ಸನ್ನಿ ಲಿಯೋನ್ ಜೀವನಾಧಾರಿತ ಚಿತ್ರಕ್ಕೆ ಸನ್ನಿ ಪಾತ್ರವನ್ನು ಯಾರು ಮಾಡ್ತಿದ್ದಾರೆ ಗೊತ್ತಾ..?

ಸನ್ನಿ ಲಿಯೋನ್, ಪಡ್ಡೆ ಹುಡುಗರ ಹಾಟ್ ಫೇವರೆಟ್ ನಟಿ. ಸದ್ಯ ಈ ನಟಿಯ ಜೀವನ ಚರಿತ್ರೆಯಾಧರಿಸಿ ವೆಬ್ ಸರಣಿಯೊಂದು ಬರ್ತಿದ್ದು, ಅದಕ್ಕೆ ‘ಕರಂಜಿತ್ ಕೌರ್- ದಿ ಅನ್ ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್” ಎಂದು ಹೆಸರಿಡಲಾಗಿದೆ. ಇನ್ನು ತನ್ನ ಬಯೋಪಿಕ್ ನಲ್ಲಿ ಯೌವನಾವಸ್ಥೆಯಲ್ಲಿ ನಟಿಸಲು ರೈಸಾ ಸೌಜನಿ ಎಂಬ ಹುಡುಗಿಯನ್ನ ಸನ್ನಿ ಲಿಯೋನ್ ಪರಿಚಯಿಸುತ್ತಿದ್ದಾಳೆ.

ಸನ್ನಿಯ ಈ ಜೀವನ ಚರಿತ್ರೆಯ ವೆಬ್ ಸರಣಿಯಲ್ಲಿ ಕೆನಡಾದಲ್ಲಿದ್ದಾಗ ಸನ್ನಿ ಅನುಭವಿಸಿದ ಕಷ್ಟಗಳು, ಜನರು ಆಡಿದ ಮಾತುಗಳು, ಕರಂಜಿತ್ ಕೌರ್ ಳಿಂದ ಸನ್ನಿ ಲಿಯೋನ್ ಆದದ್ದು ಹೇಗೆ ಮತ್ತು ಆಕೆ ಭಾರತಕ್ಕೆ ಬಂದಿದ್ದರ ಬಗ್ಗೆ ವಿವರಗಳಿವೆ.

ಭಾರತಕ್ಕೆ ಬಂದ ಮೇಲೆ ಸನ್ನಿ, ಬಿಗ್ ಬಾಸ್ ರಿಯಾಲಿಟಿ ಶೋನಿಂದ ತನ್ನ ಜೀವನದ ಹೊಸ ಜರ್ನಿಯನ್ನ ಆರಂಭಿಸಿದ್ಲು. ಆಗ ಬಾಲಿವುಡ್ ನಿರ್ಮಾಪಕ ಮಹೇಶ್ ಭಟ್ ಆಕೆಯನ್ನ ಗುರುತಿಸಿ, ಜಿಸ್ಮ್ -2 ಚಿತ್ರದಲ್ಲಿ ಅವಕಾಶ ಕೊಟ್ರು. ಇದು ಸನ್ನಿ ಲಿಯೋನ್ ನ ಡೆಬ್ಯೂಟ್ ಫಿಲ್ಮ್ ಆಗಿದೆ. ನಂತರ ಸನ್ನಿ ಹಿಂತಿರುಗಿ ನೋಡಲೇ ಇಲ್ಲ.

ರಾಗಿಣಿ ಎಂಎಂಎಸ್ -2, ಏಕ್ ಪಹೇಲಿ ಲೀಲಾ, ಮಸ್ತಿಜಾದೆ, ಒನ್ ನೈಟ್ ಸ್ಟ್ಯಾಂಡ್, ತೇರಾ ಇಂತಿಜಾರ್ ಚಿತ್ರಗಳು ಸೇರಿದಂತೆ ಹಲವು ಆಲ್ಬಂ ಗಳಲ್ಲೂ ನಟಿಸಿದ್ದಾಳೆ ಈ ಬೇಬಿ ಡಾಲ್. ಸದ್ಯ ತನ್ನ ಜೀವನ ಚರಿತ್ರೆಯ ವೆಬ್ ಸಿರೀಸ್ ‘ಕರಂಜಿತ್ ಕೌರ್ ದಿ ಅನ್ ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್’ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾಳೆ.

SHARE