ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ರಿಯಲ್ ಸ್ಪೈಡರ್ ಮ್ಯಾನ್ ಈಗೇನು ಮಾಡುತ್ತಿದ್ದಾನೆ ಗೊತ್ತಾ? ವಿಡಿಯೋ ನೋಡಿ

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ರಿಯಲ್ ಸ್ಪೈಡರ್ ಮ್ಯಾನ್ ಹವಾ ಇತ್ತೀಚೆಗೆ ಭಾರಿ ಸದ್ದು ಮಾಡಿದ್ದು ಗೊತ್ತೇ ಇದೆ. ಈ ವಿಡಿಯೋವನ್ನು ಇದುವರೆಗೆ 2 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇಂತಹ ರಿಯಲ್ ಹೀರೋನನ್ನು ನೋಡುವುದು ತುಂಬಾ ಅಪರೂಪ. 22 ವರ್ಷಗಳ ಯುವಕ “ಸ್ಪೈಡರ್‌ಮ್ಯಾನ್” Mamoudou Gassama ಒಂದೇ ದಿನದಲ್ಲಿ ಜಗತ್ತಿನಲ್ಲೇ ಹೀರೋ ಆದರು. ಯಾಕೆ ಎಂದು ಗೊತ್ತಾಗಬೇಕಾದರೆ ನೀವೂ ವಿಡಿಯೋ ನೋಡಬೇಕಾದದ್ದೇ. ಬಾಲ್ಕನಿಯಲ್ಲಿ ನೇತಾಡುತ್ತಿದ್ದ ಬಾಲಕನನ್ನು ನಾಲ್ಕನೇ ಮಹಡಿಗೆ ಸ್ಪೈಡರ್‌ಮ್ಯಾನ್ ರೀತಿ ಹತ್ತಿ ರಕ್ಷಿಸಿದ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಇದು ಸಖತ್ ವೈರಲ್ ಆಗಿದೆ. ಬಾಲಕನ ಪೋಷಕರು ಆತನನ್ನು ಮನಸಾರೆ ಹಾಡಿ ಹೊಗಳುತ್ತಿದ್ದಾರೆ. ಇನ್ನೊಂದು ಕಡೆ ಫ್ರೆಂಚ್ ಪೌರತ್ವ ಹಾಗೂ ಉದ್ಯೋಗವನ್ನು ನೀಡಲು ಫ್ರೆಂಚ್ ಸರಕಾರ ಮುಂದಾಗಿದೆ.

ಚಿಕ್ಕಮಕ್ಕಳು ಎಂದರೆ ತನಗೆ ತುಂಬಾ ಇಷ್ಟವೆಂದು… ಬಾಲಕನನ್ನು ನೋಡಿದ ಕೂಡಲೆ ತಾನು ಒಂದು ನಿಮಿಷವೂ ಆಲೋಚಿಸಲಿಲ್ಲ. ಅವನನ್ನು ರಕ್ಷಿಸಲು ಪ್ರಯತ್ನಿಸಿದ್ದಾಗಿ ಹೇಳಿದ್ದಾನೆ.

ಬಾಲಕ ಬಾಲ್ಕನಿ ಒಳಗೆ ಹೇಗೆ ಹೋದ ಎಂದು ಪೊಲೀಸರು ತನಿಖೆ ಮಾಡಿದರೆ… ಬಾಲಕನ ತಂದೆ ಮಗುವನ್ನು ಮನೆಯಲ್ಲೇ ಬಿಟ್ಟು ಪೋಕೆಮ್ಯಾನ್ ಆಟ ಆಡಿಕೊಳ್ಳುತ್ತಿದ್ದನಂತೆ.

watch video :

Mamoudou Gassama ತನಗೆ ಫ್ರೆಂಚ್ ಸರಕಾರ ನೀಡಿರುವ ಫೈರ್ ರೆಸ್ಕ್ಯೂವರ್ ಉದ್ಯೋಗ ಮಾಡಲು ತನಗೆ ತುಂಬ ಖುಷಿಯಾಗಿದೆ ಎಂದಿದ್ದಾರೆ. ಮರುದಿನವೇ ಫೈರ್ ರೆಸ್ಕ್ಯೂವರ್ ಉದ್ಯೋಗಕ್ಕೆ ಆತ ಜಾಯಿನ್ ಆಗಿದ್ದಾನೆ. ಅನಧಿಕೃತವಾಗಿ ಫ್ರೆಂಚ್ ದೇಶಕ್ಕೆ ಪ್ರವೇಶಿಸಿ ತನ್ನ ಪ್ರಾಣವನ್ನು ಪಣಕ್ಕಿಟ್ಟು ಮಗುವನ್ನು ರಕ್ಷಿಸಿದ ಈತ ಈಗ ಜಗತ್ತಿನ ಹೀರೋ ಅನ್ನಿಸಿಕೊಂಡಿದ್ದಾನೆ.

SHARE