ಮುಖದ ಮೇಲೆ ಬರುವ ಬಿಳಿ ಗಡ್ಡವನ್ನು ಈ ರೀತಿ ಮಾಡಿ ಸಂಪೂರ್ಣವಾಗಿ ಕಪ್ಪಗೆ ಬದಲಾಯಿಸಿಕೊಳ್ಳಿ, ಎಲ್ಲರಿಗೂ ತಿಳಿಸಿ.

ಈಗ ಬಹಳಷ್ಟು ಮಂದಿಗೆ ಸಣ್ಣ ವಯಸ್ಸಿಗೇ ಗಡ್ಡ ನೆರೆಯುತ್ತಿದೆ. ಇದರಿಂದ ವಯಸ್ಸಾದವರಂತೆ ಕಾಣುತ್ತಿದ್ದಾರೆ. ಗಡ್ಡ, ಕೂದಲು ಬೆಳ್ಳಗಾಗುತ್ತಿರುವ ಕಾರಣ 25-30ಕ್ಕೆ ಎಲ್ಲರೂ ಅಂಕಲ್ ಎಂದು ಕರೆಯುವಂತಾಗಿದೆ. ಇದಕ್ಕೆ ಕೆಲವು ಮುಖ್ಯವಾದ ಕಾರಣಗಳಿವೆ. ಮೆಲನಿನ್ ಉತ್ಪತ್ತಿ ಕಡಿಮೆಯಾವುದರಿಂದ ಕಪ್ಪು ಕೂದಲು ಬೆಳ್ಳಗಾಗುತ್ತದೆ. ಅದೇ ರೀತಿ ದೇಹಕ್ಕೆ ಸೂಕ್ತ ಪೋಷಕಾಂಶಗಳು ಸಿಗದಿದ್ದರೂ, ಹಾರ್ಮೋನಲ್ ಇಮ್‌ಬ್ಯಾಲೆನ್ಸ್, ಮಾಲಿನ್ಯ, ಸ್ಟ್ರೆಸ್ ಈ ರೀತಿ ಅದೆಷ್ಟೋ ಲಕ್ಷಣಗಳ ಕಾರಣ ಗಡ್ಡ, ತಲೆ ಕೂದಲು ಬೆಳ್ಳಗಾಗುತ್ತಿವೆ. ನಮ್ಮ ಮನೆಯಲ್ಲಿನ ಪದಾರ್ಥಗಳಿಂದ ಕೆಳಗೆ ತಿಳಿಸಿದಂತೆ ಅದ್ಭುವಾದ ಸಲಹೆಗಳನ್ನು ಪಾಲಿಸಿದರೆ ನಿಮ್ಮ ಬಿಳಿ ಕೂದಲು ಎಂದಿಗೂ ಕಪ್ಪಾಗಿಯೇ ಇರುತ್ತವೆ ಎನ್ನುತ್ತಿದ್ದಾರೆ ತಜ್ಞರು. ಮುಖ್ಯವಾಗಿ ಇದು ಸಹಜವಾದ ಪದ್ಧತಿಯಾದ ಕಾರಣ ಯಾವುದೇ ಹಾನಿ ಉಂಟಾಗಲ್ಲ ಎಂದು ಭರವಸೆ ನೀಡುತ್ತಿದ್ದಾರೆ. ಈ ರೀತಿ ಮಾಡುವುದರಿಂದ ತಲೆ ಕೂದಲು ಸಹ ಸೊಂಪಾಗಿ ಬೆಳೆಯುತ್ತದೆ ಎನ್ನುತ್ತಿದ್ದಾರೆ. ಹಾಗಿದ್ದರೆ ಏನು ಮಾಡಬೇಕು.. ಎಂಬುದನ್ನು ನೋಡೋಣ ಬನ್ನಿ.

ಎರಡು ಮೂರು ಆಲೂಗಡ್ಡೆ ತೆಗೆದುಕೊಳ್ಳಿ. ಚೆನ್ನಾಗಿ ತೊಳೆದು ಸಿಪ್ಪೆಯನ್ನು ಮಾತ್ರ ತೆಗೆಯಬೇಕು. ಬಳಿಕ ಒಂದು ಬಟ್ಟಲಿಗೆ ಒಂದು ಗ್ಲಾಸ್ ನೀರು ಹಾಕಿಕೊಂಡು ಅದರಲ್ಲಿ ಈ ಸಿಪ್ಪೆಯನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಬಳಿಕ ತಣ್ಣಗೆ ಮಾಡಿ ಅದರಲ್ಲಿ ಎರಡು ಟೇಬಲ್ ಸ್ಫೂನ್ ಅಲೋವೆರ ಜ್ಯೂಸ್ ಹಾಕಿ ಬೆರೆಸಿ ಸಿರಪ್ ತರಹ ತಯಾಸಿಕೊಳ್ಳಬೇಕು. ಒಂದು ವೇಳೆ ಅಲೋವೇರಾ ಜ್ಯೂಸ್ ಸಿಗದಿದ್ದರೆ ಆಯುರ್ವೇದ ಮಳಿಗೆಗಳಲ್ಲಿ ಸಿಗುವ ಆಲೋವೆರಾ ಜ್ಯೂಸನ್ನು ಬೇಕಾದರೂ ಬಳಸಬಹುದು. ಸುವಾಸನೆಗಾಗಿ ಈ ಸಿರಪ್‌ನಲ್ಲಿ ರೋಸ್‍ಮೇರಿ, ಲ್ಯಾವೆಂಡರ್ ಬೆರೆಸಿಕೊಳ್ಳಬಹುದು.

