ಉತ್ತರ ಪ್ರದೇಶದಲ್ಲಿ ಇರುವ ಈ ಆಲಯದಲ್ಲಿ ರಾತ್ರಿ ಹೊತ್ತು ಯಾರೂ ಇರಬಾರದಂತೆ. ಆ ರೀತಿ ಇದ್ದರೆ ಏನಾಗುತ್ತದೆ ಗೊತ್ತಾ..?

ನಮ್ಮ ದೇಶದಲ್ಲಿರುವ ಅನೇಕ ಐತಿಹಾಸಿಕ ಹಿಂದೂ ಆಲಯಗಳಲ್ಲಿ ಒಂದೊಂದಕ್ಕೂ ಒಂದೊಂದು ವಿಶೇಷತೆ ಇರುತ್ತದೆ ಎಂಬ ವಿಷಯ ಎಲ್ಲರಿಗೂ ಗೊತ್ತೇ ಇದೆ. ಕೆಲವು ಕಡೆ ಸಾಕ್ಷಾತ್ ದೇವರು, ದೇವತೆಗಳು ಓಡಾಡುತ್ತಾರೆಂದು, ಅವರಿಗೆ ಇಷ್ಟ ಬಂದಾಗ ಆಯಾ ಆಲಯಗಳಿಗೆ ಬರುತ್ತಾರೆಂದು ಸಹ ಪ್ರಚಾರದಲ್ಲಿದೆ. ಅಂತಹ ಆಲಯಗಳು ಸಹ ನಮ್ಮ ದೇಶದಲ್ಲಿ ಸಾಕಷ್ಟಿವೆ. ಈಗ ನಾವು ಹೇಳಲಿರುವ ಆಲಯ ಸಹ ಇಂತಹದ್ದೇ ಪಟ್ಟಿಗೆ ಸೇರುತ್ತದೆ. ಅಲ್ಲಿ ನೆಲೆಸಿರುವ ಶ್ರೀಕೃಷ್ಣ ರಾತ್ರಿ ಹೊತ್ತು ಆ ಆಲಯಗಳಿಗೆ ಬರುತ್ತಾನಂತೆ. ರಾತ್ರಿ ಹೊತ್ತು ಅಲ್ಲಿ ಯಾರೂ ಇರಲ್ಲವಂತೆ. ಇನ್ನೂ ಇಂತಹ ಅದೆಷ್ಟೋ ವಿಶೇಷಗಳು ಆ ಆಲಯದಲ್ಲಿವೆ. ಇಷ್ಟಕ್ಕೂ ಆ ಆಲಯ ಎಲ್ಲಿದೆ ಗೊತ್ತಾ..?

ಉತ್ತರ ಪ್ರದೇಶದಲ್ಲಿನ ವೃಂದಾವನದಲ್ಲಿ ಮೇಲೆ ತಿಳಿಸಿದ ಆ ಆಲಯ ಇದೆ. ಅದರ ಹೆಸರು ನಿಧಿವನ್. ಅಲ್ಲಿ ನೆಲೆಸಿರುವುದು ಶ್ರೀಕೃಷ್ಣ. ಆ ಆಲಯದಲ್ಲಿ ರಾತ್ರಿ ಆಗುತ್ತಿದೆ ಎಂದರೆ, ಮನುಷ್ಯರಲ್ಲ ಕನಿಷ್ಟ ಪಕ್ಷಿಗಳು, ಪ್ರಾಣಿಗಳು ಸಹ ಇರಲ್ಲ. ಸಾಮಾನ್ಯವಾಗಿ ಆ ಆಲಯದಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಭಕ್ತರ ಸಂಖ್ಯೆ ಹೆಚ್ಚಾಗಿ ಇರುತ್ತದೆ. ಅಷ್ಟೇ ಅಲ್ಲ ಆಲಯದ ಪ್ರಾಂಗಣದಲ್ಲಿ ಕೋತಿಗಳು ಸಹ ಗುಂಪು ಗುಂಪುಗಳಾಗಿ ಇರುತ್ತವೆ. ಅನೇಕ ರೀತಿಯ ಪಕ್ಷಿಗಳು ಸಹ ಅಲ್ಲಿಗೆ ಬರುತ್ತವೆ. ಆದರೆ ರಾತ್ರಿಯಾದರೆ ಯಾರೂ ಅಲ್ಲಿ ಇರಲ್ಲ. ಯಾಕೆಂದರೆ ರಾತ್ರಿ ಸಮಯದಲ್ಲಿ ಆ ಆಲಯಕ್ಕೆ ಶ್ರೀಕೃಷ್ಣನು ಬಂದು ರಾಧಾ, ಗೋಪಿಕೆಯರ ಜತೆಗೆ ನೃತ್ಯ ಮಾಡುತ್ತಾನಂತೆ. ಹಾಗಾಗಿ ಅಲ್ಲಿ ಯಾರೂ ಇರಲ್ಲ. ಆ ರೀತಿ ಇದ್ದರೆ ಸಾಯುವುದೋ ಅಥವಾ ಕುರುಡರು, ಹುಚ್ಚರಾಗಿಯೋ ಬದಲಾಗುತ್ತಾರೆ.

ನಿಧಿ ವನ್ ಆಲಯದಲ್ಲಿ ಇರುವ ಇನ್ನೂ ವಿಶೇಷಗಳು ಏನು ಎಂಬುದನ್ನು ಈಗ ನೋಡೋಣ.

