ಬಳೆಗಳ ಬಗ್ಗೆ ಈ ವಿಚಾರಗಳನ್ನು ತಿಳ್ಕೊಂಡ್ರೆ, ಈಗ್ಲೇ ಹೋಗಿ ಬಳೆ ಕೊಂಡ್ಕೊತೀರಾ !!

’ಬಳೆ’ ಎಂಬ ಪದವು ಸಂಸ್ಕೃತದಿಂದ ಬಂದಿರುತ್ತದೆ, ’ಬಂಗ್ರಿ’ ಎಂಬ ಪದದ ಅರ್ಥ, ತೋಳನ್ನು ಅಲಂಕರಿಸುವ ಒಂದು ಆಭರಣ ಎಂದರ್ಥ. ಕಾಲ್ಕಡಗ ಅಥವಾ ಕಾಲಂದಿಗೆಯ ಶಬ್ದವು ತಮ್ಮ ಕಡೆಗೆ ಬಹುತೇಕ ಮಂದಿಯ ಗಮನವನ್ನು ಸೆಳೆಯುವ ಉದ್ದೇಶವನ್ನು ಹೊಂದಿರುತ್ತದೆ. ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಬ್ಬ ಮಹಿಳೆಯು ಬಳೆಯನ್ನು ಧರಿಸುತ್ತಾಳೆ. ಇದು ಏಕೆಂದು ನೀವು ತಿಳಿದುಕೊಳ್ಳಲು ಬಯಸುವಿರಾ? ಹೌದು ಎಂದಾದರೆ ಮುಂದೆ ಓದಿ…

ಪುರುಷರೊಂದಿಗೆ ಹೋಲಿಸಿದರೆ ಮಹಿಳೆಯ ಮೂಳೆಗಳು ದುರ್ಬಲವಾಗಿರುತ್ತವೆ ಮತ್ತು ನಾಜೂಕಾಗಿರುತ್ತವೆ. ಬಳೆಗಳನ್ನು ಧರಿಸುವುದರಿಂದ ಮೂಳೆಗಳಿಗೆ ಶಕ್ತಿಯು ಒದಗುತ್ತದೆ ಮತ್ತು ಅದು ಮಹಿಳೆಯರ ಉತ್ತಮ ಆರೋಗ್ಯವನ್ನು ಕಾಪಾಡುತ್ತದೆ ಎಂದು ನಂಬಲಾಗಿದೆ.

ಚಿನ್ನ ಅಥವಾ ಬೆಳ್ಳಿ ಮುಂತಾದ ಬೆಲೆಬಾಳುವ ಲೋಹಗಳನ್ನು ಧರಿಸಿದ ಮಹಿಳೆಯರಿಗೆ ಒಂದು ಬಗೆಯ ಧನಾತ್ಮಕ ಕಂಪನಗಳು ಅವರ ಸುತ್ತ ರಕ್ಷಣೆಯನು ಒದಗಿಸುತ್ತವೆ.

ಹೊಂದಿದೆ. ಚಿನ್ನ ಮತ್ತು ಬೆಳ್ಳಿಯಂತಹ ಲೋಹಗಳ ಭಸ್ಮವನ್ನು ಬಳಸುವ ಆಯುರ್ವೇದವು ಶಕ್ತಿಯ ಥೆರಪಿಯನ್ನು ನೀಡುತ್ತದೆ. ಇದರ ಸ್ಪಷ್ಟವಾದ ಅರ್ಥವೇನೆಂದರೆ, ಇದು ಪ್ರಬಲವೂ ಮತ್ತು ಶಕ್ತಿಯುತವೂ ಆಗಿದ್ದು, ಬಳೆಯ ರೂಪದಲ್ಲಿ ಧರಿಸುವಂತಹ ಮಹಿಳೆಗೆ ತನ್ನ ಶಕ್ತಿಯನ್ನು ಹಂಚುತ್ತದೆ.

