ಫ್ಲೈಟ್‌ನಲ್ಲಿ ಅದೇ ಕೆಲಸವಾಗಿ ಗ್ಯಾಸ್ ಬಿಡುತ್ತಿದ್ದಾನೆಂದು.. ಫ್ಲೈಟನ್ನು ಎಮರ್ಜೆನ್ಸಿ ಲ್ಯಾಂಡ್ ಮಾಡಿದ ಪೈಲಟ್.!!?

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಅದೇ ಕೆಲಸವಾಗಿ ಭರಿಸಲಾಗದ ದುರ್ವಾಸನೆಯಿಂದ ಕೂಡಿದ ಗ್ಯಾಸ್ ಬಿಡುತ್ತಿದ್ದಾನೆಂಬ ಕಾರಣದಿಂದ ಪ್ರಯಾಣಿಕರ ನಡುವೆ ಶುರುವಾದ ಒಂದು ಚಿಕ್ಕ ಗಲಾಟೆ ವಿಮಾನ ಎಮರ್ಜೆನ್ಸಿ ಲ್ಯಾಂಡ್ ಮಾಡುವವರೆಗೂ ಹೋಯಿತು.

ವಿವರಗಳನ್ನು ನೋಡಿದರೆ..
ದುಬೈನಿಂದ ಅಮಸ್ಟರ್‌ಡ್ಯಾಮ್‍ಗೆ ಹೋಗುತ್ತಿದ್ದ ವಿಮಾನದಲ್ಲಿ ವ್ಯಕ್ತಿಯೊಬ್ಬ ಪ್ರಯಾಣಿಸುತ್ತಿದ್ದ. ಆತ ತಿಂದ ಫುಡ್ ಕಾರಣದಿಂದಲೋ ಏನೋ ಸ್ಟಮಕ್ ಅಪ್‌ಸೆಟ್ ಆಗಿ.. ಅದೇ ಕೆಲಸವಾಗಿ ಗ್ಯಾಸ್ ಬಿಡುತ್ತಲೇ ಇದ್ದ. ಈ ಹಿನ್ನೆಲೆಯಲ್ಲಿ ಆತನ ಪಕ್ಕದಲ್ಲೇ ಕುಳಿತಿದ್ದ ಇನ್ನೂ ನಾಲ್ಕು ಮಂದಿ ಪ್ರಯಾಣಿಕರು ಇದೇ ವಿಷಯವಾಗಿ ಆತನ ಜತೆಗೆ ಜಗಳಕ್ಕೆ ಇಳಿದರು. ಸಮಾಧಾನ ಪಡಿಸುವ ಪ್ರಯತ್ನ ಮಾಡಿದರೂ ಬಿಡದೆ, ಆತನ ಮೇಲೆ ಕೈ ಮಾಡಿದರು. ಈ ವಿಷಯ ಪೈಲಟ್‌ಗೆ ಗೊತ್ತಾಗಿ.. ಆತ ಫ್ಲೈಟನ್ನು ಕೂಡಲೆ ವಿಯಟ್ನಾಂನಲ್ಲಿ ಎಮರ್ಜೆನ್ಸಿ ಲ್ಯಾಂಡ್ ಮಾಡಿದ.

ಫ್ಲೈಟ್ ಲ್ಯಾಂಡ್ ಆದ ಕೂಡಲೆ ಪೊಲೀಸರು.. ಗ್ಯಾಸ್ ಬಿಟ್ಟ ವ್ಯಕ್ತಿ ಮೇಲೆ ದಾಳಿ ಮಾಡಿದ 4 ಮಂದಿಯನ್ನು ಬಂಧಿಸಿದರು. ಗ್ಯಾಸ್ ಬಿಡುವುದು ಸಹಜ ಪ್ರಕ್ರಿಯೆ. ಅದು ತಪ್ಪು ಎಂದು ಹೇಳಿ ಹೊಡೆದಿರುವುದು ಅಪರಾದ ಎಂದು ಪೊಲೀಸರು ವಾದಿಸಿದ್ದಾರೆ. ತಮ್ಮನ್ನು ಅನ್ಯಾಯವಾಗಿ ಅರೆಸ್ಟ್ ಮಾಡಿದ್ದಾರೆಂದು ಆ ಏರ್‌ಲೈನ್ಸ್ ಮೇಲೆ ಪ್ರಕರಣ ದಾಖಲಿಸಿದ್ದಾರೆ ಆ 4 ಮಂದಿ ಪ್ರಯಾಣಿಕರು. ನನ್ನಿಂದ ನಡೆದ ತಪ್ಪಿಗೆ ಕ್ಷಮಾಪಣೆ ಕೇಳುತ್ತಿದ್ದೇನೆ. ಆದರೆ ನಾನು ಬೇಕೆಂದೇ ಆ ರೀತಿ ಮಾಡಲಿಲ್ಲ. ನಾನು ತಿಂದ ಫುಡ್ ಸ್ವಲ್ಪ ವ್ಯತ್ಯಾಸವಾದ ಕಾರಣ ಗ್ಯಾಸ್ ಅದಷ್ಟಕ್ಕದೇ ಹೊರಗೆ ತಳ್ಳಿಕೊಂಡು ಬರುತ್ತಿದೆ ಎಂದು ಹೇಳಿದ್ದಾನೆ ಫ್ಲೈಟ್‌ನಲ್ಲಿ ಗ್ಯಾಸ್ ಬಿಟ್ಟ ವ್ಯಕ್ತಿ.

SHARE