  • ಸ್ವಾಮಿ ಹರಿದಾಸ್ ಎಂಬ ಮಹಾನ್ ಭಕ್ತ, ಸಂನ್ಯಾಸಿ ಒಂದು ಕಾಲದಲ್ಲಿ ಈ ಆಲಯದಲ್ಲಿ ಇದ್ದನಂತೆ. ಆಗ ಆತನ ಭಕ್ತಿಯನ್ನು ಮೆಚ್ಚಿ ಕೃಷ್ಣನು ಆತನಿಗೆ ಸಾಕ್ಷಾತ್ಕಾರ ಆದನಂತೆ. ಆ ರೀತಿ ಕೃಷ್ಣನು ಆತನಿಗೆ ಕಾಣಿಸಿದ ಪ್ರದೇಶದಲ್ಲಿ ಒಂದು ಆಲಯ ಸಹ ನೆಲೆಸಿದೆಯಂತೆ. ಅದನ್ನು ರಂಗ ಮಹಲ್ ಎಂದು ಕರೆಯುತ್ತಾರೆ.

  • ರಂಗ ಮಹಲ್‌ನಲ್ಲಿ ವೀಳ್ಯದೆಲೆ, ಒಂದು ಗ್ಲಾಸ್ ತುಂಬಾ ನೀರನ್ನು ಇಡುತ್ತಾರೆ. ಬೆಳಗಿನ ಹೊತ್ತಿಗೆ ಆ ಎಲೆಗಳು ಇರಲ್ಲವಂತೆ. ಆ ಗ್ಲಾಸ್‌ನಲ್ಲಿನ ನೀರು ಇರಲ್ಲವಂತೆ.
  • ಆಲಯ ಪ್ರಾಂಗಣದಲ್ಲಿ ಇರುವ ತುಳಸಿಇ ಗಿಡಗಳು ರಾತ್ರಿ ಹೊತ್ತು ಗೋಪಿಕೆಯರಾಗಿ ಬದಲಾಗುತ್ತವಂತೆ. ಆ ತುಳಸಿ ಗಿಡಗಳೆಲ್ಲಾ ಬಿಡಿಬಿಡಿಯಾಗಿ ಅಲ್ಲದೆ ಒಂದೇ ಕಡೆ ಇರುತ್ತವಂತೆ. ಆದರೂ ಅವುಗಳ ಕಾಂಡಗಳು ದೂರವಾಗಿ ಇರುತ್ತವೆ. ಅವು ಭಕ್ತರಿಗಾಗಿಯೇ ಆ ರೀತಿ ಆಗಿದೆ.
  • ಆಲಯ ಪ್ರಾಂಗಣದಲ್ಲಿ ದೊಡ್ಡ ಹೊಂಡ ಇದೆ. ಅದು ಹೇಗಾಯಿತು ಎಂದರೆ… ಒಂದು ಕಾಲದಲ್ಲಿ ರಾಧೆಗೆ ದಾಹ ಆದಕಾರಣ ನೀರಿಗಾಗಿ ಕೃಷ್ಣನೇ ಸ್ವತಃ ಅದನ್ನು ನಿರ್ಮಿಸಿದನಂತೆ.

  • ಸಾಮಾನ್ಯವಾಗಿ ಯಾವುದೇ ಗಿಡದ ರೆಂಬೆಗಳಾದರೂ ಮೇಲ್ಮುಖವಾಗಿ ಬೆಳೆಯುತ್ತವೆ. ಆದರೆ ಈ ಆಲಯದಲ್ಲಿನ ಗಿಡಗಳ ರೆಂಬೆಗಳು ಆ ರೀತಿ ಅಲ್ಲ. ಅವು ಕೆಳಮುಖವಾಗಿ ಬರುತ್ತವೆ.
  • ಶ್ರೀಕೃಷ್ಣನು ಎಷ್ಟು ಹೊತ್ತೂ ಕೊಳಲನ್ನು ಊದುತ್ತಾ ಗೋಪಿಕೆಯರ ಸುತ್ತ ಸುತ್ತುತ್ತಾ ಇದ್ದ ಕಾರಣ ರಾಧೆಗೆ ಕೋಪ ಬರುತ್ತದೆ. ಶ್ರೀಕೃಷ್ಣನ ಕೊಳಲನ್ನು ಆಕೆ ಬಚ್ಚಿಡುತ್ತಾಳೆ. ಆ ರೀತಿ ಮಾಡಿದರೆ ಕೃಷ್ಣ ಸ್ವಲ್ಪ ಸಮಯ ತನ್ನೊಂದಿಗೆ ಏಕಾಂತವಾಗಿ ಕಳೆಯುತ್ತಾನೆಂಬ ನಂಬಿಕೆ. ಈ ಹಿನ್ನೆಲೆಯಲ್ಲೇ ಆಕೆ ಕೊಳಲನ್ನು ಬಚ್ಚಿಟ್ಟಿರುವ ಸ್ಥಳ ಸಹ ನಿಧಿ ವನ್‌ನಲ್ಲಿದೆ ಎನ್ನುತ್ತಾರೆ.
  • ನಿಧಿ ವನ್ ಆಲಯ ಮುಖ್ಯ ದ್ವಾರದ ಮುಂದೆ ಆಲಯಕ್ಕೆ ಸಂಬಂಧಿಸಿದ ಕೆಲವು ಸೂಚನೆಗಳನ್ನು ತಿಳಿಸುತ್ತಾ ಒಂದು ಬೋರ್ಡ್ ದರ್ಶನ ನೀಡುತ್ತದೆ. ಅದರ ಮೇಲೆ ರಾತ್ರಿ ಆದ ಕೂಡಲೆ ಆಲಯದಲ್ಲಿ ಇರಬಾರದು ಎಂಬ ನಿಯಮ ಸಹ ಇದೆ.
SHARE