ಅಶ್ಲೀಲ ಚಿತ್ರಗಳನ್ನು ನೋಡುತ್ತಾ ತಂದೆಗೆ ಸಿಕ್ಕಿಬಿದ್ದ… ಬಳಿಕ ಆ ತಂದೆ ಏನು ಮಾಡಿ ಅಂತ ಗೊತ್ತಾದರೆ ಶಾಕ್ ಆಗ್ತೀರ..!

ಅಶ್ಲೀಲ… ಮೊಬೈಲ್‌ನಲ್ಲಿ ಸುಲಭವಾಗಿ ಸಿಗುತ್ತದೆ. ನೆಟ್ ಇದ್ದರೆ ಸಾಕು ಜಗತ್ತಿನ ಯಾವ ಮೂಲೆಯಲ್ಲಿ ಏನು ಇದ್ದರೂ.. ನಮ್ಮ ಮೊಬೈಲ್‍ನಲ್ಲಿ ಪ್ರತ್ಯಕ್ಷವಾಗುತ್ತದೆ. ಚಿಕ್ಕಮಕ್ಕಳಿಗೂ ಸಹಿತ ಮೊಬೈಲ್ ಕಡ್ಡಾಯವಾಗಿರುವ ಈ ದಿನಗಳಲ್ಲಿ ಅದೇ ಮಟ್ಟದಲ್ಲಿ ಅಶ್ಲೀಲ ಸಹ ಲಭ್ಯವಾಗುತ್ತಿದೆ. ಇದರಿಂದ ಯುವಕರು ಅಡ್ಡದಾರಿ ತುಳಿಯುವಂತಾಗಿದೆ. ಇಂದಿನ ಪೋಷಕರಿಗೆ ಇದು ತಲೆನೋವಾಗಿದೆ. ಇಂತಹ ಘಟನೆಗಳು ಹೈದರಾಬಾದಿನ ಪಾತಬಸ್ತಿಯ ಪಹಡಿಫರೀಫ್‌ನಲ್ಲಿ ನಡೆದಿದೆ. ಮಗ ಪದೇಪದೇ ಮೊಬೈಲ್ ನೋಡುತ್ತಿದ್ದ ಕಾರಣ ಬುದ್ಧಿ ಹೇಳಿದ್ದರು ತಂದೆ. ಆದರೂ ಕೇಳದ ಕಾರಣ ಕೈಯನ್ನೇ ಕತ್ತರಿಸಿದ್ದಾನೆ. ಈ ಶಾಕಿಂಗ್ ಘಟನೆಯ ವಿವರಗಳನ್ನು ನೋಡುವುದಾದರೆ…

 

ಹೈದರಾಬಾದಿನ ಪಾತಬಸ್ತಿ ಪಹಡಿಫರೀಷ್ ಜಲ್ ಪಲ್ಲಿ ಪ್ರದೇಶ ಮೂಲದ ಮಹ್ಮದ್ ಖಯ್ಯಂ ಎಲಕ್ಟ್ರಿಷಿಯನ್. ಹಿರಿಯ ಮಗ ಖಾಲೆದ್ ಖುರೇಷಿ (18) ಲೋಕಲ್ ಕೇಬಲ್ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಸ್ವಲ್ಪ ಸಮಯದಿಂದ ಖುರೇಷಿ ವರ್ತನೆಯಲ್ಲಿ ಬದಲಾವಣೆ ಬಂತು. ಕೆಲಸಕ್ಕೂ ಸರಿಯಾಗಿ ಹೋಗುತ್ತಿರಲಿಲ್ಲ. ಯಾವಾಗಲೂ ಮೊಬೈಲ್ ನೋಡುತ್ತಾ ಇರುತ್ತಿದ್ದ. ಇದನ್ನು ಗಮನಿಸಿದ ತಂದೆ.. ಮಗ ಏನು ಮಾಡುತ್ತಿದ್ದಾನೆ ಎಂದು ಒಂದು ಕಣ್ಣಿಟ್ಟ. ಅಶ್ಲೀಲ ಚಿತ್ರಗಳನ್ನು ನೋಡುತ್ತಿದ್ದಾನೆಂದು ತಿಳಿದುಕೊಂಡು ಅವನಿಗೆ ಬುದ್ಧಿ ಹೇಳಿದ್ದ. ಆದರೂ ಮಗನ ವರ್ತನೆಯಲ್ಲಿ ಬದಲಾವಣೆ ಬರಲಿಲ್ಲ. ಮಗನ ಮೊಬೈಲ್ ಬಚ್ಚಿಟ್ಟ. ತಂದೆ ಮಗನ ನಡುವೆ ಜಗಳ ನಡೆಯಿತು. ಒಂದು ಸಲ ತಂದೆ ಮೇಲೆ ದಾಳಿ ಮಾಡಿ ಮನೆಯಿಂದ ಓಡಿಹೋಗಿದ್ದ. ಮತ್ತೆ ಸಮಾಧಾನ ಮಾಡಿ ಮನೆಗೆ ಕರೆತಂದರು ತಂದೆ. ಆದರೂ ಕೇಳದೆ ಮಾರ್ಚ್ 5ರಂದು ಸೋಮವಾರ ಮನೆಯಲ್ಲಿ ಖುರೇಷಿ ಅದೇ ಕೆಲಸವಾಗಿ ಮತ್ತೆ ಮೊಬೈಲ್ ನೋಡುತ್ತಾ ತಂದೆ ಕಣ್ಣಿಗೆ ಬಿದ್ದ.

ಮಗನ ವರ್ತನೆಯಲ್ಲಿ ಬದಲಾವಣೆ ಬರದ ಕಾರಣ ಒಮ್ಮೆಲೆ ಅವರ ಆಕ್ರೋಶ ಕಟ್ಟೆಯೊಡೆಯಿತು. ತಂದೆ ಖಯ್ಯಾಂ…. ಮಾಂಸ ಕತ್ತರಿಸುವ ಕತ್ತಿಯಲ್ಲಿ ಮಗನ ಕೈಯನ್ನು ಕತ್ತರಿಸಿದರು. ಈ ವಿಷಯ ತಿಳಿದುಕೊಂಡ ನೆರೆಹೊರೆಯವರು ಖುರೇಷಿಯನ್ನು ಆಸ್ಪತ್ರೆಗೆ ದಾಖಲಿಸಿಅರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಮಗನ ಕೈ ಕತ್ತರಿಸಿದ್ದು ನಾನೇ ಎಂದು ತಂದೆ ಪೊಲೀಸರ ಬಳಿ ಒಪ್ಪಿಕೊಂಡಿದ್ದಾರೆ.

SHARE