ಮಾಂಗಲ್ಯ ಧಾರಣೆ ಮಾಡುವಾಗ ಮೂರು ಗಂಟು ಯಾಕೆ ಹಾಕುತ್ತಾರೆ ಗೊತ್ತಾ?

ನಮ್ಮ ಹಿಂದೂ ಸಂಪ್ರದಾಯದಲ್ಲಿ ಮಾಂಗಲ್ಯ ಧಾರಣೆ ಎಂಬುದು ಮುಖ್ಯವಾದ ಘಟ್ಟ. ಮಾಂಗಲ್ಯ ಎಂದರೆ ಒಳ್ಳೆಯದು ಎಂದೂ, ಧಾರಣೆ ಎಂದರೆ ಧರಿಸುವುದು ಎಂದರ್ಥ. ಮದುವೆಯಲ್ಲಿ ಒಂದು ಮಾಂಗಲ್ಯವನ್ನು ಮದುಮಗಳ ಕಡೆಯವರು, ಇನ್ನೊಂದನ್ನು ಮದುಮಗನ ಕಡೆಯವರು ತಂದು ಎರಡು ಮಾಂಗಲ್ಯಗಳನ್ನು ಜತೆಯಾಗಿ ಮದುಮಗ ಮಗುಮಗಳ ಕೊರಳಿಗೆ ಕಟ್ಟುತ್ತಾನೆ. ಈ ಮಾಂಗಲ್ಯಕ್ಕೆ ಅರ್ಥ ರಕ್ಷಣೆ, ನಂಬಿಕೆ, ಮನಸ್ಸಾಕ್ಷಿಗೆ ಪ್ರತಿರೂಪವಾಗಿ, ಜೀವನ ಪರ್ಯಂತ ಜತೆಯಾಗಿ ನೆರಳಿನಂತೆ ಇರುತ್ತೇನೆಂದು ಮದುಮಗ ಮದುಮಗಳಿಗೆ ಭರವಸೆ ನೀಡಿದಂತೆ ಅರ್ಥ.

ಆದರೆ ಈ ಮೂರು ಗಂಟಿನ ಹಿಂದೆ ಒಂದು ಮಹಾನ್ ಅರ್ಥ ಅಡಗಿದೆ. ಇದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ. ಪ್ರಾಚೀನ ಕಾಲದಿಂದಲೂ ಮೂರಕ್ಕೆ ಒಂದು ವಿಶೇಷ ಸ್ಥಾನ ಇದೆ. ಸೃಷ್ಟಿ ಪರವಾಗಿ ನೋಡಿದರೆ ಬ್ರಹ್ಮ, ವಿಷ್ಣು, ಮಹೇಶ್ವರರು ಮೂವರು. ಸೃಷ್ಟಿ, ಲಯ, ಸ್ಥಿತಿ ಲಯಗಳು ಮೂರು. ಪ್ರತಿ ವ್ಯಕ್ತಿಗೂ ಸ್ಥೂಲ, ಸೂಕ್ಷ್ಮ, ಕಾರಣ ಎಂಬ ಮೂರು ದೇಹಗಳು. ಸ್ಥೂಲ ದೇಹ ಎಂದರೆ ಮಾಂಸ, ರಕ್ತ, ಮೂಳೆಗಳು. ಸೂಕ್ಷ್ಮ ದೇಹ ಎಂದರೆ ದೇಹದಲ್ಲಿ ಆಧಾರಭೂತವಾಗಿರುವ ಜೀವ ನಿವಸಿಸಿರುವುದು.

ಜೀವ ಅನುಭವಿಸುತ್ತಿರುವ ಸುಖ ದುಃಖಗಳನ್ನು ಅನುಭವಿಸುತ್ತಿದ್ದಾನಾ? ಇಲ್ಲವೆ? ಎಂದು ಸಾಕ್ಷಿ ಭೂತವಾಗಿ ಪರಮಾತ್ಮ ನೋಡುವ ದೇಹ. ಹೀಗೆ ಮೂರು ದೇಹಗಳಿಗೆ ಮೂರು ಗಂಟು ವಧುವಿಗೆ ವರ ಹಾಕುತ್ತಾನೆ. ಮಾಂಗಲ್ಯ ಧಾರಣೆ ಮಾಡುವಾಗ ಮೂರು ಗಂಟು ಹಾಕುವುದರ ಹಿಂದಿರುವ ಪರಮಾರ್ಥ ಇದು.

SHARE