‘ದರ್ಶನ್ ಮತ್ತು ರಕ್ಷಿತಾ’ ಮತ್ತೆ ಹೊಂದಾಗುತ್ತಾ ಈ ಸೂಪರ್ ಹಿಟ್ ಜೋಡಿ..?

ಕನ್ನಡದ ಬೆಸ್ಟ್ ಜೋಡಿಗಳಲ್ಲಿ ನಟ ದರ್ಶನ್ ಮತ್ತು ರಕ್ಷಿತಾ ಜೋಡಿ ಕೂಡ ಒಂದಾಗಿತ್ತು. ಒಂದು ಕಾಲದಲ್ಲಿ ಈ ಇಬ್ಬರು ಒಟ್ಟಿಗೆ ತೆರೆ ಮೇಲೆ ಬಂದರೆ ಮ್ಯಾಜಿಕ್ ಸೃಷ್ಟಿ ಆಗುತಿತ್ತು. ದರ್ಶನ್ ಮತ್ತು ರಕ್ಷಿತಾ ಒಟ್ಟಿಗೆ ‘ಕಲಾಸಿಪಾಳ್ಯ’, ‘ಅಯ್ಯ’, ‘ಮಂಡ್ಯ’, ‘ಸುಂಟರಗಾಳಿ’ ಸಿನಿಮಾದಲ್ಲಿ ನಟಿಸಿದ್ದರು. ಈ ಎಲ್ಲ ಸಿನಿಮಾಗಳು ಹಿಟ್ ಆಗಿತ್ತು.

ರಕ್ಷಿತಾ ಸದ್ಯ ನಿರ್ಮಾಪಕಿಯಾಗಿ ಬಿಜಿ ಇದ್ದಾರೆ. ಅಲ್ಲದೆ ಅವರು ತೆರೆ ಮೇಲೆ ಬಂದು ಅನೇಕ ವರ್ಷಗಳೆ ಉರುಳಿವೆ. ಆದರೆ ಈಗ ಮತ್ತೆ ದರ್ಶನ್ ಸಿನಿಮಾದಲ್ಲಿ ನಟಿಸಬೇಕು ಎನ್ನುವ ಇಷ್ಟ ರಕ್ಷಿತಾಗೆ ಇದೆಯಂತೆ. ಈ ವಿಷಯ ತಿಳಿದಿದ್ದು, ‘ನಂ 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದಲ್ಲಿ. ಹೌದು, ಈ ಕಾರ್ಯಕ್ರಮಕ್ಕೆ ಇದೀಗ ನಟಿ ರಕ್ಷಿತಾ ಮತ್ತು ರಾಗಿಣಿ ಆಗಮಿಸಿದ್ದಾರೆ.

ಕಾರ್ಯಕ್ರಮದಲ್ಲಿ ಶಿವಣ್ಣ ”ಈಗಿನ ಹೀರೋಗಳಲ್ಲಿ ನೀವು ಯಾರ ಜೊತೆಗೆ ಮತ್ತೆ ನಟನೆ ಮಾಡಲು ಇಷ್ಟ ಪಡುತ್ತೀರಾ ?” ಎಂದು ಪ್ರಶ್ನೆ ಕೇಳಿದರು. ಆಗ ರಕ್ಷಿತಾ ”ನನಗೆ ದರ್ಶನ್ ಜೊತೆಗೆ ಮತ್ತೆ ನಟಿಸುವ ಇಷ್ಟ ಇದೆ” ಎಂದರು. ಆಗ ಶಿವಣ್ಣ ಯಾಕೆ ನಮ್ಮ ಜೊತೆಗೆ ನಟಿಸಲು ಇಷ್ಟ ಇಲ್ವಾ ಎಂದು ತಮಾಷೆ ಮಾಡಿದರು

ಅಂದಹಾಗೆ, ನಟಿ ರಕ್ಷಿತಾ ಮತ್ತು ರಾಗಿಣಿ ದ್ವಿವೇದಿ ಅವರ ‘ನಂ 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದ ಸಂಚಿಕೆ ಇದೇ ಭಾನುವಾರ ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗಲಿದೆ.

SHARE