ಟೀ ಮಾರುವ ಈತನ ತಿಂಗಳ ಸಂಪಾದನೆ 12 ಲಕ್ಷಗಳು..! ಹೇಗೆ ಅಂತ ಗೊತ್ತಾದರೆ ಶಾಕ್ ಆಗ್ತೀರ…!

ಹೌದಾ… ಚಹ ಮಾರುವಾತ ತಿಂಗಳಿಗೆ ರೂ.12 ಲಕ್ಷ ಸಂಪಾದಿಸುತ್ತಾನಾ..? ಎಂದರೆ..ಹೌದು, ನಿಜ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಫೇಕ್ ಮೆಸೇಜ್ ಅಲ್ಲ. ಸಾಕ್ಷಾತ್ ಚಹಾ ಅಂಗಡಿಯ ಯಜಮಾನ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ತಾನು ಚಹ ಮಾರುವ ಮೂಲಕ ತಿಂಗಳಿಗೆ ರೂ.10 ಲಕ್ಷಗಳಿಂದ ರೂ.12 ಲಕ್ಷಗಳವರೆಗೆ ಸಂಪಾದನೆ ಮಾಡುತ್ತಿದ್ದೀರಿ ಎಂದಿದ್ದಾನೆ. ನೀವು ನಂಬದಿದ್ದರೂ ಇದು ನಿಜ. ಇದೇನಿದು ಕೇವಲ ಚಹ ಮಾರುವುದರಿಂದ ಇಷ್ಟು ಹಣ ಬರುತ್ತದಾ..? ಎಂದರೆ ಹೌದು ಬರುತ್ತದೆ. ಆದರೆ ಆ ಚಹವನ್ನು ಎಲ್ಲರೂ ಮಾರಿದಂತೆ ಮಾರಬಾರದು..!

ಆತನ ಹೆಸರು ನವ್‍ನಾಥ್ ಯೆವ್ಲೆ. ಮಹಾರಾಷ್ಟ್ರದಲ್ಲಿನ ಪುಣೆ ನಿವಾಸಿ. 2011ರಲ್ಲಿ ಈತನು ಅಲ್ಲಿನ ಯೆವ್ಲೆ ಟೀ ಹೌಸ್ ಹೆಸರಿನಲ್ಲಿ ಒಂದು ಚಹ ಮಳಿಗೆ ಆರಂಭಿಸಿದ. ಆದರೆ ಅದನ್ನು ಆರಂಭಿಸುವುದಕ್ಕೂ ಮುನ್ನ ಆತ ತುಂಬಾ ಕಷ್ಟಪಟ್ಟ. ಯಾಕೆಂದರೆ… ಎಲ್ಲರೂ ತೆರೆಯುವಂತೆ ತಾನೂ ಸಹ ಒಂದು ಟೀ ಸ್ಟಾಲ್ ಇಟ್ಟು ಎಲ್ಲರೂ ಮಾರಿದಂತೆ ಸಾಮಾನ್ಯ ಟೀ ಮಾರಿದರೆ ತನಗೆ ಏನು ಲಾಭ ಬರುತ್ತದೆ. ತನಗೆ ಹೆಸರು ಹೇಗೆ ಬರುತ್ತದೆ, ಎಲ್ಲಿಯಾದರೂ ಸ್ಪೆಷಲ್ ಚಹ ಸಿಕ್ಕಿದರೆ ಅಲ್ಲವೇ, ನಾಲ್ಕು ಮಂದಿ ಹೇಳಿಕೊಳ್ಳುವುದು, ಲಾಭ ಬರುವುದು. ಹಾಗಾಗಿ ನವನಾಥ್ ತನ್ನ ಚಹಾ ಸ್ಟಾಲನ್ನು ಓಪನ್ ಮಾಡುವುದಕ್ಕೂ ಮುನ್ನ 4 ವರ್ಷಗಳ ಕಾಲ ಗ್ರೌಂಡ್ ವರ್ಕ್ ಮಾಡಿದ. ಪುಣೆ ಎಲ್ಲಾ ಸುತ್ತಾಡಿದ. ಎಲ್ಲಾ ರೀತಿಯ ಚಹಾ ಟೇಸ್ಟ್ ಮಾಡಿದ. ಕೊನೆಗೆ ತನ್ನದೇ ಬ್ರ್ಯಾಂಡ್ ಕ್ರಿಯೇಟ್ ಮಾಡುವಂತೆ ತಾನು ಒಂದು ಸ್ಪೆಷಲ್ ಚಹಾ ತಯಾರಿಸಿ ಮಾರಾಟ ಮಾಡಲು ಆರಂಭಿಸಿದ.

ಆ ರೀತಿ 2011ರಲ್ಲಿ ನವ್‌ನಾಥ್ ತನ್ನ ಯೆವ್ಲೆ ಟೀ ಹೌಸ್ ಚಹಾ ಮಳಿಗೆ ಪ್ರಾರಂಭಿಸಿದರು. ಅದು ಎಲ್ಲರಿಗೂ ಇಷ್ಟವಾಯಿತು. ಬಾಯಿಂದ ಬಾಯಿಗೆ ಪ್ರಚಾರ ಸಿಕ್ಕಿತು. ಇದರಿಂದ ನವ್‌ನಾಥ್ ಚಹಾಗೆ ಗ್ರಾಹಕರು ಹೆಚ್ಚಾದರು. ಇನ್ನು ನವ್‌ನಾಥ್ ಹಿಂತಿರುಗಿ ನೋಡಲಿಲ್ಲ. ಆ ರೀತಿಯಾಗಿ ಚಹಾ ಬಿಜಿನೆಸ್ ದಿನದಿಂದ ದಿನಕ್ಕೆ ಬೆಳೆಯುತ್ತಾ ಸಾಗಿತು. ಇದೀಗ ನವ್ ನಾಥ್ ಪುಣೆಯಲ್ಲಿ ಎರಡನೇ ಬ್ರಾಂಚ್ ಓಪನ್ ಮಾಡಿದ್ದಾನೆ. ಎರಡೂ ಸ್ಟಾಲ್‌ಗಳಿಂದ ದಿನಕ್ಕೆ 3 ರಿಂದ 4 ಸಾವಿರ ಕಪ್ಪುಗಳು, ಪಕೋಡಾಗಳು ಮಾರಾಟವಾಗುತ್ತಿವೆ. ತನಗೆ ತಿಂಗಳಿಗೆ ರೂ.10 ಲಕ್ಷಗಳಿಂದ ರೂ.12 ಲಕ್ಷಗಳ ತನಕ ಆದಾಯ ಬರುತ್ತದೆ ಎನ್ನುತ್ತಿದ್ದಾರೆ. ಇನ್ನು ತನ್ನ ಚಹಾಗೆ ಅಂತಾರಾಷ್ಟ್ರೀಯ ಮಾನ್ಯತೆ ತರಲು ಪ್ರಯತ್ನಿಸುತ್ತಿದ್ದಾರೆ. ಆತನ ಕನಸು ನೆರವೇರಲಿ ಎಂದು ನಾವೂ ಬಯಸೋಣ. ಅದೇನೇ ಇರಲಿ.. ಆ ರೀತಿ ಚಹಾ ಮಾರುತ್ತಾ ತಿಂಗಳಿಗೆ ಲಕ್ಷ ರೂಪಾಯಿ ಸಂಪಾದಿಸುವುದು ಎಂದರೆ ಸುಮ್ಮನೆ ಅಲ್ಲ…!

SHARE