ನಿನ್ನೊಂದಿಗೆ ಸಮಾನ ಉದ್ಯೋಗ ಮಾಡುತ್ತಿರುವ ಪತ್ನಿಗೆ ಸಹಕರಿಸುವುದು ಬಿಟ್ಟು ವಿಚ್ಛೇದನ ಕೋರುತ್ತೀಯ ಎಂದು ಕೋರ್ಟ್ ಏನು ಮಾಡಿತೆಂದರೆ?!!

ಪತ್ನಿಯಿಂದ ವಿಚ್ಛೇದನ ಬಯಸುತ್ತಾ ವ್ಯಕ್ತಿಯೊಬ್ಬರು ಕೊಟ್ಟ ಕಾರಣ ಕೇಳಿ ನ್ಯಾಯಮೂರ್ತಿಗಳೇ ಶಾಕ್ ಆಗಿದ್ದಾರೆ. ತಡವಾಗಿ ನಿದ್ದೆಯಿಂದ ಏಳುತ್ತಾಳೆ, ಮನೆ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲ. ನನ್ನ ಪತ್ನಿಯಿಂದ ವಿಚ್ಛೇದನ ಕೊಡಿಸಿ ಎಂದು ವ್ಯಕ್ತಿಯೊಬ್ಬರು ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದರು. ಆ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳು ಆ ವ್ಯಕ್ತಿಗೆ ಛೀಮಾರಿ ಹಾಕಿದ್ದಾರೆ. ಮನೆ ಕೆಲಸ ಮಾಡುವುದಲ್ಲದೆ, ನಿನ್ನೊಂದಿಗೆ ಸಮಾನವಾಗಿ ಕಚೇರಿಗೂ ಹೋಗಿ ಕೆಲಸ ಮಾಡಿ ಬರುತ್ತಿರುವ ಪತ್ನಿಗೆ ಸಹಕರಿಸುವುದನ್ನು ಬಿಟ್ಟು ವಿಚ್ಛೇದನ ಬಯಸುತ್ತೀಯಾ ಎಂದು ಕೋರ್ಟ್ ಛೀಮಾರಿ ಹಾಕಿದೆ.

’ತನ್ನ ಪತ್ನಿ ತಡವಾಗಿ ನಿದ್ದೆಯಿಂದ ಏಳುತ್ತಾಳೆ. ನನಗೆ, ನನ್ನ ತಂದೆತಾಯಿಗೆ ಅಡುಗೆ ಮಾಡುತ್ತಿಲ್ಲ. ಆಕೆ ಮಾಡುವ ಅಡುಗೆ ಸಹ ರುಚಿಯಾಗಿರಲ್ಲ’ ಎಂದು ಹೇಳುತ್ತಾ ಮುಂಬೈನಲ್ಲಿನ ಶಾಂತಾಕ್ರೂಸ್ ಮೂಲದ ವ್ಯಕ್ತಿ ಕೋರ್ಟ್ ಮೆಟ್ಟಿರೇದಿದ. ’ಸಂಜೆ 6 ಗಂಟೆಯಾದರೂ ಕಚೇರಿಯಿಂದ ಬರಲ್ಲ. ಬಂದರೂ ಸ್ವಲ್ಪ ಹೊತ್ತು ನಿದ್ದೆ ಮಾಡುತ್ತಾಳೆ. ರಾತ್ರಿ 8.30ರವರೆಗೂ ಅಡುಗೆ ಆರಂಭಿಸಲ್ಲ. ನಮಗೆ ಬೇಕಾಗುವಷ್ಟು ಅಡುಗೆ ಮಾಡುತ್ತಿಲ್ಲ. ನಾನು ಆಫೀಸಿನಿಂದ ಮನೆಗೆ ಬಂದರೆ.. ಕನಿಷ್ಠ ಒಂದು ಗ್ಲಾಸ್ ಕುಡಿಯುವ ನೀರು ಸಹ ಕೊಡಲ್ಲ’ ಎಂದು ಆತ ಅರ್ಜಿಯಲ್ಲಿ ತಿಳಿಸಿದ್ದ. ಆ ಆರೋಪಗಳಿಗೆ ಆತನ ತಂದೆ ಸಹ ಬೆಂಬಲಿಸಿರುವುದು ಗಮನಾರ್ಹ.

