ಬಾಯ್‍ಫ್ರೆಂಡ್ ವಿಷಸ್… ಐ ಲವ್ ಯೂ ಎಂದು ಜಾಹ್ನವಿ ರಿಪ್ಲೈ.! ಇಷ್ಟಕ್ಕೂ ಆತ ಯಾರು ಗೊತ್ತಾ.? ಶ್ರೀದೇವಿ ಫ್ಯಾಮಿಲಿಗೆ ಆತ ಏನಾಗುತ್ತಾನೆ.?

ತನ್ನ ಮಗಳ ಕರಿಯರ್‌ಗಾಗಿ ತಾಪತ್ರಯಪಟ್ಟ ಶ್ರೀದೇವಿ ಸರಿಯಾಗಿ ತನಗೆ ಅಗತ್ಯವಿದ್ದ ಸಮಯದಲ್ಲಿ ದೂರ ಆಗಿದ್ದು ವಿಷಾದನೀಯ. ಮಕ್ಕಳ ಜವಾಬ್ದಾರಿ ತಂದೆ ಬೋನಿ ವಹಿಸಿಕೊಂಡಿದ್ದರೂ ತಾಯಿ ಇಲ್ಲದ ಕೊರತೆಯನ್ನು ತೀರಿಸಲಾಗದು ಅಲ್ಲವೆ. ಜಾಹ್ನವಿ 21ರ ಹರೆಯಕ್ಕೆ ಅಡಿಯಿಟ್ಟ ವಿಷಯ ಗೊತ್ತಿದ್ದೇ. ಈ ಸಂದರ್ಭದಲ್ಲಿ ಜಾನ್ವಿ ತಾಯಿಗೆ ಬರೆದ ಒಂದು ಪತ್ರ ಎಲ್ಲರ ಕಣ್ಣಲ್ಲಿ ನೀರು ತರಿಸಿತು. ತಾಯಿಯನ್ನು ಕಳೆದುಕೊಂಡು ನೋವಿನಲ್ಲಿದ್ದ ಜಾಹ್ನವಿಗೆ ಕುಟುಂಬ ಸದಸ್ಯರು, ಗೆಳೆಯರು ಆಕೆಗೆ ಬರ್ತ್ ಡೇ ವಿಷಸ್ ಹೇಳಿ ಧೈರ್ಯ ತುಂಬುವ ಪ್ರಯತ್ನ ಮಾಡಿದರು. ಇತ್ತೀಚೆಗೆ ಜಾಹ್ನವಿ ಕಪೂರ್ ಬಾಯ್ ಫ್ರೆಂಡ್ ಅಕ್ಷತ್ ರಂಜನ್ ಸಹ ಜಾಹ್ನವಿಗೆ ಇನ್‌ಸ್ಟಾಗ್ರಾಮ್ ಮೂಲಕ ವಿಶ್ ಮಾಡಿದರು. ಅದಕ್ಕೆ ಜಾಹ್ನವಿ ಸಹ ರಿಫ್ಲೈ ನೀಡಿದ್ದಾರೆ.

