ವಾವ್… ವಾಟ್ ಎ ಕ್ಯಾಚ್… ಈ ವರ್ಷ ಐಪಿಎಲ್‍ನಲ್ಲಿ ಬೆಸ್ಟ್ ಕ್ಯಾಚ್ ಬಹುಶಃ ಇದೇ ಆಗಿರಬಹುದು..!

ಐಪಿಎಲ್‌ನಲ್ಲಿ ಈಗ ಅರ್ಧದಷ್ಟು ಮ್ಯಾಚ್‌ಗಲೂ ಮುಗಿದಿದ್ದು ಫೈನಲ್ ಹಂತಕ್ಕೆ ತಂಡಗಳು ತಲುಪಿವೆ. ಇದರಿಂದ ಆಯಾ ತಂಡಗಳ ಮೇಲೆ ಒತ್ತಡ ಸಹ ಹೆಚ್ಚಾಗಿದೆ. ಮೊದಲ ಎರಡು ಸ್ಥಾನಗಳಲ್ಲಿ ಇರಬೇಕೆಂದು ತಂಡಗಳು ತಾಪತ್ರಯ ಪಡುತ್ತಿದ್ದರೆ ಕೆಲವು ತಂಡಗಳು ಫ್ಲೇ ಆಫ್ಸ್‌ಗೆ ತಲುಪಲು ಶ್ರಮಿಸುತ್ತಿವೆ. ಈ ವಿಭಾಗದಲ್ಲೇ ಪ್ರತಿ ತಂಡ ತನಗೆ ಸಿಕ್ಕ ಅವಕಾಶವನ್ನು ಸದ್ವಿನಿಯೋಗ ಪಡಿಸಿಕೊಳ್ಳುತ್ತಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್.. ಹೀಗೆ ಎಲ್ಲಾ ಅಂಶಗಳಲ್ಲಿ ಮುಂದೆ ಬರಲು ಆಟಗಾರರು ಶ್ರಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಪಂಜಾಬ್, ರಾಜಸ್ಥಾನ ತಂಡಗಳ ನಡುವೆ ನಡೆದ ಮ್ಯಾಚ್‍ನಲ್ಲಿ ಮಯಾಂಕ್ ಅಗರ್ವಾಲ್, ಮನೋಜ್ ತಿವಾರಿ ಅದ್ಭುತವಾದ ಫೀಲ್ಡಿಂಗ್ ಮಾಡಿ ಆಕರ್ಷಿಸಿದರು. ಸಿಕ್ಸ್ ಹೋಗಬೇಕಾಗಿದ್ದ ಚೆಂಡನ್ನು ನೆಗೆದು ಹಿಡಿದುಕೊಂಡ.

ರಾಜಸ್ಥಾನ, ಪಂಜಾಬ್ ತಂಡಗಳ ನಡುವೆ ನಡೆದ ತಾಜಾ ಐಪಿಎಲ್ ಮ್ಯಾಚ್‌ನಲ್ಲಿ ಮೊದಲು ರಾಜಸ್ಥಾನ 20 ಓವರ್‌ಗಳಿಗೆ 152 ರನ್‌ಗಳನ್ನು ಮಾತ್ರ ಮಾಡಿತು. ಪಂಜಾಬ್ ತಂಡ ಗುರಿಯನ್ನು ಸುಲಭವಾಗಿ ತಲುಪಿ ಇನ್ನೊಂದು ಗೆಲುವನ್ನು ಸಾಧಿಸಿತು. ಆದರೆ ಈ ಮ್ಯಾಚ್‌ನಲ್ಲಿ ರಾಜಸ್ಥಾನ ಬ್ಯಾಟಿಂಗ್ ಮಾಡುವ ಸಮಯದಲ್ಲಿ ಆ ತಂಡದ ಆಟಗಾರ ಬೆನ್ ಸ್ಟೋಕ್ಸ್ ಆಡುತ್ತಿರಬೇಕಾದರೆ 13ನೇ ಓವರ್‌ನಲ್ಲಿ ಪಂಜಾಬ್ ಆಟಗಾರ ಮುಜೀಬ್ ಬೌಲಿಂಗ್ ಮಾಡಿದ. ಅದರಲ್ಲಿ ಒಂದು ಬಾಲನ್ನು ಸ್ಟೋಕ್ಸ್ ಸರಿಯಾಗಿ ಭಾರಿಸಿದ. ಅದು ಸಿಕ್ಸರ್ ಹೋಗುವುದರಲ್ಲಿತ್ತು. ಆದರೆ ಬೌಂಡರಿ ಲೈನ್ ಬಳಿ ಇದ್ದ ಮಯಾಂಕ್ ಆ ಬಾಲನ್ನು ಸಿಕ್ಸ್ ಹೋಗದಂತೆ ಮೇಲೆಯೇ ಹಿಡಿದುಕೊಂಡರು. ಆದರೆ ಬೌಂಡರಿ ಬಳಿ ಇದ್ದ ಕಾರಣ ಬ್ಯಾಲೆನ್ಸ್ ಮಾಡಲಾಗದೆ ಆ ಚೆಂಡನ್ನು ಪಕ್ಕದಲ್ಲೇ ಇದ್ದ ತಿವಾರಿ ಕಡೆಗೆ ಎಸೆದ. ಆ ಕ್ಯಾಚನ್ನು ತಿವಾರಿ ಹಿಡಿದ.

ಆ ರೀತಿ ಮಯಾಂಕ್ ಅಗರ್ವಾಲ್, ಮನೋಜ್ ತಿವಾರಿ ಬೆನ್ ಸ್ಟೋಕ್ಸ್ ಕ್ಯಾಚನ್ನು ಅದ್ಭುತವಾಗಿ ಹಿಡಿದರು. ಇದರಿಂದ ರಾಜಸ್ಥಾನ ಮುಖ್ಯವಾದ ವಿಕೆಟ್ ಕಳೆದುಕೊಂಡಿತು. ಬಳಿಕ ಕಡಿಮೆ ಸ್ಕೋರ್ ಮಾಡಿತು. ಇದರಿಂದ ಪಂಬಾಜ್ ಆ ಮ್ಯಾಚ್‌ನಲ್ಲಿ ಸುಲಭವಾಗಿ ಗೆಲುವು ಸಾಧಿಸಿತು. ಆ ರೀತಿ ಮಯಾಂಕ್ ಅಗರ್ವಾಲ್, ಮನೋಜ್ ತಿವಾರಿ ಹಿಡಿದ ಕ್ಯಾಚ್ ವಿಡಿಯೋ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಬಹಳಷ್ಟು ಮಂದಿ ಅದನ್ನು ವೀಕ್ಷಿಸಿದ್ದಾರೆ. ಟ್ವಿಟರ್‌ನಲ್ಲಿ ಅಭಿಮಾನಿಗಳು ಆ ಕ್ಯಾಚಿಗೆ ಶಿಳ್ಳೆ ಹೊಡೆಯುತ್ತಿದ್ದಾರೆ. ಆ ಕ್ಯಾಚ್ ಹಿಡಿದ ಇಬ್ಬರು ಆಟಗಾರರನ್ನು ಅಭಿನಂದಿಸುತ್ತಿದ್ದಾರೆ.

SHARE