ಸೆಕ್ಸ್ ಬಳಿಕ ಆತ್ಮಹತ್ಯೆ… ಈ ಪ್ರಬೇಧವನ್ನು ಉಳಿಸಿಕೊಳ್ಳುವುದು ಹೇಗೆ?

ಮೊದಲೇ ಒಂದು ವರ್ಷ ಬದುಕು.. ಅದರ ಜತೆಗೆ 14 ಗಂಟೆಗಳ ಹಿಂಸಾತ್ಮಕ ಶೃಂಗಾರ… ಅದು ಪೂರ್ಣವಾದ ಕೂಡಲೆ ಪರಿಣಾಮಗಳು.. ಹೃದಯ, ಕಿಡ್ನಿ, ಶ್ವಾಸಕೋಶಗಳ ವೈಫಲ್ಯ. ಕ್ಷಣಗಳಲ್ಲೇ ಸಾವು..! ಒಂದು ಪುಟ್ಟ ಜೀವಿ ಬದುಕಿನಲ್ಲಿ ಬರೆದ ವಿಚಿತ್ರವಾದ ಸೂಸೈಡಲ್ ಸೆಕ್ಸ್ ಹಣೆಬರಹ ಇದು….

ಪ್ರಾಣಿಪ್ರಪಂಚದಲ್ಲಿ ಶೃಂಗಾರ ವಿಚಿತ್ರವಾದದ್ದು. ಮಾನವ ಪ್ರಬೇಧಕ್ಕೆ ಸೆಕ್ಸ್ ಸುಖ ನೀಡುತ್ತದೆ. ಸಂತಾನೋತ್ಪತ್ತಿಗೆ ಅನುಕೂಲವಾಗುತ್ತದೆ. ಆದರೆ ಕೆಲವು ಪ್ರಬೇದಗಳಿಗೆ ಶೃಂಗಾರ ಮಾರಣಾಂತಿಕ. ಕೆಲವು ಸೃಷ್ಟಿಕಾರ್ಯ ಮಾಡುತ್ತಾ ನಡುವೆ ಜೀವ ಬಿಡುತ್ತವೆ. ಕೆಲವು ಪೂರ್ಣವಾದ ಕೂಡಲೆ ಪ್ರಾಣ ಬಿಡುತ್ತವೆ. ಎಕ್ಕಾಮಕ್ಕಾ ಮಕ್ಕಳನ್ನು ಹೆರುವ ಪ್ರಬೇಧಗಳು… ಮುಖ್ಯವಾಗಿ ಸಸ್ತನಿಳಿಗೆ ಶೃಂಗಾರ ಅಪಾಯಕರಾವಾಗಿ ಬದಲಾಗುತ್ತದೆ. ಇದರ ಜತೆಗೆ ಅಭಿವೃದ್ಧಿ ಹೆಸರಿನಲ್ಲಿ ಮನುಷ್ಯ ಅದರ ನೆಲೆಗೆ ಲಗ್ಗೆ ಹಾಕಿ ಸಮಸ್ಯೆಯನ್ನು ಇನ್ನಷ್ಟು ತೀವ್ರ ಮಾಡುತ್ತಿದ್ದಾನೆ.

