ಹಣೆಗೆ ಕುಂಕುಮ ಇಡುವುದರಿಂದ ಯಾವ ಎಲ್ಲ ಶಕ್ತಿ ಸಿಗುತ್ತದೆ ನಿಮಗೆ ಗೊತ್ತಾ..?

ಹಿ೦ದೂ ಧರ್ಮದವರು ತಮ್ಮ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳಲ್ಲಿ ಕು೦ಕುಮ ಪುಡಿಯನ್ನು ಬಳಸುತ್ತಾರೆ. ಅದನ್ನು ಅರಿಷಿಣ ಅಥವಾ ಖಾವಿಯಿಂದ ತಯಾರಿಸಲಾಗುತ್ತದೆ. ಅರಸಿನ ಕೊ೦ಬುಗಳನ್ನು ಚೆನ್ನಾಗಿ ಒಣಗಿಸಿ ಪುಡಿಮಾಡಿ ಸ್ವಲ್ಪ ನೀರೂಡಿಸಿದ ಸುಣ್ಣ ಬೆರೆಸಿದಾಗ ಗಾಢ ಹಳದಿ ಬಣ್ಣದ ಪುಡಿಯು ಕೆ೦ಪು ಬಣ್ಣಕ್ಕೆ ಬದಲಾಗುತ್ತದೆ.

ಕುಂಕುಮವನ್ನು ಸಾಮಾನ್ಯವಾಗಿ ಹಿಂದೂಗಳು ಹಣೆಯ ಮೇಲೆ ಹಚ್ಚಿಕೊಳ್ಳುತ್ತಾರೆ. ಈ ಸ್ಥಳದಲ್ಲಿ ಇಟ್ಟುಕೊಳ್ಳಲು ಕಾರಣವೇನೆಂದರೆ ಯೋಗ(ರಾಜಯೋಗ) ಅಭ್ಯಾಸದಲ್ಲಿ ಮಾನವ ದೇಹ ಏಳು ಶಕ್ತಿ ಕೇಂದ್ರಗಳಾಗಿ ವಿಭಜಿಸಲ್ಪಟ್ಟಿದೆ. ಬೆನ್ನುಮೂಳೆಯ ಮೂಲದಿಂದ (ಬಾಲ) ಪ್ರಾರಂಭವಾಗಿ ತಲೆಯ ತುದಿಯವರೆಗೆ ಹರಡಿದೆ. ಈ ಶಕ್ತಿಕೇಂದ್ರಗಳಲ್ಲಿ ಆರನೆಯ ಚಕ್ರವು (ಹಣೆಯ ಮೇಲಿನ )ಮೂರನೆಯ ಕಣ್ಣು ಎಂದೂ ಹೇಳುವುದುಂಟು. ಇದು ಕಣ್ಣುಗಳ ಹುಬ್ಬುಗಳ ನಡುವೆ ಇರುವ ಬಿಂದು. ಈ ಬಿಂದುವಿನ ಮೂಲಕ ಮಾನವ ಆಧ್ಯಾತ್ಮಿಕವಾಗಿ ದೈವಿಕತೆಗೆ ತೆರೆಯುವ ಸ್ಥಳ ಎಂದೂ ನಂಬಲಾಗಿದೆ. [೧]. ಆದ್ದರಿಂದ ಕುಂಕುಮವನ್ನು ದೇಹದ ಅತ್ಯಂತ ಪವಿತ್ರವಾದ ಸ್ಥಳದಲ್ಲಿ ಇಡಲಾಗಿದೆ ಎಂದು ಹಿಂದುಗಳು ನಂಬುತ್ತಾರೆ.

ಕುಂಕುಮದಿಂದ ಶಕ್ತಿಯಾ ಜನ್ಮವಾಗಿದೆ(ಉತ್ಪತ್ತಿ), ಶಕ್ತಿ ಅಂದರೆ ಕಾಳಿ,ದುರ್ಗಾ,ಪಾರ್ವತಿ,ಲಕ್ಷ್ಮಿ ಮುಂತಾದ ದೇವಿಗಳ ಮೂಲ ಶಕ್ತಿ. ಆದ್ದರಿಂದ ದೇವಿಗಳಿಗೆ ಕುಂಕುಮ ಅರ್ಚನೆಯನ್ನು ಮಾಡಲಾಗುತ್ತದೆ. ಕುಂಕುಮವನ್ನು ಹಣೆಗೆ ಹಚ್ಚುವುದರಿಂದ ದುರ್ಗಾ ದೇವಿಯ ಶಕ್ತಿ ಸಿಗುತ್ತದೆ.ಹಣೆಯ ಮಧ್ಯದಲ್ಲಿ ಮೆಮೊರಿ ಸೆಲ್ಸ್ ಇರುತ್ತದೆ ಅದಕ್ಕೆ ಸೂರ್ಯನ ಅಲ್ಟ್ರಾವಯಲೆಟ್ ರಯ್ಸ್ ತಾಗುವುದರಿಂದ ನಮ್ಮ ಜ್ಞಾಪಕ ಶಕ್ತಿ ಕಡಿಮೆ ಆಗುತ್ತೆ, ಆದ್ದರಿಂದ ಹಿಂದೂ ಧರ್ಮದಲ್ಲಿ ಕೇವಲ ಆಧ್ಯಾತ್ಮದ ವಿಚಾರವಲ್ಲದೆ ವಿಜ್ಞ್ಯಾನದ ಕಾರಣ ಕೂಡ ಇರುತ್ತದೆ.

ಹಿಂದಿನ ಸ್ತ್ರಿಯಾರಿಗೆ ಕುಂಕುಮದಿಂದ ಅಷ್ಟು ಶಕ್ತಿ ಇತ್ತು ಎಂದು ತಿಳಿದ ಆಂಗ್ಲರು ಕುಂಕುಮದಲ್ಲಿ ಕಲಬೆರಿಕೆ ಮಾಡಲೂ ಪ್ರಾರಂಭಿಸಿದರಿಂದ ಶಕ್ತಿ ಸಿಗದಂತಾಯಿತು. ಆದ್ದರಿಂದ ಇಂದಿನಿಂದಲೀ ಶುದ್ಧ ಕುಂಕುಮವನ್ನು ಹಚ್ಚಿ ಕೊಳ್ಳಿರಿ, ಕುಂಕುಮವನ್ನು ನಮಗೆ ನಾವು ನಾವು ಅನಾಮಿಕ ಬೆರಳಿನಿಂದ(ರಿಂಗ್ ಫಿಂಗರ್), ಇತರರಿಗೆ ಮಧ್ಯಮ ಬೆರಳಿನಿಂದ(ಮಿಡ್ಲ್ ಫಿಂಗರ್) ಹಚ್ಚಬೇಕು ಇದರಿಂದ ನಮಗೆ ಹೆಚ್ಚು ಶಕ್ತಿ ಸಿಗುತ್ತದೆ.

SHARE