ರೈಲು ನಿಲ್ದಾಣದಲ್ಲಿ ಸಿಗುವ ಉಚಿತ ವೈಫೈ ಇಂಟರ್ನೆಟ್ ಆತನ ಜೀವನವನ್ನೇ ಬದಲಾಯಿಸಿತು. ಹೇಗೆ ಗೊತ್ತಾ..?

ಹೌದು..ಇದು ನಿಜ.. ಮನಸ್ಸಿದ್ದರೆ ಮಾರ್ಗ. ಯಾವುದೇ ಅವಕಾಶಗಳಿಲ್ಲ, ಕೈಯಲ್ಲಿ ಹಣವಿಲ್ಲ…ಶಿಕ್ಷಣ ಇಲ್ಲ… ಎಂದುಕೊಂಡರೆ ನಿಜವಾಗಿ ಯಾರೂ ಓದಲ್ಲ. ಅಂತಹವರು ಉತ್ತಮ ಶಿಕ್ಷಣ ಪಡೆಯಲಿಲ್ಲ ಎಂದು ನರಳುವುದಕ್ಕಿಂತ ತಮಗೆ ತಾವೆ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು. ಆ ಅವಕಾಶಗಳಿಂದಲೇ ಓದಿಕೊಳ್ಳಬೇಕು. ಇದರಿಂದ ಶಿಕ್ಷಣದಲ್ಲಿ ಮುಂದೆ ಬರುತ್ತಾರೆ. ಇದೇ ರೀತಿ ಆಲೋಚಿಸಿದ ಯುವಕ ಯಾರೂ ಮಾಡದ ಸಾಧನೆಯನ್ನು ಮಾಡಿದ. ಒಂದು ಕಡೆ ರೈಲು ನಿಲ್ದಾಣದಲ್ಲಿ ಮೂಟೆಹೊರುವ ಕೆಲಸ ಮಾಡುತ್ತಾ, ಇನ್ನೊಂದು ಕಡೆ ಸಮಯ ಸಿಕ್ಕಾಗ ತನ್ನ ಸ್ಮಾರ್ಟ್‌ಫೋನ್‌ನಲ್ಲಿ ರೈಲ್ವೆ ಫ್ರೀ ವೈಫೈ ಮೂಲಕ ಇಂಟರ್‌ನೆಟ್‌ನಲ್ಲಿ ಓದಿಕೊಳ್ಳುತ್ತಿದ್ದ. ಬಳಿಕ ಆ ರಾಜ್ಯದ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ಪಾಸಾಗಿದ್ದಾನೆ. ಇಷ್ಟಕ್ಕೂ ಆತ ಯಾರೆಂದರೆ…

ಕೇರಳದ ಮುನ್ನೂರ್‌ನ ಕೆ ಶ್ರೀನಾಥ್ ಕಳೆದ ಐದು ವರ್ಷಗಳಿಂದ ಎರ್ನಾಕುಲಂ ರೈಲು ನಿಲ್ದಾಣದಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದಾನೆ. ಆದರೆ ಈತನಿಗೆ ಉನ್ನತ ಶಿಕ್ಷಣ ಪಡೆದು ಸರಕಾರಿ ಉಗ್ಯೋಗ ಸಾಧಿಸಬೇಕೆಂಬ ಬಯಕೆ ಇತ್ತು. ಆದರೆ ಓದಲು ಹಣ ಇರಲಿಲ್ಲ. ಹಾಗಾಗಿ ರೈಲು ನಿಲ್ದಾಣದಲ್ಲಿನ ಉಚಿತ ವೈಫೈ ಇಂಟರ್‌ನೆಟ್ ಸೌಲಭ್ಯವನ್ನು ನೋಡಿ ಒಂದು ಸ್ಮಾರ್ಟ್‍ಫೋನ್ ಕೊಂಡುಕೊಂಡ. ಬಳಿಕ ಅದರಲ್ಲಿ ಕೇರಳ ಪಬ್ಲಿಕ್ ಸರ್ವಿಸಸ್ ಕಮಿಷನ್ ಪರೀಕ್ಷೆಗೆ ಸಂಬಂಧಿಸಿದ ಮೆಟಿರಿಯಲ್‌ನ್ನು ಫೋನ್‌ನಲ್ಲೇ ಸಂಗ್ರಹಿಸಿದ. ಆಡಿಯೋ ಸ್ಯಾಂಪಲ್ಸ್, ಮಾಕ್ ಟೆಸ್ಟ್ ಪೇಪರ್‌ಗಳು ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದ. ಆನ್‌ಲೈನ್ ಪರೀಕ್ಷೆಗಳನ್ನೂ ಫೋನ್‌ನಲ್ಲೇ ಪ್ರಾಕ್ಟೀಸ್ ಮಾಡಿದ. ಇದೆಲ್ಲಾ ಶ್ರೀನಾಥ್ ತನಗೆ ಸಿಗುತ್ತಿದ್ದ ಖಾಲಿ ಸಮಯದಲ್ಲಿ ಮಾಡುತ್ತಿದ್ದ.