ಆಸ್ಟ್ರೇಲಿಯಾದಲ್ಲಿ ಕಾಣಿಸುವ ಯಾಂಟೆಚಿನಸ್ ಎಂಬ ಸಸ್ತನಿ ಅವುಗಳಲ್ಲಿ ಒಂದು. ನೋಡಲು ಇಲಿಯಂತೆ ಇರುವ ಈ ಪ್ರಬೇಧ ಕಾಂಗರೂ ತರಹ ಮರಿಗಳನ್ನು ಚೀಲಗಳಲ್ಲಿ ಇಟ್ಟುಕೊಳ್ಳುತ್ತದೆ. ಅವುಗಳಿಗೆ ಹಾಲುಣಿಸಿ, ಆಹಾರ ನೀಡಿ ಚೆನ್ನಾಗಿಯೇ ಸಾಕುತ್ತವೆ. ಗಂಡುಗಳಿಗೆ ತುಂಬಾ ಸಮಸ್ಯೆ. ಗಂಡು ಪ್ರಾಣಿ ಮೊದಲ ಬ್ರೀಡಿಂಗ್ ಸಮಯದಲ್ಲೇ ಸಾಯುತ್ತವೆ. ಅವುಗಳಿಗೆ ಸೆಕ್ಸ್ ಬಯಕೆ ಅತಿಯಾಗಿ ಇರುತ್ತದೆ. ಕಾಣಿಸಿದ ಪ್ರತಿ ಹೆಣ್ಣು ಆಂಟೆನಿನಸ್ ಜತೆಗೆ ಸಂಬಂಧ ಬೆಳೆಸುತ್ತದೆ. 14 ಗಂಟೆಗಳ ಕಾಲ ಸೆಕ್ಸ್ ಮಾಡುತ್ತವೆ. ಪ್ರತಿಫಲವಾಗಿ ಶಕ್ತಿಕಳೆದುಕೊಂಡು, ಟೆಸ್ಟೋಸ್ಟೀರಾನ್ ಹೆಚ್ಚಾಗಿ ಒಳಗಿನ ಅಂಗಾಗಳು ಹಾಳಾಗಿ ಸಾಯುತ್ತವೆ.

2013ರಲ್ಲಿಈ ಅಪರೂಪದ ಪ್ರಬೇಧವನ್ನು ತಜ್ಞರು ಕಂಡುಹಿಡಿದರು. ಕಪ್ಪು ತೋಕೆ ಯಾಂಟಿಚಿನಸ್, ಬೆಳ್ಳಿತಲೆಯ ಯಾಂಟಿಚಿನಸ್ ಮನುಷ್ಯನ ಅಪಾಯಕ್ಕೆ ಸಿಲುಕಿದ್ದು ಅವಸಾನದ ಅಂಚಿನಲ್ಲಿರುವ ಪ್ರಬೇಧಗಳ ಪಟ್ಟಿಗೆ ಸೇರಿಸಲಾಗಿದೆ. ಪರ್ವತ ಪ್ರದೇಶಗಳಲ್ಲಿ ಇವನ್ನು ಕಂಡುಹಿಡಿದೆವೆಂದು, ಭೂಮಿಯ ತಾಪಮಾನದಿಂದ ಅವು ಅಲ್ಲಿಂದ ಹೊರಗೆ ಬರುತ್ತಿಲ್ಲ ಎಂದು ಕ್ವೀನ್ಸ್ ಲ್ಯಾಮ್ಡ್ ವರ್ಸಿಟಿ ಮೂಲದ ವೈದ್ಯ ಆಂಡೂ ಬೇಕರ್ ಹೇಳಿದ್ದಾರೆ. ಇವನ್ನು ತಿನ್ನುವ ಪ್ರಾಣಿಗಳು, ಪಕ್ಷಿಗಳು, ಕಾಡಿನ ನಾಶ, ವಾತಾವರಣದಲ್ಲಾಗುತ್ತಿರುವ ಬದಲಾವಣೆ ಕಾರಣದಿಂದ ಇವುಗಳ ಅಳಿವು ಉಳಿವು ಪ್ರಶ್ನಾರ್ಥಕವಾಗಿ ಬದಲಾಗಿದೆ. ಈಗಲಾದದೂ ಎಚ್ಚೆತ್ತುಕೊಳ್ಳದಿದ್ದರೆ ಶೀಘ್ರದಲ್ಲೇ ಇವು ಅವಸಾನವಾಗುತ್ತವೆ ಎಂದು ಎಚ್ಚರಿಸಿದ್ದಾರೆ…!

SHARE