‘ಕೆಜಿಎಫ್’ ಹವಾ: ಸೋಷಿಯಲ್ ಮೀಡಿಯಾದಲ್ಲಿ ಎಕ್ಸ್‌ಕ್ಲೂಸಿವ್‌ ಮೇಕಿಂಗ್ ಸ್ಟೀಲ್ಸ್

ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ಚಿತ್ರ ಎಂದರೆ ಅದು ‘ಕೆಜಿಎಫ್’ ಚಿತ್ರ, ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಈ ಸಿನಿಮಾ ಯಾವಾಗ ಚಿತ್ರಮಂದಿರಗಳಲ್ಲಿ ಬರುತ್ತೆದೆ ಎಂದು ಕಾದು ನಿಂತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ “ಕೆಜಿಎಫ್’ ಚಿತ್ರದ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಿನಿಪ್ರಿಯರಿಗೆ ಸಕ್ಕತ್ ಖುಷಿ ತಂದಿದೆ.

ಚಿತ್ರಕ್ಕಾಗಿ ಕೋಲಾರದ ಕೆಜಿಎಫ್’ನಲ್ಲಿ ಹಾಕಿರುವ ಸೆಟ್’ಗಳು, ಯಶ್ ಅವರ ಗೆಟಪ್, ಉಪಯೋಗಿಸಿರುವ ಕಾರು, ಬಳಸಿರುವ ಬೈಕ್ ಹಾಗೂ ದೊಡ್ಡ ದೇವರ ಮೂರ್ತಿ ಜೊತೆಗೆ ಗುಹೆಯಂತಿರುವ ಸೆಟ್ ಚಿತ್ರದ ಬಗ್ಗೆ ತುಂಬಾ ನಿರೀಕ್ಷೆಯನ್ನು ಹುಟ್ಟು ಹಾಕುವಂತೆ ಮಾಡಿದೆ.

ಸದ್ಯಕ್ಕೆ ಯಶ್ ಚಿತ್ರಕ್ಕಾಗಿ ಗಡ್ಡ ಬಿಟ್ಟು ಕೊಟ್ಟಿರುವ ಖಡಕ್ ಲುಕ್ ಅವರ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದು, ಚಿತ್ರ ನೋಡಲು ತುದಿಗಾಲ ಮೇಲೆ ನಿಂತಿದ್ದಾರೆ. ಹೊಂಬಾಳೆ ಬ್ಯಾನರ್‌ನಲ್ಲಿ ವಿಜಯ್‌ ಕಿರಗಂದೂರು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಯಶ್‌ ಅವರಿಗೆ ನಾಯಕಿಯಾಗಿ ಶ್ರೀನಿಧಿ ಇದ್ದಾರೆ.

ಇನ್ನು ಈ ಚಿತ್ರವು ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿದ್ದು, ಪ್ರಶಾಂತ್‌ ನೀಲ್‌ ಆ್ಯಕ್ಷನ್ ಕಟ್ ಹೇಳಿದ್ದಾರೆ, ಅಲ್ಲದೇ ರವಿ ಬಸ್ರೂರ್‌ ಸಂಗೀತ, ಸ್ಥಿರಚಿತ್ರ ಛಾಯಾಗ್ರಾಹಕ ಭುವನ್‌ ಗೌಡ ಕ್ಯಾಮೆರಾ ಕೈಚಳಕ ಸೇರಿದಂತೆ ರವಿ ಸಂತೇಹಕ್ಲು ಮತ್ತು ಸುರೇಶ್‌ ದೊಡ್ಡಮನಿ ಕಲಾ ನಿರ್ದೇಶನವಿದೆ. ರವಿವರ್ಮ ಸಾಹಸ ಸಂಯೋಜನೆ, ರಾಮರಾವ್‌ ಮತ್ತು ಕಾರ್ತಿಕ್‌ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಚಿತ್ರದ ಎಕ್ಸ್‌ಕ್ಲೂಸಿವ್‌ ಮೇಕಿಂಗ್ ಸ್ಟೀಲ್ಸ್ ನಿಮಗಾಗಿ…

SHARE