ಆ ರೀತಿ ರೈಲು ನಿಲ್ದಾಣದಲ್ಲಿ ಸಿಗುತ್ತಿದ್ದ ಉಚಿತ ವೈಫೈ ಇಂಟರ್‌ನೆಟ್ ಉಪಯೋಗಿಸಿಕೊಂಡು ಡಿಜಿಟಲ್ ಮಾಧ್ಯಮದ ಮೂಲಕ ಶ್ರೀನಾಥ್ ಪ್ರಿಪೇರ್ ಆದ. ಒಂದು ಕಡೆ ಕೂಲಿ ಕೆಲಸ ಮಾಡುತ್ತಾ, ಇನ್ನೊಂದು ಕಡೆ ಇಯರ್ ಫೋನ್ ಇಟ್ಟುಕೊಂಡು ಪರೀಕ್ಷೆಯ ಮೆಟೀರಿಯಲ್, ಸಬ್ಜೆಕ್ಟ್‌ಗಳನ್ನು ಫೋನ್‌ನಲ್ಲಿ ಕೇಳಿಸಿಕೊಳ್ಳುತ್ತಿದ್ದ. ಅವನ್ನು ಮನಸ್ಸಿನಲ್ಲೇ ಮನನ ಮಾಡಿಕೊಳ್ಳುತ್ತಿದ್ದ. ರಾತ್ರಿ ಹೊತ್ತು ಅವನ್ನು ಮತ್ತೆ ರಿವಿಜನ್ ಮಾಡಿಕೊಳ್ಳುತ್ತಿದ್ದ. ಆ ರೀತಿ ಅಹರ್ನಿಶಿ ಶ್ರಮಿಸಿದ ಶ್ರೀನಾಥ್. ಇತ್ತೀಚೆಗೆ ನಡೆದ ಕೇರಳ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸಿದ ಫೀಲ್ಡ್ ಅಸಿಸ್ಟೆಂಟ್ ಪರೀಕ್ಷೆಯಲ್ಲಿ ಅರ್ಹತೆ ಸಾಧಿಸಿದ. ಇನ್ನು ಸಂದರ್ಶನ ಮಾತ್ರ ಉಳಿದಿದೆ. ಅದೂ ಸಹ ಅಟೆಂಡ್ ಆಗಿ ಪಾಸಾದರೆ ಆತ ವಿಲೇಜ್ ಫೀಲ್ಡ್ ಅಸಿಸ್ಟೆಂಟ್ ಆಗಿ ಆಯ್ಕೆಯಾಗುತ್ತಾನೆ. ಅದಕ್ಕೆ ತಕ್ಕಂತೆ ಪ್ರಿಪೇರ್ ಆಗುತ್ತಿರುವುದಾಗಿ ಶ್ರೀನಾಥ್ ಹೇಳಿದ್ದಾನೆ. ಆತನ ಕನಸು ಕೈಗೂಡಲಿ ಎಂದು ಬಯಸೋಣ. ಅದೇನೇ ಇರಲಿ ಸಾಧಿಸಬೇಕೆಂಬ ಛಲ, ಅದಕ್ಕೆ ತಕ್ಕಂತೆ ಶ್ರಮ ವಹಿಸಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇದು ನಿದರ್ಶನ..!

SHARE