ಪೀರಿಯಡ್ಸ್ ಟೈಮ್‌ನಲ್ಲಿ ಮಹಿಳೆಯರು ಆ ದೇವಸ್ಥಾನಕ್ಕೆ ಹೋದರೆ ಏನಾಗುತ್ತದೆ ಗೊತ್ತಾ..? ಜೇನು ದಾಳಿ ಮಾಡುತ್ತದೆ.. ಅಷ್ಟೇ ಅಲ್ಲ.?

ನಮ್ಮ ದೇಶ ತಾಂತ್ರಿಕವಾಗಿ ಅದೆಷ್ಟೇ ಮುಂದೆ ಸಾಗುತ್ತಿದ್ದರೂ ಮೂಢನಂಬಿಕೆಗಳ ವಿಷಯದಲ್ಲಿ ಮಾತ್ರ ಇನ್ನೂ ಹಿಂದೆ ಬಿದ್ದೆದೆ ಎಂದು ಹೇಳಬಹುದು. ಈಗಲೂ ನಮ್ಮ ದೇಶದಲ್ಲಿ ಅನೇಕ ಪ್ರದೇಶಗಳಲ್ಲಿ ವಿಚಿತ್ರ ಸಂಪ್ರದಾಯಗಳು,ಆಚರಣೆಗಳು ಇವೆ. ಮುಖ್ಯವಾಗಿ ಪುರಾತನ, ಐತಿಹಾಸಿಕ ಆಲಯಗಳ ವಿಚಾರಕ್ಕೆ ಬಂದರೆ ಅವುಗಳಲ್ಲಿ ಅನೇಕ ನಂಬಿಕೆಗಳನ್ನು ಪಾಲಿಸಲಾಗುತ್ತಿದೆ. ಪ್ರಕಾಶಂ ಜಿಲ್ಲೆ ರಾಚರ್ಲ ಮಂಡಲದ ಜಿ.ಪುಲ್ಲಲಚೆರುವು ಸಮೀಪದಲ್ಲಿ ನಲ್ಲಮಲ ಅರಣ್ಯ ಪ್ರದೇಶ ಇದೆ. ಅಲ್ಲಿ ನೆಮಲಿಗುಂಡ ರಂಗನಾಯಕ ಸ್ವಾಮಿ ದೇವಾಲಯದಲ್ಲಿ ಮೂಢ ವಿಶ್ವಾಸಗಳನ್ನು ಈಗಲೂ ಪಾಲಿಸಲಾಗುತಿದೆ. ಇಷ್ಟಕ್ಕೂ ಅದೇನೆಂದರೆ…

ನೆಮಲಿಗುಂಡ್ಲ ರಂಗನಾಯಕ ಸ್ವಾಮಿ ಆಲಯಕ್ಕೆ ಮುಟ್ಟಾದ ಮಹಿಳೆಯರು ಬಂದರೆ ಅವರ ಮೇಲೆ ಆಲಯದ ಪ್ರಾಂಗಣದಲ್ಲಿನ ಮರಗಳಿಗೆ ಕಟ್ಟಿರುವ ಜೇನು ದಾಳಿ ಮಾಡುತ್ತದಂತೆ. ಹಾಗಾಗಿ ಪೀರಿಯಡ್ಸ್ ಸಮಯದಲ್ಲಿ ಮಹಿಳೆಯರು ಯಾರೂ ಈ ಆಲಯಕ್ಕೆ ಬರಲ್ಲ. ಬಂದರೆ ಅವರ ಜತೆಗೆ ಬಂದ ಪುರುಷರ ಮೇಲೂ ಆ ಜೇನು ದಾಳಿ ಮಾಡುತ್ತದಂತೆ. ಕೆಲವರಿಗೆ ಈ ಅನುಭವ ಸಹ ಆಗಿದೆಯಂತೆ. ಹಾಗಾಗಿ ಆ ಆಲಯದಲ್ಲಿ ಅದೆಷ್ಟೋ ಕಾಲದಿಂದ ಈ ಆಚಾರಗಳನ್ನು ಪಾಲಿಸಲಾಗುತ್ತಿದೆ.

1,500 ವರ್ಷಗಳ ಹಿಂದೆ ಮಯೂರ ಮಹರ್ಷಿ ಬೇಡಿಕೆ ಮೇರೆಗೆ ಶ್ರೀ ಮಹಾವಿಷ್ಣು ಇಲ್ಲಿ ಸ್ವಯಂಭೂ ಆಗಿ, ರಂಗ ಎಂಬ ಗಿರಿಜನ ಮಹಿಳೆಯ ತಪಸ್ಸಿಗೆ ಮೆಚ್ಚಿ ಆಕೆಯನ್ನು ಮದುವೆಯಾಗಿ ರಂಗನಾಯಕನಾದ ಎಂದು ಸ್ಥಳೀಯರು ಹೇಳುವ ಸ್ಥಳಪುರಾಣ. ಇನ್ನು ಮಯೂರ ಮಹರ್ಷಿ ನವಿಲು ಆಕಾರನ್ನು ಧರಿಸಿ ತನ್ನ ಉದ್ದವಾದ ಮೂಗು, ಕಾಲಿನ ಉಗುರುಗಳ ಸಹಾಯದಿಂದ ಆಲಯ ಸಮೀಪದಲ್ಲಿ ಒಂದು ನೀರಿನ ಹೊಂಡವನ್ನು ತೋಡಿ ದಾಹವನ್ನು ತೀರಿಸಿಕೊಂಡ ಎಂದು, ಹಾಗಾಗಿಯೇ ಇದನ್ನು ’ನೆಮಲಿ ಗುಂಡ’ (ನವಿಲಿನ ಹೊಂಡ) ಎಂದು ಕರೆಯುತ್ತಾರೆ. ಕಾಲಕ್ರಮೇಣ ಈ ಪ್ರದೇಶ ನೆಮಲಿ ಗುಂಡ್ಲ ರಂಗನಾಯಕಸ್ವಾಮಿ ಕ್ಷೇತ್ರವಾಗಿ ಪ್ರಸಿದ್ಧವಾಯಿತು. ಅದೇ ರೀತಿ ಜೇನು ಈ ಕ್ಷೇತ್ರದಲ್ಲಿ ಪವಿತ್ರತೆಯನ್ನು ಕಾಪಾಡುತ್ತದೆ. ಮುಖ್ಯವಾಗಿ ಪೀರಿಯಡ್ಸ್ ಸಮಯದಲ್ಲಿ ಮಹಿಳೆಯರು ಆಲಯಕ್ಕೆ ಪ್ರವೇಶಿಸದಂತೆ ಜೇನು ತಡೆಯುತ್ತದೆ ಎಂದು ಸ್ಥಳಪುರಾಣದ ಪ್ರಕಾರ ಹೇಳುತ್ತಾರೆ. ಇನ್ನು ಇದೇ ಸಂಗತಿಯ ಬಗ್ಗೆ ಇಲ್ಲಿ ಹೆಚ್ಚಾಗಿ ಪ್ರಚಾರ ನೀಡಲಾಗುತ್ತಿದೆ. ಅದೇನೇ ಇರಲಿ ಈ ಆಚಾರ ಶಾಕಿಂಗ್ ಅನ್ನಿಸುತ್ತದೆ ಅಲ್ಲವೇ..?

SHARE