“ಮೋದಿಯನ್ನು ಟೀಕಿಸಿದ್ದಕ್ಕೆ ಬಾಲಿವುಡ್‌ನಿಂದ ಕಳೆದ ಒಂದು ವರ್ಷದಿಂದ ಯಾವುದೇ ಆಫರ್ ಬಂದಿಲ್ಲ” – ಪ್ರಕಾಶ್ ರೈ

ಅದೇನೋ ಗೊತ್ತಿಲ್ಲ… ಗೌರಿ ಲಂಕೇಶ್ ನಿಧನದ ನಂತರ ಪ್ರಕಾಶ್ ರೈಗೆ ದೇಶದ ಮೇಲೆ ಅಭಿಮಾನ ಹೆಚ್ಚಾಗಿದೆ. ಅದೇ ರೀತಿ ಬಿಜೆಪಿ ಮೇಲೆ ಕೆಂಡ ಕಾರುವುದಕ್ಕೆ ಸ್ಟಾರ್ಟ್ ಮಾಡಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ, ಬಿಜೆಪಿ ವಿರುದ್ಧ ಕ್ಯಾಂಪೈನ್ ಕೂಡ ಮಾಡುತ್ತಿದ್ದು, ಕರ್ನಾಟಕದಲ್ಲಿ ಬಿಜೆಪಿ ಸೋಲಿಸಿಯೇ ಸೋಲಿಸುತ್ತೇನೆ ಎನ್ನುವಷ್ಟರ ಮಟ್ಟಿಗೆ. ಲೋಕಲ್ ಲೀಡರ್ ಬೈಕೊಂಡು ಓಡಾಡೋದು ಬಿಟ್ಟು, ಮಾತ್ ಎತ್ತಿದರೆ ರಾಷ್ಟ್ರೀಯ ನಾಯಕರಾದ ನರೇಂದ್ರ ಮೋದಿ ವಿರುದ್ಧ ಹೇಳಿಕೆ ನೀಡಲು ಶುರು ಮಾಡಿರುವುದು ಸದ್ಯ ಪ್ರಕಾಶ್ ರೈ ಕೆಲಸ ಕಳೆದುಕೊಳ್ಳುವಷ್ಟರ ಮಟ್ಟಿಗೆ ಸ್ಥಿತಿ ಬಂದು ತಲುಪಿದೆ.

ಹೌದು, ಆಶ್ಚರ್ಯವೆನ್ನಿಸಿದರೂ ಇದು ಸತ್ಯ ಸಂಗತಿ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಟೀಕಿಸಲು ಆರಂಭಿಸಿದ ನಂತರ ನನಗೆ ಯಾವುದೇ ಪಾತ್ರಗಳ ಆಫರ್‌ ನೀಡುವುದನ್ನೇ ಬಾಲಿವುಡ್ ನಿಲ್ಲಿಸಿದೆ ಎಂದು ನಟ ಪ್ರಕಾಶ್ ರೈ ಹೇಳಿಕೊಂಡಿದ್ದಾರೆ. ಆದರೆ, ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾನು ಬಹಿರಂಗವಾಗಿ ಧ್ವನಿ ಎತ್ತಲು ಆರಂಭಿಸಿದಾಗಿನಿಂದ ಹಿಂದಿ ಚಿತ್ರರಂಗದಿಂದ ಇಲ್ಲಿಯವರೆಗೆ ಯಾವುದೇ ಆಹ್ವಾನ ಬಂದಿಲ್ಲ” ಎಂದಿದ್ದಾರೆ.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಮೊದಲ ಬಾರಿಗೆ ಟೀಕಿಸಿದ ಬಳಿಕ ತಮ್ಮನ್ನು ಹಿಂದಿ ಸಿನಿಮಾರಂಗ ಮೂಲೆಗುಂಪು ಮಾಡಿತು ಎಂದು ಸಂದರ್ಶನವೊಂದರಲ್ಲಿ ರೈ ದೂರಿದ್ದಾರೆ. ಆದರೆ, ಅದರ ಬಗ್ಗೆ ಚಿಂತೆಯಿಲ್ಲ. ನನ್ನ ಬಳಿ ಸಾಕಾಗುವಷ್ಟು ಹಣವಿದೆ ಎಂದು ಹೇಳಿದ್ದಾರೆ.

ಗೌರಿ ಸಾವು ನನ್ನನ್ನು ತೀವ್ರ ಘಾಸಿಗೊಳಿಸಿದೆ. ಆಕೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಆಕೆಯನ್ನು ಮೌನವಾಗಿಸಿದಾಗ ನನ್ನಲ್ಲಿ ತಪ್ಪಿತಸ್ಥ ಭಾವ ಮೂಡಿತು. ಆಕೆಯ ಹೋರಾಟದಲ್ಲಿ ಆಕೆಯನ್ನು ಒಂಟಿಯಾಗಿ ಬಿಡಬೇಕೇ? ನಾನು ಪ್ರಶ್ನಿಸಿದ್ದಷ್ಟೂ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನಗಳು ಹೆಚ್ಚುತ್ತಿವೆ. ಅದು ವೈಯಕ್ತಿಕ ತೇಜೋವಧೆ ಇರಬಹುದು, ಬೆದರಿಕೆ ಇರಬಹುದು ಅಥವಾ ನನ್ನ ಕೆಲಸವನ್ನು ತಡೆಯುವ ಪ್ರಯತ್ನ ಇರಬಹುದು. ಅದನ್ನು ಮಾಡುತ್ತಿರುವುದು ಬಿಜೆಪಿ

SHARE