ಈ ಆರೋಪಗಳನ್ನು ಆತನ ಪತ್ನಿ ತೀವ್ರವಾಗಿ ಖಂಡಿಸಿದ್ದಾರೆ. ಆಫೀಸಿಗೆ ಹೋಗುವುದಕ್ಕೂ ಮುನ್ನವೇ ಕುಟುಂಬಕ್ಕೆ ಸರಿಹೊಂದುವಷ್ಟು ಅಡುಗೆ ಮಾಡುತ್ತೇನೆಂದು ನ್ಯಾಯಮೂರ್ತಿಗಳಿಗೆ ತಿಳಿಸಿದ್ದಾರೆ. ಅದೆಷ್ಟೋ ಬಿಝಿಯಾಗಿದರೂ.. ಮನೆ ಜವಾಬ್ದಾರಿಯನ್ನು ನಿರ್ಲಕ್ಷಿಸುತ್ತಿಲ್ಲ ಎಂದು ಹೇಳಿದ್ದಾರೆ. ಸಾಕ್ಷ್ಯಗಳನ್ನೂ ತೋರಿಸಿದ್ದಾರೆ. ಗಂಡ, ಅತ್ತೆ ಮಾವಂದಿರು ನನನ್ನು ಕೀಳಾಗಿ ಕಾಣುತ್ತಾರೆಂದು ತಿಳಿಸಿದ್ದಾರೆ. ಅಕ್ಕಪಕ್ಕದ ಮನೆಯವರು ಸಹ ಆಕೆಗೆ ಬೆಂಬಲ ನೀಡಿದರು. ಇದನ್ನು ಕೇಳಿದ ನ್ಯಾಯಸ್ಥಾನ ಆಕೆಯ ಪರವಾಗಿ ತೀರ್ಪು ನೀಡಿದೆ.

ಪತ್ನಿ ಮನೆ ಕೆಲಸ ಮಾಡುವುದರೆ ಜತೆಗೆ ಆಫೀಸಿಗೂ ಸಹ ಹೋಗುತ್ತಿದ್ದಾಳೆಂಬ ವಿಷಯವನ್ನು ನೆನಪಿಡಬೇಕೆಂದು ಕೋರ್ಟ್ ಅರ್ಜಿದಾರರಿಗೆ ನಿಬಂಧನೆಗಳನ್ನು ವಿಧಿಸಿತು. ”ಆಕೆ ಆಫೀಸಿನಿಂದ ಬರುವಾಗ ಮನೆಗೆ ಅಗತ್ಯವಿರುವಷ್ಟು ದಿನಸಿ ತರುತ್ತಾಳೆ. ಕುಟುಂಬಿಕರಿಗಾಗಿ ಬೆಳಗ್ಗೆ, ಸಂಜೆ ಅಡುಗೆ ಮಾಡುತ್ತಾಳೆ. ಒಂದು ಕಡೆ ಆಕೆ ಇಷ್ಟೆಲ್ಲಾ ಕಷ್ಟಪಡುತ್ತಿದ್ದರೂ.. ಮನೆಗೆ ಬಂದಾಗ ಕುಡಿಯುವ ನೀರು ಕೊಡಲಿಲ್ಲ ಎಂದು ಆರೋಪಿಸುವುದು ಸರಿಯಲ್ಲ. ಪ್ರತಿ ಸಲ ಆಕೆ ಕುಡಿಯುವ ನೀರು ಕೊಡಬೇಕೆಂದು ಬಯಸುವುದು ಸಹ ಸರಿಯಲ್ಲ’ ಎಂದು ಕೋರ್ಟ್ ಹೇಳಿದೆ. ವಿಚ್ಛೇದನ ಅರ್ಜಿಯನ್ನು ತಳ್ಳಿಹಾಕಿದೆ.

SHARE