ಗರ್ಭಿಣಿಯರು ಪಪ್ಪಾಯ ಹಣ್ಣು ತಿನ್ನಬಾರದೆ? ತಿಂದರೆ ಏನಾಗುತ್ತದೆ ಗೊತ್ತಾ ?

ಪಪ್ಪಾಯಿ ಹಣ್ಣು ತಿನ್ನುವುದರಿಂದ ನಮಗೆ ಸಾಕಷ್ಟು ಲಾಭಗಳಿವೆ ಎಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದರಿಂದ ನಮ್ಮ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು ಲಭಿಸುತ್ತವೆ. ಜೀರ್ಣಕೋಶ ಸ್ವಚ್ಛವಾಗುತ್ತದೆ. ಗ್ಯಾಸ್, ಅಸಿಡಿಟಿ, ಮಲಬದ್ಧತೆ ಸಮಸ್ಯೆಗಳು ದೂರವಾಗುತ್ತವೆ. ರಕ್ತ ಹೆಚ್ಚುತ್ತದೆ. ಡೆಂಗ್ಯೂ ವಿಷಜ್ವರ ಸೋಕಿದವರಿಗೆ ಇದನ್ನು ಕೊಟ್ಟರೆ ಶೀಘ್ರವಾಗಿ ಚೇತರಿಸಿಕೊಳ್ಳುತ್ತಾರೆ. ಆದರೆ ಇದೆಲ್ಲಾ ಸರಿ… ಎಂದಿನಿಂದಲೋ ಪಪ್ಪಾಯಿ ಹಣ್ಣಿನ ಬಗ್ಗೆ ನಮ್ಮಲ್ಲಿ ಒಂದು ಸಂದೇಹ ಇದೆ. ಗರ್ಭಿಣಿಯರು ಪಪ್ಪಾಯ ತಿನ್ನಬಾರದು? ತಿಂದರೆ ಏನಾಗುತ್ತದೆ? ಗರ್ಭಸ್ರಾವ ಆಗುತ್ತದಾ? ಎಂಬ ಸಂದೇಹಗಳು ಬಹಳಷ್ಟು ಮಂದಿಯಲ್ಲಿ ಇವೆ. ಹಾಗಿದ್ದರೆ ಈ ವಿಷಯದಲ್ಲಿ ಸತ್ಯ ಎಷ್ಟಿದೆ? ಎಂಬುದನ್ನು ಈಗ ತಿಳಿದುಕೊಳ್ಳೋಣ.

ಗರ್ಭಿಣಿಯರು ಪಪ್ಪಾಯ ತಿನ್ನಬಾರದೆಂದು ಮನೆಯಲ್ಲಿ ಹಿರಿಯರು ಹೇಳುತ್ತಿರುತ್ತಾರೆ. ಗರ್ಭಿಣಿಯರು ಈ ಹಣ್ಣು ತಿಂದರೆ ಗರ್ಭಸ್ರಾವ ಆಗುತ್ತದೆ ಎನ್ನುತ್ತಾರೆ. ಆದರೆ ಇದು ಕೇವಲ ವದಂತಿ ಅಷ್ಟೆ. ಹೌದು ನೀವು ಕೇಳಿದ್ದು ನಿಜ. ಹಾಗಂತ ನಾವು ಹೇಳುತ್ತಿಲ್ಲ. ವೈದ್ಯರೇ ಈ ರೀತಿ ಹೇಳಿದ್ದಾರೆ. ಪಪ್ಪಾಯ ಹಣ್ಣನ್ನು ತಿನ್ನುವುದರಿಂದ ಗರ್ಭಿಣಿಯರಿಗೆ ಏನೂ ಆಗಲ್ಲವಂತೆ. ಗರ್ಭಸ್ರಾವ ಆಗುತ್ತದೆ ಎಂಬುದು ಕೇವಲ ಭ್ರಮೆ ಎನ್ನುತ್ತಿದ್ದಾರೆ ವೈದ್ಯರು. ನಿಜವಾಗಿ ಗರ್ಭಿಣಿಯರು ಪಪ್ಪಾಯ ತಿನ್ನುವುದರಿಂದ ತುಂಬಾ ಒಳ್ಳೆಯದಾಗುತ್ತದೆ ಎಂದು ವೈದ್ಯರು ಹೇಳುತ್ತಿದ್ದಾರೆ.

ಗರ್ಭಿಣಿಯರು ಪಪ್ಪಾಯ ಹಣ್ಣು ತಿಂದರೆ ಗರ್ಭಸ್ಥ ಶಿಶುವಿಗೆ ಅಗತ್ಯವಾಗುವ ಮುಖ್ಯವಾದ ವಿಟಮಿನ್‌ಗಳು, ಮಿನರಲ್ಸ್ ಸಿಗುತ್ತವೆ. ಇದರಿಂದ ಮಗುವಿನ ಬೆಳವಣಿಗೆಗೆ ತುಂಬಾ ಅನುಕೂಲವಾಗುತ್ತದೆ. ಮಗುವಿಗೆ ಇರುವ ಅನಾರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಗರ್ಭಿಣಿಯರು ಸಹ ಪಪ್ಪಾಯಿ ಹಣ್ಣನ್ನು ತಿಂದರೆ ಶಕ್ತಿ ಲಭಿಸುತ್ತದೆ. ಆದರೆ ಗರ್ಭಿಣಿಯರು ಈ ಹಣ್ಣು ತಿಂದರೆ ಎಚ್ಚರಿಕೆಯಿಂದ ಇರಬೇಕು. ಯಾಕೆಂದರೆ ಹಸಿ ಪಪ್ಪಾಯಿಯನ್ನು ತಿನ್ನಬಾರದು. ಅದರಲ್ಲಿ ಪಪಾಯಿನ್ ಎಂಬ ಎಂಜೈಮ್ ಇರುತ್ತದೆ. ಇದು ಗರ್ಭದ ಚೀಲ ಮಡಿಚಿಕೊಳ್ಳುವಂತೆ ಮಾಡುತ್ತದೆ. ಆದಕಾರಣ ಹಸಿ ಪಪ್ಪಾಯವನ್ನು ತಿನ್ನಬಾರದು. ಚೆನ್ನಾಗಿ ಹಣ್ಣಾದ ಪಪ್ಪಾಯ ಮಾತ್ರ ತಿನ್ನಬೇಕಾಗಿರುತ್ತದೆ.

SHARE