ಒಂದು ಪೌರಾಣಿಕ ನಂಬಿಕೆ ಇದೆ. ಪುರಾಣದ ಪ್ರಕಾರ, ಮಹಿಳೆಯು ತನ್ನ ಪತಿಯ ಸುರಕ್ಷತೆಗಾಗಿ ಬಳೆಗಳನ್ನು ಧರಿಸಿರಬೇಕು ಮತ್ತು ಇದು ತನ್ನ ಪತಿಯ ವಯಸ್ಸನ್ನು ಹೆಚ್ಚಿಸಬಲ್ಲದು.

ಒಂದಕ್ಕೊಂದು ತಾಗುವ ಮೂಲಕ ಬಳೆಗಳಿಂದ ಉಂಟಾಗುವ ಬಳೆಗಳ ಕಿಣಿಕಿಣಿ ಶಬ್ದವು ಋಣಾತ್ಮಕ ಕಂಪನಗಳನ್ನು ದೂರವಿರಿಸುತ್ತದೆ ಹಾಗೂ ಅನಪೇಕ್ಷಿತ ಶಕ್ತಿಯು ಹತ್ತಿರ ಸುಳಿಯದಂತೆ ನಿಮ್ಮ ಮನೆಯಿಂದ ದೂರವಿರುತ್ತದೆ.

ಪುರುಷರನ್ನು ತಮ್ಮ ಮಿತಿಗಳಲ್ಲಿ ಇರಿಸಿಕೊಳ್ಳಲು ಬಳೆಗಳನ್ನು ಮಹಿಳೆಯರು ಧರಿಸುತ್ತಿದ್ದರು. ಪುರುಷರು ಈ ವ್ಯವಸ್ಥೆಯನ್ನು ಗೌರವಿಸಿದ್ದರು. ಅದಕ್ಕಾಗಿಯೇ ಅವರು ಬಳೆಗಳ ಕಿಣಿಕಿಣಿ ಧ್ವನಿ ಕೇಳಿದಾಗ ಮಹಿಳೆಗೆ ಮುಜುಗರಕ್ಕೆ ಒಳಗಾಗುವ ಯಾವುದೇ ಕೆಲಸವನ್ನು ತಕ್ಷಣವೇ ನಿಲ್ಲಿಸಿ ನಿಂತು ಬಿಡುತ್ತಿದ್ದರು.

ಬಳೆಗಳನ್ನು ಮಣಿಕಟ್ಟುಗಳಲ್ಲಿ ಮತ್ತು ಕಾಲ್ಕಡಗಗಳನ್ನು ಕಾಲುಗಳಲ್ಲಿ ಧರಿಸಿದಾಗ ಅವು ಮಹಿಳೆಯ ಜನನಾಂಗದ ಅಂಗಗಳ ಒತ್ತಡದ ಬಿಂದುಗಳನ್ನು ಉತ್ತೇಜಿಸುತ್ತವೆ. ಹೀಗೆ, ವಯಸ್ಸಾದ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಅಂಡಾಶಯಕ್ಕೆ ಸಂಬಂಧಿಸಿದ ಕೆಲವು ಆನಾರೋಗ್ಯಗಳನ್ನು ಎದುರಿಸುವಲ್ಲಿ ಇದು ಮುಖ್ಯ ಕಾರಣವಾಗಿದೆ.

ಬಳೆಗಳು ಮಣಿಕಟ್ಟಿನ ವಿರುದ್ಧ ನಿರಂತರವಾದ ಮತ್ತು ಸ್ಥಿರವಾದ ಘರ್ಷಣೆಯನ್ನು ಉಂಟುಮಾಡುತ್ತವೆ, ಇದರಿಂದ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತವೆ. ಇದಲ್ಲದೆ, ರಿಂಗ್-ಆಕಾರದ ಬಳೆಗಳಿಂದಾಗಿ ಹೊರ ಚರ್ಮದ ಮೂಲಕ ಹಾದುಹೋಗುವ ವಿದ್ಯುನ್ಮಾನವು ಮತ್ತೊಮ್ಮೆ ಅವರದೇ ದೇಹದೊಳ್ಳಕೆ ಹಿಂತಿರುಗುತ್ತದೆ. ಮತ್ತೇಕೆ ತಡ, ಬಳೆ ತೊಡಲು ಶುರು ಮಾಡಿ…

SHARE