ಹುಲಿಯ ಜತೆಗೆ ಹೋರಾಡಿ ಸೆಲ್ಫೀ ತೆಗೆದುಕೊಂಡ ವೀರನಾರಿ ರೂಪಾಲಿ

ಕೇವಲ ಒಂದು ಬಡಿಗೆಯನ್ನು ಆಯುಧವಾಗಿ ಬಳಸಿದ ರೂಪಾಲಿ.. ಹುಲಿಯ ಜತೆಗೆ ಹೋರಾಡಿ ಸ್ವಲ್ಪ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಕೆ ತುಂಬಾ ಅದೃಷ್ಟಶಾಲಿ ಎಂದು ವೈದ್ಯರು ಹೇಳಿದ್ದಾರೆ. ರೂಪಾಲಿ ಮೇಷ್ರಾಮ್ ವಯಸ್ಸು 23 ವರ್ಷಗಳು. ಆಕೆಯದು ಪಶ್ಚಿಮ ಮಹಾರಾಷ್ಟ್ರದ ಭಂಡಾರಾ ಜಿಲ್ಲೆ, ಸಾಕೋಲಿ ತಾಲೂಕು, ಉಸ್‌ಗಾಂ ಗ್ರಾಮ. ಕಳೆದ ವಾರ ಆಕಸ್ಮಿಕವಾಗಿ ತನ್ನ ಮೇಕೆ ಪ್ರಾಣಭಯದಿಂದ ಅರಚುವುದನ್ನು ಕೇಳಿ ಮನೆಯಿಂದ ಹೊರಬಂದು ನೋಡಿದಳು. ಹುಲಿಯೊಂದು ಮೇಕೆ ಮೇಲೆ ಎರಗುತ್ತಿರುದನ್ನು ನೋಡಿದಳು. ಆಕೆ ಕೂಡಲೆ ಒಂದು ಬಡಿಗೆ ತೆಗೆದುಕೊಂಡು ಹುಲಿಯನ್ನು ಹೊಡೆದಳು. ಹುಲಿ ಆಕೆಯ ಮೇಲೂ ಎರಗಿತು. ಅಷ್ಟರಲ್ಲಿ ಆಕೆ ತಾಯಿ ಸಹ ಅಲ್ಲಿಗೆ ಬಂದರು. ಹುಲಿ ಆಕೆ ಮೇಲೂ ದಾಳಿ ಮಾಡಿತು.

 

ರೂಪಾಲಿ ಹುಲಿಯ ಜತೆಗೆ ಹೋರಾಟ ಮುಂದುವರೆಸುತ್ತಿದ್ದರೆ.. ಅವರ ತಾಯಿ ರೂಪಾಲಿಯನ್ನು ಮನೆಯ ಒಳಗೆ ಎಳೆದೊಯ್ದು ಕಾಪಾಡಿದರು. ಇಬ್ಬರೂ ಗಾಯಗೊಂಡರು. ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಿದರು. ಇಬ್ಬರೂ ಚೇತರಿಸಿಕೊಂಡ ಬಳಿಕ ಮನೆಗೆ ಹೋದರು. ಆದರೆ ಅವರ ಮೇಕೆ ಮಾತ್ರ ಬದುಕುಳಿಯಲಿಲ್ಲ. ಹುಲಿ ದಾಳಿಯಲ್ಲಿ ರಕ್ತಸಿಕ್ತವಾಗಿ ತನ್ನ ರೂಪವನ್ನು ರೂಪಾಲಿ ಸೆಲ್ಫಿ ತೆಗೆದುಕೊಂಡರು. ಆ ಫೋಟೋಗಳು ಇತ್ತೀಚೆಗೆ ಬೆಳಕಿಗೆ ಬಂದಿವೆ.

