಿಮೆಯಾಗುತ್ತದೆ. ಬೇಕಿದ್ದರೆ ಮಾಡಿ ನೋಡಿ.

SHARE