ಪೆಟ್ರೋಲ್‍ಗಾಗಿ… ಭಾರತದಿಂದ ನೇಪಾಳಕ್ಕೆ ಹೋಗುತ್ತಿದ್ದಾರೆ… ಲಕ್ಷಾಂತರ ಸಂಪಾದಿಸುತ್ತಿದ್ದಾರೆ..!

ಭಾರತದಲ್ಲಿ ಪೆಟ್ರೋಲ್ ಬೆಲೆ ಗಮನಕ್ಕೇರಿದ್ದು ಮಾತನಾಡುವಂತಿಲ್ಲ ಎಂಬಂತಿದೆ… ಪೆಟ್ರೋಲ್‌ಗಾಗಿ ಗಡಿಪ್ರದೇಶದ ಜನ ಪಕ್ಕದ ದೇಶಗಳಿಗೆ ಹೋಗಿ, ಕ್ಯಾನ್‌ಗಟ್ಟಲೆ ಪೆಟ್ರೋಲನ್ನು ತುಂಬಿಕೊಂಡು ಬಂದು ತಮ್ಮ ಊರುಗಳಲ್ಲಿ ಮಾರಾಟ ಮಾಡಿಕೊಂಡು ಲಕ್ಷಾಂತರ ಸಂಪಾದಿಸುತ್ತಿದ್ದಾರೆ. ನೇಪಾಳದ ಗಡಿಪ್ರದೇಶವಾದ ಬಿಹಾರ್ ರಾಜ್ಯದಲ್ಲಿನ ರಕ್ಸಲ್, ಸೀತಾಮರ್ಹಿಯಲ್ಲಿನ ಜನ ತಮ್ಮ ವಾಹನಗಳಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಬರಲು ಪಕ್ಕದ ದೇಶ ನೇಪಾಳಕ್ಕೆ ಹೋಗುತ್ತಿದ್ದಾರೆ..

ಭಾರತದೊಂದಿಗೆ ಹೋಲಿಸಿದರೆ ಅಲ್ಲಿ (ನೇಪಾಳ) ಪೆಟ್ರೋಲ್ ಬೆಲೆ 15 ರೂಪಾಯಿ, ಡೀಸೆಲ್ 18 ರೂಪಾಯಿ ಕಡಿಮೆ ಇರುವ ಕಾರಣ ಹಾಗೂ ನಮ್ಮ 100 ರೂಪಾಯಿ ಅಲ್ಲಿನ 160 ರೂಪಾಯಿಗೆ ಸಮಾನವಾಗಿರುವುದು… ಈ ಭಾಗದ ಜನ ನೇಪಾಳ ಪೆಟ್ರೋಲ್ ಬಂಕ್‌ಗಳಿಗೆ ಎಡೆತಾಕುತ್ತಿದ್ದಾರೆ. ಅಷ್ಟೇ ಅಲ್ಲದೆ ನೇಪಾಳದಲ್ಲಿ ಒಂದೇ ರೀತಿಯ ತೆರಿಗೆ ವ್ಯವಸ್ಥೆ ಇರುವುದು ಅಲ್ಲಿ ರೇಟ್ ಕಡಿಮೆಯಾಗಲು ಇನ್ನೊಂದು ಮುಖ್ಯ ಕಾರಣ.

ಈ ಪರಿಸ್ಥಿತಿಯ ಹಿನ್ನೆಲೆಯಲ್ಲಿ… ನೇಪಾಳ ಪೆಟ್ರೋಲ್ ಬಂಕ್‌ಗಳಿಗೆ ಹೊಸ ಕಳೆ ಬಂದಂತಾಗಿದೆ. ರೆಗ್ಯುಲರ್ ಮಾರಾಟಕ್ಕೆ ಹೋಲಿಸಿದರೆ… ಶೇ.15 ರಿಂದ 20ರಷ್ಟು ಹೆಚ್ಚಾಗಿದೆಯಂತೆ ನೇಪಾಳದಲ್ಲಿ..!

SHARE