ಯಾರೀ ಅಕ್ಷತ್ ರಂಜನ್? ಜಾಹ್ನವಿ ಜತೆಗೆ ಪರಿಚಯ ಹೇಗೆ?
ಜಾಹ್ನವಿ ಬಾಯ್ ಫ್ರೆಂಡ್ ಅಕ್ಷತ್ ರಂಜನ್… ಕಪೂರ್ ಫ್ಯಾಮಿಲಿಗೆ ಸಹ ತುಂಬಾ ಕ್ಲೋಸ್. ಅಕ್ಷತ್ ರಂಜನ್ ಸದ್ಯಕ್ಕೆ ಅಮೆರಿಕಾದಲ್ಲಿ ಓದುತ್ತಿದ್ದಾನೆ. ಮುಂಬೈನ ಶಾಲಾ ದಿನಗಳಿಂದಲೇ ಅಕ್ಷತ್, ಜಾಹ್ನವಿ ತುಂಬಾ ಕ್ಲೋಸ್ ಫ್ರೆಂಡ್ಸ್. ಆಗಿನಿಂದಲೇ ಇಬ್ಬರ ನಡುವೆ ಒಳ್ಳೆಯ ಸ್ನೇಹ ಸಂಬಂಧ ಉಂಟಾಯಿತು. ಅವರ ಸ್ನೇಹದ ಕಾರಣ ಕಪೂರ್ ಫ್ಯಾಮಿಲಿಗೂ ಹತ್ತಿರವಾದ. ಜಾಹ್ನವಿಗೆ ಇರುವ ಸ್ನೇಹಿತರಲ್ಲಿ ಅಕ್ಷತ್ ರಂಜತ್ ತುಂಬಾ ವಿಶೇಷ ಎನ್ನುತ್ತಾರೆ. ಶ್ರೀದೇವಿ ಬದುಕಿದ್ದ ಸಮಯದಲ್ಲಿ ಬೋನಿ ಕಪೂರ್ ಫ್ಯಾಮಿಲಿ ಔಟಿಂಗ್‌ಗೆ ಹೋಗಿದ್ದ ಸಮಯದಲ್ಲಿ ಅಕ್ಷತ್ ರಂಜನ್ ಸಹ ಅವರೊಂದಿಗೆ ಬೆರೆತು ಕಾಣಿಸಿಕೊಂಡಿದ್ದರು. ಗೌರಿ ಶಿಂಡೆ ನಿರ್ದೇಶನದಲ್ಲಿ ಬಂದ ’ಡಿಯರ್ ಜಿಂದಗಿ’ ಸಿನಿಮಾ ಸ್ಪೆಷಲ್ ಸ್ಕ್ರೀನಿಂಗ್ ಸಮಯದಲ್ಲೂ ಶ್ರೀದೇವಿ, ಬೋನಿ ಕಪೂರ್, ಜಾಹ್ವನಿ ಜತೆಗೆ ಒಂದೇ ಕಾರಿನಲ್ಲಿ ಅಕ್ಷತ್ ರಂಜನ್ ಕಾಣಿಸಿಕೊಂಡು ಆಗ ಮಾಧ್ಯಮಗಳಲ್ಲಿ ಹಾಟ್ ಟಾಪಿಕ್ ಆಗಿದ್ದು ಗೊತ್ತೇ ಇದೆ.

happy birthday ✨❤️

A post shared by Akshat Rajan (@akshatrajan) on

ILY ಎಂದು ಜಾಹ್ನವಿ ರಿಪ್ಲೈ…
ಜಾಹ್ನವಿ ಹುಟ್ಟುಹಬ್ಬ ಸಂದರ್ಭದಲ್ಲಿ ಆಕೆಯೊಂದಿಗೆ ತೆಗೆಸಿಕೊಂಡ ಫೋಟೋಗಳನ್ನು ಅಕ್ಷತ್ ರಂಜನ್ ಪೋಸ್ಟ್ ಮಾಡಿದರು. ಇಂತಹ ಹುಟ್ಟುಹಬ್ಬಗಳನ್ನು ಇನ್ನೆಷ್ಟೋ ಆಚರಿಸಿಕೊಳ್ಳಬೇಕೆಂದು ಹಾರೈಸುತ್ತಾ ಒಂದು ಕಾಮೆಂಟ್ ಪೋಸ್ಟ್ ಮಾಡಿದ. ಅಕ್ಷತ್ ರಂಜನ್ ಬರ್ತ್ ಡೇ ವಿಶಸ್ ಬಗ್ಗೆ… ಜಾಹ್ನವಿ ಕಪೂರ್ ಕೂಡಲೆ ಪ್ರತಿಕ್ರಿಯಿಸಿದ್ದರು. ILY (ಐ ಲವ್ ಯೂ) ಎಂದು ರಿಪ್ಲೈ ಕೊಟ್ಟಿದ್ದರು. ತಾಯಿ ಮೃತಪಟ್ಟ ಸಮಯದಲ್ಲಿ ವಿಷಾದಲ್ಲಿದ್ದಾಗ ಜಾಹ್ನವಿಗೆ ಅಕ್ಷತ್ ರಂಜನ್ ಎಮೋಷನಲ್ ಆಗಿ ತುಂಬಾ ಸಪೋರ್ಟ್ ಆಗಿ ಇದ್ದ.

SHARE