ಮದುವೆಯಾಗಲು ಆ ಯುವತಿ ಫೇಸ್‌ಬುಕ್‌‍ನಲ್ಲಿ ಪೋಸ್ಟ್ ಮಾಡಿದಳು. ಬಳಿಕ ಏನಾಯಿತು ಗೊತ್ತಾ..?

ಇಂದು ವಿವಾಹ ಎಂಬುದು ಅನೇಕ ಯುವಕ ಮತ್ತು ಯುವತಿಯರಿಗೆ ಎಷ್ಟು ಕಷ್ಟಕರವಾಗಿ ಬದಲಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವುದೇ. ಕರಿಯರ್ ಜತೆಗೆ ಲೈಫ್‌ನಲ್ಲಿ ಸೆಟ್ಲ್ ಆದ ಬಳಿಕ ಮದುವೆ ಮಾಡಿಕೊಳ್ಳಬಹುದು.. ಎಂದು ಬಹಳಷ್ಟು ಮಂದಿ ಅಂದುಕೊಳ್ಳುತ್ತಾ ತಡ ಮಾಡುತ್ತಿದ್ದಾರೆ. ಕೊನೆಗೆ ತಮಗೆ ಇಷ್ಟವಾಗುವ ವಧು, ವರ ಸಿಗದೆ ತೊಂದರೆ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಅನೇಕ ಮಂದಿ ಮದುವೆಯಾಗದೆ ಹಾಗೆಯೇ ಇದ್ದಾರೆ. ಇನ್ನೊಂದು ಕಡೆ ಮ್ಯಾಟ್ರಿಮೋನಿಯಲ್ಲಿ ನೋಂದಾಯಿಸಿಕೊಳ್ಳೋಣ ಎಂದರೆ ಅವರು ದುಡ್ಡು ನೋಡುತ್ತಾರಾದರೂ ಸೂಕ್ತ ವಧೂವರರನ್ನು ಮಾತ್ರ ತೋರಿಸಲ್ಲ. ಇದ್ಯಾವುದೇ ಕಿರಿಕಿರಿ ಯಾಕೆ ಎಂದುಕೊಂಡಳು ಆ ಯುವತಿ. ಅಷ್ಟೇ… ಮದುವೆಗಾಗಿ ಒಂದು ವಿನೂತನ ಪ್ರಯೋಗ ಮಾಡಿದಳು. ಅದೇನೆಂದರೆ…

ಆಕೆ ಹೆಸರು ಜ್ಯೋತಿ ಕೆ.ಜಿ ಕೇರಳದ ಮಳಪ್ಪುರಂ ಜಿಲ್ಲೆಯ ನಿವಾಸಿ. ಈಕೆ ಮದುವೆ ಸಂಬಂಧಗಳನ್ನು ನೋಡುತ್ತಿದ್ದರು. ಆದರೆ ಮ್ಯಾಟ್ರಿಮೋನಿಯಲ್ ಸೈಟ್‌ಗಳ ತಂಟೆಗೆ ಹೋಗದೆ ಒಂದು ವಿನೂತನ ಪ್ರಯತ್ನ ಮಾಡಿದಳು. ತಾನು ಮದುವೆಯಾಗಬೇಕೆಂದಿದ್ದೇನೆಂದು, ಫ್ರೆಂಡ್ಸ್ ವಲಯದಲ್ಲಿ ಯಾರಾದರೂ ಇದ್ದರೆ ತಿಳಿಸಿ. ಜಾತಿ, ಧರ್ಮದಂತಹ ನಿಯಮಗಳು ಇಲ್ಲ ಎಂದು. ತನಗೆ ತಂದೆ ತಾಯಿ ಇಲ್ಲ, ಬಿಎಸ್‍ಸಿ ಫ್ಯಾಷನ್ ಟೆಕ್ನಾಲಜಿ ಓದಿದ್ದೇನೆ. ತನ್ನ ವಯಸ್ಸು 28 ವರ್ಷಗಳು. ತನ್ನ ಸಹೋದರ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾರೆ, ಸಹೋದರಿ ಓದಿಕೊಳ್ಳುತ್ತಿದ್ದಾರೆ ಎಂದು ವಿವರಗಳನ್ನು ನೀಡಿ ಅಡ್ರೆಸ್, ಫೋನ್ ನಂಬರ್ ಸಮೇತ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದರು.

