ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ವೈರಲ್ ಆದ ಫೋಟೋಗಳು

ನೆನಪುಗಳು ಅಳಿಸದಂತೆ ಭದ್ರವಾಗಿಡುವಂತಹವು “ಫೊಟೋಗಳು“. ನಾನಾ ರೀತಿಯ ಭಾವೋದ್ವೇಗಗಳನ್ನು ಉಂಟು ಮಾಡುವ ಶಕ್ತಿ ಫೋಟೋಗಳಿಗಿದೆ. ಹಾಗಾಗಿಯೇ ಈ ಹಿಂದಿನ ನೆನಪುಗಳನ್ನು ಮರೆಯಬಾರದು ಎಂದು ಬಹಳಷ್ಟು ಮಂದಿ ಫೋಟೋ ತೆಗೆಸಿಕೊಂಡು ಅವನ್ನು ಜತನದಿಂದ ಕಾಪಾಡಿಕೊಳ್ಳುತ್ತಾರೆ. ಸಾವಿರ ಮಾತುಗಳಲ್ಲಿ ಹೇಳಲಿಕ್ಕೆ ಆಗದನ್ನು ಕೇವಲ ಒಂದು ಫೋಟೋದಲ್ಲಿ ಅಡಗಿರುತ್ತದೆ ಎಂಬುದು ನಿಜ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾ ವೈರಲ್ ಆದ ಕೆಲವು ಫೋಟೋಗಳನ್ನು ನೋಡೋಣ.

1. ಪಾಪ ಫೋಟೋ ತೆಗೆಸಿಕೊಳ್ಳಲು ಈ ಯುವಕ ಅದೆಷ್ಟು ತಿಪ್ಪರಲಾಗ ಹಾಕಿದ್ದಾನೆ ನೋಡಿ. ಅದೇನೇ ಇರಲಿ ಈತನ ಈ ಭಂಗಿ ಸ್ವಲ್ಪ ಸಮಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

2. ಇದೇನಿದು ದ್ರಾಕ್ಷಿ ಇಟ್ಟು ಮಾನಿನಕಾಯಿ ಮಾರುತ್ತಿದ್ದಾನೆ ಎಂದುಕೊಂಡಿರಾ? ಏನೋ ಗೊತ್ತಿಲ್ಲ. ಇದಕ್ಕೂ ಮುನ್ನ ದ್ರಾಕ್ಷಿ ಮಾರುತ್ತಿದ್ದ ಅನ್ನಿಸುತ್ತದೆ.. ಬೋರ್ಡ್ ಬದಲಾಯಿಸುವುದನ್ನು ಮರೆತ ಅಂತ ಕಾಣುತ್ತದೆ.

3. ನೆರೆ ಬಂದರೂ, ಭೂಕಂಪವಾದರೂ ಸರಿ ಮಹಿಳೆಯರು ಟಿವಿ ಧಾರಾವಾಹಿ ನೋಡುವುದನ್ನು ಮಾತ್ರ ನಿಲ್ಲಿಸಲ್ಲ ಎಂಬುದು ವೈರಲ್ ಆದ ಫೋಟೋ ಇದು.

4. ಪಾಪ ಇದು ಕೂಡ ಸೀರೆ ಕೊಳ್ಳಲು ಬಂತೇನೋ.. ಅದಕ್ಕೂ ಒಂದು ನಾಲ್ಕು ಸೀರೆ ತೋರಿಸಿ ಗುರು.

5. ಯಜಮಾನ ಕೆಳಗಿನ ಕೊಟ್ಟಿಗೆ ಸ್ವಚ್ಛಗೊಳಿಸಿಲ್ಲ ಅನ್ನಿಸುತ್ತದೆ. ಅದಕ್ಕೇ ವಾಸನೆ ಭರಿಸಲಾಗದೆ ಕೋಣ ಮೇಲೆ ಹತ್ತಿದೆ.

6. ಯಾವ ಜಾತಿ, ಧರ್ಮವಾದರೂ ನಮ್ಮ ಮುಂದೆ ಒಂದೇ ಎಂದು ಸಾರಿ ಹೇಳಿದ ಫೋಟೋ.

7. ಪ್ರತಿ ನಾಯಿಗೂ ಒಂದು ದಿನ ಬರುತ್ತದೆ ಅಂತಾರೆ. ಈ ದಿನ ಈ ನಾಯಿಗೆ ಬಂದಿದೆ. ನಿಜವಾಗಿ ನಾಯಿಗೆ ಏನು ಅದೃಷ್ಟವೋ. ಏಕಾಏಕಿ ಆ ಮಗುವಿನ ಸ್ಥಳವನ್ನೇ ಆಕ್ರಮಿಸಿದೆ.

8. ಭಾರತದಲ್ಲಿ ಬಹಳಷ್ಟು ಕಡೆಗಳಲ್ಲಿ ಇದು ಕಾಮನ್. ಬಹಳಷ್ಟು ಮಂದಿ ಹೋಗುವಾಗ ಹೆಲ್ಮೆಟ್ ಇಟ್ಟುಕೊಳ್ಳಲ್ಲವಾದರೂ ಈರುಳ್ಳಿ ಹೆಚ್ಚುವಾಗ ಮಾತ್ರ ಕಡ್ಡಾಯವಾಗಿ ಹೆಲ್ಮೆಟ್ ಇರಲೇಬೇಕು.

9. ಅಬ್ಬಾ ಅದೆಷ್ಟು ದಯಾಮಯಿ.. ತ್ರಿಬಲ್ ರೈಡಿಂಗ್ ಮಾಡುತ್ತಾ ಸಹ ಹಿಂದುಗಡೆ ಕೋತಿಗೂ ಲಿಫ್ಟ್ ಕೊಟ್ಟ. ಅದು ನಿಲ್ಲಿಸು ಎಂದ ಕಡೆ ನಿಲ್ಲಿಸಿ. ಇಲ್ಲದಿದ್ದರೆ ನಿಮ್ಮ ಕೆಲಸ ಅಷ್ಟೇ.

10. ಅದೇನೇ ಇರಲಿ.. ನಮ್ಮ ಮೇಲೆ ಮಳೆ ಬೀಳದಿದ್ದರೆ ಸಾಕು. ಈತನ ಐಡಿಯಾ ಸೂಪರ್ ಅಲ್ಲವೇ..

SHARE