ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹೀರೊ ಪಟ್ಟ ಕೊಟ್ಟ ನಿರ್ದೇಶಕ ಪಿ.ಎನ್.ಸತ್ಯ ಇನ್ನಿಲ್ಲ..!!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹೀರೊ ಪಟ್ಟ ಕೊಟ್ಟ ನಿರ್ದೇಶಕ ಪಿ.ಎನ್.ಸತ್ಯ… ಮೆಜೆಸ್ಟಿಕ್ ಸಿನಿಮಾದ ಮೂಲಕ ಮೊದಲ ಬಾರಿಗೆ ದರ್ಶನ್ ನಾಯಕನಾಗಿ ಕಾಣಿಸಿಕೊಂಡಿದ್ದು.. ಎಂ.ಜಿ.ರಾಮಮೂರ್ತಿ, ಬಾ.ಮ.ಹರೀಶ್ ನಿರ್ಮಾಣದ ಈ ಚಿತ್ರ 2002 ರಲ್ಲಿ ತೆರೆ ಕಂಡಿತ್ತು.. ಈ ಚಿತ್ರದ ನಿರ್ದೇಶನದ ಜವಾದ್ಬಾರಿಯನ್ನ ವಹಿಸಿಕೊಂಡಿದ್ದವರು ಪಿ.ಎಂ.ಸತ್ಯ ಅವರು…

ಮಾಸ್ ಡೈರೆಕ್ಟರ್ ಅಂತಾನೇ ಖ್ಯಾತಿಯಾಗಿದ್ದ ಪಿ.ಎನ್.ಸತ್ಯ ಅವರು ಕಳೆದ ವರ್ಷದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು… ಇದಕ್ಕೆ ಸಂಬಂಧ ಪಟ್ಟಹಾಗೆ ಚಿಕಿತ್ಸೆಯನ್ನ ಪಡೆದುಕೊಳ್ಳುತ್ತಿದ್ದ ಪಿ.ಎಸ್. ಸತ್ಯ ಅವರ ಆರೋಗ್ಯ ತೀರ್ವ ಹದಗೆಟ್ಟ ಪರಿಣಾಮ ಕೆಲ ದಿನಗಳ ಹಿಂದೆ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಾಸ್ ಆಗಿದ್ರು…

ಆದರೆ ಅವರು ಲೋ ಬಿಪಿಯಿಂದ ಕೊನೆಯೂಸಿರೆಳೆದಿದ್ದಾರೆ. ಬರೀ ನಿರ್ದೇಶಕರಾಗಿ ಮಾತ್ರವಲ್ಲದೆ ಕೆಲ‌ ಸಿನಿಮಾಗಳಲ್ಲಿ ವಿಲನ್ ಆಗಿ ಕೂಡ ಅಭಿನಯಿಸಿದ್ರು ಪಿ.ಎನ್ ಸತ್ಯ ಅವರು..

ಮೆಜೆಸ್ಟಿಕ್, ಡಾನ್, ಶಾಸ್ತ್ರೀ, ದಾಸ, ತಂಗಿಗಾಗಿ, ಗೂಳಿ, ಸುಗ್ರೀವ, ಮರಿ ಟೈಗರ್ ಸೇರಿದಂತೆ ಹಲವು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದರು ಸತ್ಯ ಅವರು.. ಇವರ ನಿರ್ದೇಶನದ ಕೊನೆಯ ಸಿನಿಮಾ ಮರಿ ಟೈಗರ್..

SHARE