ಜ್ಯೋತಿ ಆ ರೀತಿ ತನ್ನ ವಿವರಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಕೂಡಲೆ ಆ ಪೋಸ್ಟ್‌ಗೆ ವಿಪರೀತ ಪ್ರತಿಕ್ರಿಯೆ ಸಿಕ್ಕಿತು. ಕೇವಲ ಕೆಲವು ಗಂಟೆಗಳಲ್ಲೇ 6 ಸಾವಿರ ಷೇರ್, 10 ಸಾವಿರ ಲೈಕ್ಸ್ ಬಂದವು. ಇದಕ್ಕೆ ಒಳ್ಳೆಯ ಪಾಸಿಟೀವ್ ಪ್ರತಿಕ್ರಿಯೆ ಲಭ್ಯವಾಯಿತು. ಈ ರೀತಿ ಮಾಡಿದ್ದಕ್ಕೆ ಜ್ಯೋತಿಯನ್ನು ಕೇಳಿದರೆ…ಫೇಸ್‌ಬುಕ್‌ನಲ್ಲಿ ಬಹಳಷ್ಟು ಮಂದಿ ಗೊತ್ತಿರುವವರು ಇರುತ್ತಾರೆಂದು, ಬೇಕಾದ ವ್ಯಕ್ತಿಯನ್ನು ಜೀವನ ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳಲು ಇದೇ ಸೂಕ್ತ ವೇದಿಕೆ, ಇಂತಹ ಸಮಯದಲ್ಲಿ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಹಣ ಖರ್ಚು ಮಾಡಿ ವಧುವರರನ್ನು ಆಯ್ಕೆ ಮಾಡಿಕೊಳ್ಳುವುದು ಅಗತ್ಯವಿಲ್ಲವೆಂದು ಆಕೆ ಹೇಳಿದ್ದಾರೆ. ಮದುವೆಯಾಗುವವರಿಗಾಗಿ ಫೇಸ್‌ಬುಕ್‌ನಲ್ಲಿ ಮ್ಯಾಟ್ರಿಮೊನಿ ಸೆಕ್ಷನ್ ಇಟ್ಟರೆ ಚೆನ್ನಾಗಿರುತ್ತದೆಂಬುದು ಆಕೆಯ ಅಭಿಪ್ರಾಯ.

ಆದರೆ ಫೇಸ್‌ಬುಕ್‌ನಲ್ಲಿ ಈ ರೀತಿ ಮದುವೆಗಾಗಿ ಪೋಸ್ಟ್ ಮಾಡಿದ್ದು ಇದೇ ಮೊದಲಲ್ಲ. ಈ ಹಿಂದೆ ಓರ್ವ ಯುವಕನು ಈ ರೀತಿ ಮಾಡಿದ್ದ. ಕೇರಳದ ರಂಜಿತ್ ಎಂಬುವವರು ಈ ಹಿಂದೆ ಫೇಸ್‍ಬುಕ್‌ನಲ್ಲಿ ಜ್ಯೋತಿ ತರಹವೇ ಪೋಸ್ಟ್ ಮಾಡಿದ್ದ. ಇದಕ್ಕೆ ಅನೇಕ ಮಂದಿ ಪ್ರತಿಕ್ರಿಯಿಸಿದ್ದರು. ಕೊನೆಗೆ ಆತ ಗುರುವಾಯೂರಿನ ಸರಿಗಮ ಎಂಬ ಯುವತಿಯನ್ನು ಅದೇ ತಿಂಗಳಲ್ಲಿ ಮದುವೆಯಾದ. ಹಾಗಿದ್ದರೆ ಈಗ ಜ್ಯೋತಿಗೂ ಸಹ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಇನ್ನು ಆಕೆ ಯಾರನ್ನು ಮದುವೆಯಾಗುತ್ತಾರೆ ಕಾದುನೋಡಬೇಕು. ಅದೇನೇ ಇರಲಿ…ಆಕೆ ಮಾಡಿದ ಈ ಪ್ರಯತ್ನ ವಿಚಿತ್ರವಾಗಿದೆ ಅಲ್ಲವೇ…!

SHARE