ಪಾಕೆಟ್ ಹಾಲನ್ನು ಕುದಿಸಬಾರದು. ಯಾಕೆ ಗೊತ್ತಾ..?

ಹಾಲು ನಮಗೆ ಸಂಪೂರ್ಣ ಪೌಷ್ಠಿಕ ಆಹಾರವನ್ನು ನೀಡುವ ಆಹಾರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಹಾಲನ್ನು ನಿತ್ಯ ಕುಡಿಯುವುದರಿಂದ ನಮ್ಮ ದೇಹಕ್ಕೆ ಒಳ್ಳೆಯ ಪೋಷಾಂಕಾಶಗಳು ಲಭಿಸುತ್ತವೆ. ಮಕ್ಕಳ ಬೆಳವಣಿಗೆಗೆ ಸಹಕಾರಿ. ಆದರೆ ಹಾಲನ್ನು ಕುಡಿಯಬೇಕಾದರೆ ಅದನ್ನು ಕುದಿಸಬೇಕು. ಹಾಲಿನಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾ ನಶಿಸುತ್ತದೆ. ಆದರೆ ಇಂದು ಬಹಳಷ್ಟು ಮಂದಿ ಪಾಕೆಟ್ ಹಾಲನ್ನು ಸಹ ಕುದಿಸುತ್ತಿದ್ದಾರೆ. ಆದರೆ ಹಾಗೆ ಮಾಡಬಾರದು ಗೊತ್ತಾ..? ಪಾಕೆಟ್ ಹಾಲನ್ನು ಕುದಿಸಬೇಕಾದ ಅಗತ್ಯವಿಲ್ಲ. ಸ್ವಲ್ಪ ಬಿಸಿ ಮಾಡಿಕೊಂಡು ಬಳಸಿದರೆ ಸಾಕು. ಆದರೆ ಅದು ಗೊತ್ತಿಲ್ಲದ ಬಹಳಷ್ಟು ಮಂದಿ ಅದನ್ನು ಚೆನ್ನಾಗಿ ಕುದಿಸುತ್ತಿದ್ದಾರೆ. ಆದರೆ ಪಾಕೆಟ್ ಹಾಲನ್ನು ಕುದಿಸಬೇಕಾದ ಅಗತ್ಯ ಯಾಕಿಲ್ಲ ಎಂಬುದನ್ನು ಈಗ ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಯಾವುದೇ ಡೈರಿಯಲ್ಲಾದರೂ ಹಾಲನ್ನು ಅಧಿಕ ಉಷ್ಣತೆಯಲ್ಲಿ ಕುದಿಸುತ್ತಾರೆ. 161.6 ಡಿಗ್ರಿ ಫಾರೆನ್‍ಹೀಟ್ ಉಷ್ಣತೆಯಲ್ಲಿ ಹಾಲನ್ನು ಕುದಿಸಿ ಕೂಡಲೆ 15 ಸೆಕೆಂಡ್‌ಗಳಲ್ಲಿ ತಣ್ಣಗೆ ಮಾಡುತ್ತಾರೆ. ಈ ರೀತಿ ಮಾಡುವುದನ್ನು ಪ್ಯಾಶ್ಚರೈಸೇಷನ್ ಎನ್ನುತ್ತಾರೆ. ಇದರಿಂದ ಹಾಲಿನಲ್ಲಿರುವ ಹಾನಿಕಾರಕ ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ ಸಾಯುತ್ತದೆ. ಈ ರೀತಿ ಒಮ್ಮೆ ಕುದಿಸಿದ ಬಳಿಕ ಆ ಹಾಲನ್ನು ಪ್ಯಾಕ್ ಮಾಡುತ್ತಾರೆ. ಬಳಿಕ ಅವನ್ನು ಮತ್ತೆ ಕುದಿಸಿದರೆ ಅವುಗಳಲ್ಲಿರುವ ಪೋಷಕಾಂಶಗಳು ನಶಿಸುತ್ತವೆ. ಹಾಗಾಗಿ ಪ್ಯಾಕೆಟ್ ಹಾಲನ್ನು ಕುದಿಸಬೇಕಾದ ಅಗತ್ಯವಿಲ್ಲ. ತಣ್ಣಗೆ ಇರುತ್ತದೆ ಎಂದರೆ ಸ್ವಲ್ಪ ಬಿಸಿ ಮಾಡಿಕೊಂಡು ಕುಡಿಯಬಹುದು. ಆದರೆ ಕುದಿಸಬಾರದು.

ಇನ್ನು ಪಾಕೆಟ್ ಹಾಲು ಅಲ್ಲದೆ ನೇರವಾಗಿ ಹಾಲುಮಾರುವವರಿಂದ ಹಾಲನ್ನು ಕೊಳ್ಳುವವರು ಮಾತ್ರ ಆ ಪಾಲನ್ನು ಕಡ್ಡಾಯವಾಗಿ ಕುದಿಸಬೇಕು. ಇದರಿಂದ ಆ ಹಾಲಿನಲ್ಲಿರುವ ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ ನಶಿಸುತ್ತದೆ. ಆಗ ಆ ಹಾಲನ್ನು ಕುಡಿಯಬಹುದು. ಹಾಗಾಗಿ ಇನ್ನು ಯಾರೂ ಪಾಕೆಟ್ ಹಾಲನ್ನು ಕುದಿಸಬೇಡಿ. ಈ ವಿಷಯವನ್ನು ಎಲ್ಲರಿಗೂ ತಿಳಿಸಿ. ಆ ರೀತಿ ಮಾಡಿದರೆ ಸಾಕಷ್ಟು ಅಡುಗೆ ಅನಿಲವನ್ನೂ ಉಳಿಸಬಹುದು.

SHARE