ಆಸ್ಪತ್ರೆಯ ಡಿಸ್ಚಾರ್ಜ್ ರಿಪೋರ್ಟ್‌ನಲ್ಲಿ “ಕಾಡುಪ್ರಾಣಿ (ಹುಲಿ) ದಾಳಿ” ಎಂದು ಬರೆದಿದ್ದಾರೆ. ಹುಲಿಯೊಂದಿಗೆ ಹೋರಾಡಿದ ಆ ಯುವತಿ “ಅಸಾಮಾನ್ಯ ಧೈರ್ಯಶಾಲಿ” ಎಂದು ಆಕೆಗೆ ಚಿಕಿತ್ಸೆ ನೀಡಿದ ವೈದ್ಯರು ಪ್ರಶಂಸಿಸಿದ್ದಾರೆ. ಆದರೆ ಹುಲಿ ಆಕೆಯ ಮೇಲೆ ದಾಳಿ ಮಾಡಿದಾಗ ತನ್ನ ಕೋರೆಗಳಿಂದ ಗಾಯಗೊಳಿಸದ ಕಾರಣ ರೂಪಾಲಿ ಬದುಕಿದರೆಂದು ಆ ರೀತಿಯಲ್ಲಿ ಆಕೆ ಲಕ್ಕಿ ಎಂದು ಅವರು ಹೇಳಿದ್ದಾರೆ.

ಹುಲಿ ದಾಳಿಯಲ್ಲಿ ರೂಪಾಲಿ ತಲೆಗೆ, ಸೊಂಟಕ್ಕೆ, ಕೈಗಳಿಗೆ, ಕಾಲಿನ ಮೇಲೆ ಗಾಯಗಳಾಗಿವೆ. ಆದರೆ ಅವೆಲ್ಲಾ ಮೇಲೆ ಮೇಲೆ ಆಗಿರುವಂತಹ ಗಾಯಗಳಾಗಿರುವ ಕಾರಣ ಶೀಘ್ರ ಗುಣವಾಗುತ್ತವೆ. ತಲೆಗೆ ಗಾಯವಾಗಿದ್ದ ಕಾರಣ ಸಿಟಿ ಸ್ಕ್ಯಾನ್ ಮಾಡಿಸಿ.. ಕೆಲವು ದಿನ ವೈದ್ಯರ ನಿಗಾದಲ್ಲಿ ಇರಿಸಲಾಗಿತ್ತು. “ನನ್ನ ಮಗಳು ಸತ್ತು ಹೋಗುತ್ತಾಳೇನೋ ಎಂದು ನನಗೆ ಭಯವಾಗಿತ್ತು” ಎಂದು ಆಕೆ ತಾಯಿ ಜಿಜಾಬಾಯಿ ಬಿಬಿಸಿಗೆ ತಿಳಿಸಿದ್ದಾರೆ. ರಕ್ತಸೋರುತ್ತಿದ್ದ ನನ್ನ ಮಗಳು ಕೈಯಲ್ಲಿ ಚಿಕ್ಕ ಬಡಿಗೆ ಹಿಡಿದು ಹುಲಿಯೊಂದಿಗೆ ಹೋರಾಡುತ್ತಿರುವುದನ್ನು ನೋಡಿ ಮೈಯೆಲ್ಲಾ ಕಂಪಿಸಿತು” ಎಂದಿದ್ದಾರೆ.

ರೂಪಾಲಿ ತಲೆಗೆ ಆಗಿರುವ ಗಾಯಗಳು ಕಡಿಮೆಯಾಗಿವೆ… ಆಕೆ ತಾಯಿ ಸಹ ಚೇತರಿಸಿಕೊಳ್ಳುತ್ತಿದ್ದಾರೆ. ಹುಲಿಯೊಂದಿಗೆ ರೂಪಾಲಿ ಹೋರಾಡಿದ ಹತ್ತು ದಿನಗಳ ಬಳಿಕ ಆಕೆಯ ಗಾಯಗಳೆಲ್ಲಾ ವಾಸಿಯಾಗಿವೆ. ಹುಲಿ ದಾಳಿ ನಡೆದ ಕೂಡಲೆ ತಾವು ಫಾರೆಸ್ಟ್ ಗಾರ್ಡ್‌ಗೆ ಮಾಹಿತಿ ನೀಡಿದೆವು ಎಂದು ಹೇಳಿದ್ದಾರೆ. ಆದರೆ ಫಾರೆಸ್ಟ್ ಗಾರ್ಡ್ ಬರಲು 30 ನಿಮಿಷ ಬೇಕಾಯಿತು. ಅಷ್ಟರಲ್ಲಾಗಲೆ ಹುಲಿ ಮಾಯವಾಗಿತ್ತು. ಅರಣ್ಯದ ಪಕ್ಕದಲ್ಲಿರುವ ಇವರ ಗ್ರಾಮಕ್ಕೆ ಆಗಾಗ ವನ್ಯಮೃಗಗಳು ಬರುತ್ತಲೇ ಇರುತ್ತವೆ.

SHARE