ಈ ರೀತಿ ತಯಾರಿಸಿಕೊಂಡ ಸಿರಪನ್ನು ಬೆಳ್ಳಗೆ ಬದಲಾದ ಗಡ್ಡ, ಕೂದಲಿಗೆ ಹಚ್ಚಬೇಕು. ಒಂದು ಗಂಟೆ ಬಳಿಕ ತೊಳೆದುಕೊಂಡರೆ ಸಾಕು. ಅಥವಾ ರಾತ್ರಿ ಅಪ್ಲೈ ಮಾಡಿ ಬೆಳಗ್ಗೆ ಸಾಮಾನ್ಯ ನೀರಿನಲ್ಲಿ ತೊಳೆದುಕೊಂಡರೂ ಸಾಕು. ಈ ರೀತಿ ದಿನ ಬಿಟ್ಟು ದಿನ ಮಾಡಿ ನೋಡಿ.. ಬೆಳ್ಳಗೆ ಬದಲಾದ ಗಡ್ಡ, ತಲೆ ಕೂದಲು ಕಪ್ಪಗಾಗುತ್ತವೆ. ಆಲುಗಡ್ಡೆ ಸಿಪ್ಪೆಯಲ್ಲಿ ವಿಟಮಿನ್‌ಗಳ ಜತೆಗೆ ಕಬ್ಬಿಣ, ಜಿಂಕ್, ರಾಗಿ, ಕ್ಯಾಲ್ಸಿಯಂ,ಪೊಟ್ಯಾಷಿಯಮ್, ನಿಯಾಸಿನ್ ಮತ್ತು ಮೆಗ್ನಿಷಿಯಮ್ ಇರುತ್ತವೆ. ಇವು ದೇಹಕ್ಕೆ ಆರೋಗ್ಯದ ಜತೆಗೆ ಕೂದಲು ಕಪ್ಪಗೆ ಬಲಾಗಲು ಸಹ ಸಹಕರಿಸುತ್ತದೆ. ಅದೇ ರೀತಿ ಆಹಾರದಲ್ಲಿ ಸಹ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು.

ದೇಹದಲ್ಲಿ ಕೂದಲು ಬೆಳ್ಳಗೆ ಬದಲಾಗದಂತೆ ಇರಲು ಪ್ರೋಟೀನ್‌ಗಳು, ವಿಟಮಿನ್ ಡಿ, ಹಸಿರು ಸೊಪ್ಪು, ಡೈರಿ ಪ್ರಾಡಕ್ಟ್ಸ್, ಟಮೊಟೋ, ತರಕಾರಿಯನ್ನು ನಿತ್ಯ ಆಹಾರದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಮುಖ್ಯವಾಗಿ ಆಲೂಗಡ್ಡೆ ಬಳಸುತ್ತಿರಬೇಕು. ಆಲೂಗಡ್ಡೆಯನ್ನು ಹೆಚ್ಚಿಕೊಂಡು ತಲೆ ಕೂದಲಿಗೆ, ಬೆಳ್ಳಗೆ ಬದಲಾದ ಗಡ್ಡಕ್ಕೆ ಉಜ್ಜುತ್ತಿದ್ದರೂ ಒಳ್ಳೆಯ ಫಲಿತಾಂಶ ಇರುತ್ತದೆ. ಅದರಲ್ಲಿನ ಪೊಷಕಾಂಶಗಳು ಬಿಳಿ ಗಡ್ಡವನ್ನು ಕಪ್ಪಗೆ ಮಾಡುತ್ತವೆ. ವಾರಕ್ಕೆ ಎರಡು ಅಥವಾ ಮೂರು ಸಲ ಮೇಲೆ ತಿಳಿಸಿದಂತೆ ನಾಲ್ಕು ವಾರಗಳ ಕಾಲ ಮಾಡಿದರೆ ಬಿಳಿ ಕೂದಲು ಸಂಪೂರ್ಣವಾಗಿ ಕಪ್ಪಗೆ ಬದಲಾಗುತ್ತದೆ. ಹಣ ಖರ್ಚು ಮಾಡಿ ಕೆಮಿಕಲ್ಸ್ ಬಳಸುವುದಕ್ಕಿಂತ ಈ ಪದ್ದತಿಯಲ್ಲಿ ಕೂದಲು, ಗಡ್ಡ ಕಪ್ಪಾಗುವುದರ ಜತೆಗೆ ಯಾವುದೇ ಸೈಡ್ ಎಫೆಕ್ಟ್ಸ್ ಇರಲ್ಲ.

SHARE