ಬ್ರಾಂಡ್‌ಗಳ ಹೆಸರಿನಲ್ಲಿ ಸೌಂದರ್ಯದ ಹಿಂಸೆ, ಆಚಾರಗಳ ಹೆಸರಿನಲ್ಲಿ ನಿಯಮಗಳ ಹೇರಿಕೆ… ತನ್ನ ಕುಂಚದಲ್ಲಿ ಚರ್ಚೆಸುವಂತೆ ಮಾಡಿದ ಕಲಾವಿದೆ.!

ಬ್ರಾಂಡ್‌ಗಳ ಹೆಸರಿನಲ್ಲಿ ನಡೆಯುತ್ತಿರುವ ಸೌಂದರ್ಯದ ಹಿಂಸೆ, ಆಚಾರಗಳ ಹೆಸರಿನಲ್ಲಿ ಹೇರುತ್ತಿರುವ ನಿಯಮಗಳು.. ಇದೇ ಅಂಶಗಳನ್ನು ಆಯ್ಕೆ ಮಾಡಿಕೊಂಡು ತನ್ನದೇ ಶೈಲಿಯಲ್ಲಿ ವ್ಯಂಗ್ಯ ಚಿತ್ರಗಳನ್ನು ಬಿಡಿಸುತ್ತಾ.. ಮಹಿಳೆಯರ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ ಪ್ರಮುಖ ಕಲಾವಿದೆ ಕವಿಯೂ ಇಲಾಂಗೋ..! ಆಕೆಯ ಕುಂಚದಿಂದ ಮೂಡಿದ ಕೆಲವು ಚಿತ್ರಗಳು. ಅವು ಬಿಂಬಿಸುತ್ತಿರುವ ಭಾವನೆಗಳ ಬಗ್ಗೆ ಕ್ಲುಪ್ತವಾಗಿ ತಿಳಿದುಕೊಳ್ಳೋಣ.!

1) ತಿಂಗಳ ಮುಟ್ಟಾದರೆ ದೊಡ್ಡ ಶಿಕ್ಷೆ.!
ಶುಭ ಕಾರ್ಯಗಳಿಗೆ ದೂರವಾಗಿ, ಕೊನೆಗೆ ಜಾಡಿಯಲ್ಲಿನ ಉಪ್ಪಿನಕಾಯಿ ತೆಗೆಯಲು ಸಹ ದೂರವಾಗಿ… ಹೊರಗಾಗುತ್ತಾರೆ.

2) ಅಡುಗೆಮನೆಯೇ ಸರ್ವಸ್ವ
ಮನೆಗೆ ಬಂದ ಪರಪುರುಷನನ್ನೂ ನೋಡಬಾರದು ಎಂಬ ನಿಯಮಗಳು.

3) ಆಕೆ ದೇಹವೇ ಜಾಹೀರಾತುಗಳ ಗೋಡೆ
ವಿವಿಧ ಬ್ರಾಂಡ್‌ಗಳ ವಸ್ತುಗಳ ಹೆಸರಿನಲ್ಲಿ.. ಮಹಿಳೆ ದೇಹವನ್ನು ಹೇಗೆಲ್ಲಾ ಹಿಂಸಿಸುತ್ತಿದ್ದಾರೆ ಎಂದು ತಿಳಿಸುವ ಪ್ರಯತ್ನ.!

4) ಆಕೆಗೆ ನಿಷಿದ್ಧ.!
ಪ್ರಕೃತಿ ನಿಯಮಗಳು ಸಹ ಮಹಿಳೆಗೆ ಅನ್ವಯಿಸಲ್ಲವೇ..?

SHARE